Site icon PowerTV

16 ವರ್ಷಗಳಲ್ಲಿ ಮೊದಲ ಭಾರಿಗೆ ವೇಗವಾಗಿ ಕೇರಳ ಪ್ರವೇಶಿಸಿ ಮುಂಗಾರು: ರೆಡ್ ಅಲರ್ಟ್ ಘೋಷಣೆ

ನೈಋತ್ಯ ಮಾನ್ಸೂನ್​ ಮಾರುತಗಳು (ಮುಂಗಾರು ಮಾರುತ) 16 ವರ್ಷಗಳಲ್ಲಿ ಮೊದಲ ಬಾರಿಗೆ ಅವಧಿಗೂ ಮುನ್ನ ಕೇರಳ ಪ್ರವೇಶಿಸಿದ್ದು. ಸಾಮಾನ್ಯ ವೇಳಾಪಟ್ಟಿಗಿಂತ ಎಂಟು ದಿನ ಮುಂಚಿತವಾಗಿ ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿವೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.

ಭಾರತೀಯ ಹವಮಾನ ಇಲಾಖೆ ಈ ಬಾರಿ ಮೇ. 27ರ ವೇಳೆಗೆ ಮಾನ್ಸೂನ್​ ಕೇರಳ ಪ್ರವೇಶಿಸಲಿದೆ ಎಂದು ಸೂಚನೆ ಹೊರಡಿಸಿತ್ತು. ಆದರೆ ನಿರೀಕ್ಷೆಗಿಂತ  8 ದಿನ ಮುಂಚಿತವಾಗಿಯೇ ಮಾನ್ಸೂನ್​ ಮಾರುತಗಳು ಕೇರಳ ಪ್ರವೇಶಿಸಿದ್ದು. ಹವಮಾನ ಇಲಾಖೆ ಕರಾವಳಿ ತೀರ ಪ್ರದೇಶಗಳಲ್ಲಿ ರೆಡ್​ ಅಲರ್ಟ್​ ಘೋಷಿಸಿದೆ. ಇದನ್ನೂ ಓದಿ :ಅಭಿವೃದ್ದಿಗೆ ಹಣ ಕೊಡಿ ಅಂದ್ರೆ, ತಮನ್ನಾಗೆ 6 ಕೋಟಿ ಕೊಡ್ತಿದ್ದಾರೆ: ಬಿ.ವೈ ವಿಜಯೇಂದ್ರ

2009ರ ನಂತರ ನಂತರ ಮೊದಲ ಬಾರಿಗೆ ಮಾನ್ಸೂನ್ ಮಾರುತಗಳು ಇಷ್ಟು ಬೇಗ ಕೇರಳ ಪ್ರವೇಶಿಸಿದ್ದು. 1990ರಲ್ಲಿ ಮೇ. 19ರಂದು ಮಾನ್ಸೂನ್​ ಮಾರುತಗಳು ಕರಾವಳಿ ಪ್ರವೇಶಿಸಿದ್ದವು. ನೈರುತ್ಯ ಮಾನ್ಸೂನ್​ ಮಾರುತಗಳು ಭಾರತದಲ್ಲಿ ಶೇ.70% ಮಳೆಯನ್ನು ಸುರಿಸಲಿದ್ದು. ಈ ಮಳೆ ಕೃಷಿಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ.

ಇದನ್ನೂ ಓದಿ :ಕೋವಿಡ್​ ಹೆಚ್ಚಳ: ಜನರ ಅಹವಾಲು ಸ್ವೀಕರಿಸಲು ಮಾಸ್ಕ್​ ಧರಿಸಿ ಬಂದ CM

ಕೇರಳ ಪ್ರವೇಶಿಸಿರುವ ಮಾನ್ಸೂನ್​ ಮಾರುತಗಳು ಬಲಗೊಂಡಿದ್ದು. ಜೂನ್​ ತಿಂಗಳ ಆರಂಭದಲ್ಲಿ ದೇಶದ ಉಳಿದ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ, ಜುಲೈ ಮಧ್ಯದ ವೇಳೆಗೆ ಮಾನ್ಸೂನ್​ ಮಾರುತ ದೇಶ ಪೂರ್ತಿ ಆವರಿಸಲಿದೆ ಎಂದು ಭಾರತೀಯ ಹವಮಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕೇರಳ, ಕರ್ನಾಟಕದ ಕರಾವಳಿ, ಗೋವಾ ಮತ್ತು ಗುಜರಾತ್‌ನಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

Exit mobile version