Site icon PowerTV

ಮನೆಗೆ ಬಿಡುವುದಾಗಿ ಹೇಳಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಕಾಮುಕ ಸ್ವಾಮೀಜಿ ಅಂದರ್​

ಚಿಕ್ಕೋಡಿ : ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಸ್ವಾಮೀಜಿಯೊಬ್ಬನನ್ನು ಪೊಲೀಸರು ಬಂದಿಸಿದ್ದು. ಬಂದಿತ ಕಾಮುಕ ಸ್ವಾಮೀಜಿಯನ್ನ ಲೋಕೇಶ್ವರ ಸ್ವಾಮೀಜಿ ಎಂದು ಗುರುತಿಸಲಾಗಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದ ಮಠದ ಲೋಕೇಶ್ವರ ಸ್ವಾಮಿಜಿ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದ್ದು. ಮೂಡಲಗಿ ತಾಲೂಕಿನ ಅಪ್ರಾಪ್ತ ಬಾಲಕಿ ಸ್ವಾಮೀಜಿ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಾಳೆ. ಘಟನೆ ಸಂಬಂಧ ಸ್ವಾಮೀಜಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ :KKRTC ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ; 18ಕ್ಕೂ ಹೆಚ್ಚು ಜನರಿಗೆ ಗಾಯ

ಏನಿದು ಪ್ರಕರಣ..!

ಸಂತ್ರಸ್ಥ ಬಾಲಕಿಯ ಕುಟುಂಬಕ್ಕೆ ಪರಿಚಿತನಾಗಿದ್ದ ಸ್ವಾಮೀಜಿ, ಆಗಾಗ ಸಂತ್ರಸ್ಥೆಯ ಮನೆಗೆ ಬಂದು ಹೋಗುತ್ತಿದ್ದ. ಅದೇ ರೀತಿ ಮನೆಗೆ ಹೊರಟ್ಟಿದ್ದ ಬಾಲಕಿಯನ್ನು ನೋಡಿದ ಕಾಮುಕ ಸ್ವಾಮಿ ‘ನಿಮ್ಮ ಮನೆಗೆ ಹೊಗುತ್ತಿದ್ದೇನೆ ಬಾ’ ಎಂದು ಹೇಳಿ ಕಾರು ಹತ್ತಿಸಿಕೊಂಡಿದ್ದ. ಆದರೆ ಮನೆ ಬಂದರು ಕಾರು ನಿಲ್ಲಿಸದೆ ಸ್ವಾಮೀಜಿ. ಬಾಗಲಕೋಟೆ ಮೂಲಕ ರಾಯಚೂರಿನತ್ತ ಪ್ರಯಾಣ ಬೆಳೆಸಿದ್ದ.

ರಾಯಚೂರು ನಗರದ ಲಾಡ್ಜ್​ಗೆ ಬಾಲಕಿಯನ್ನು ಕರೆದುಕೊಂಡಿದ್ದ ಕಾಮುಕ ಸ್ವಾಮೀಜಿ. ಲಾಡ್ಜ್​ನಲ್ಲಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದನು. ಅಲ್ಲಿಂದ ಬಾಲಕಿಯನ್ನು ಮಹಾಲಿಂಗ ಪುರ ಬಸ್​ ನಿಲ್ದಾಣಕ್ಕೆ ಬಂದು ಬಿಟ್ಟು ಹೋಗಿದ್ದ ಸ್ವಾಮೀಜಿ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ಬಾಲಕಿಯನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದನು. ಇದನ್ನೂ ಓದಿ :ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ..!

ಆದರೆ ಘಟನೆ ಬಗ್ಗೆ ಬಾಲಕಿ ಪೋಷಕರಿಗೆ ಮಾಹಿತಿ ನೀಡಿದ್ದು. ಪೋಷಕರು ಕೂಡಲೇ ಮೂಡಲಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಕ್ಸೋ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದು. ಜೈಲಿಗೆ ಅಟ್ಟಿದ್ದಾರೆ.

Exit mobile version