Site icon PowerTV

ಟೆಸ್ಟ್​ ಸರಣಿಗೆ ಭಾರತ ತಂಡ ಪ್ರಕಟ: ಶುಭಮನ್​ ಗಿಲ್​ಗೆ ಸಾರಥ್ಯ, ಮೂವರು ಕನ್ನಡಿಗರಿಗೆ ಅವಕಾಶ

powertvadmin
3 months ago

ಭಾರತ ಮತ್ತು ಇಂಗ್ಲೇಂಡ್​ ನಡುವಿನ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು. ಟೀಂ ಇಂಡಿಯಾಗೆ ನೂತನ ಸಾರಥಿಯಾಗಿ ಶುಭಮನ್​ ಗಿಲ್​ ಆಯ್ಕೆಯಾಗಿದ್ದಾರೆ. ಜೊತೆಗೆ ತಂಡದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದು. ಇದೇ ಜೂನ್​ 20ರಿಂದ ಟೆಸ್ಟ್​ ಸರಣಿ ಆರಂಭವಾಗಲಿದೆ.

ಭಾರತ ತಂಡದ ದಿಗ್ಗಜ ಆಟಗಾರರಾದ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಟೆಸ್ಟ್​ ಸರಣಿಗೆ ನಿವೃತ್ತಿ ಘೋಷಿಸಿದ್ದು. ಇದರ ನಡುವೆ ಇಂಗ್ಲೇಡ್​ ಪ್ರವಾಸಕ್ಕೆ ಟೆಸ್ಟ್​ ತಂಡ ಪ್ರಕಟವಾಗಿದೆ. ಭಾರತ ಟೆಸ್ಟ್​ ತಂಡಕ್ಕೆ ನೂತನ ಸಾರಥಿಯಾಗಿ ಶುಭಮನ್​ ಗಿಲ್ ಆಯ್ಕೆಯಾಗಿದ್ದು. ಉಪನಾಯಕನಾಗಿ ರಿಷಬ್​ ಪಂತ್​ ಆಯ್ಕೆಯಾಗಿದ್ದಾರೆ. ಜೊತೆಗೆ 8 ವರ್ಷದ ಬಳಿಕ ಕನ್ನಡಿಗ ಕರುಣ್​ ನಾಯರ್ ಟೆಸ್ಟ್​ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ :ಬಾಳೆಹಣ್ಣಿನ ಆಮಿಷವೊಡ್ಡಿ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊ*ಲೆ

Shubman Gill-led #TeamIndia are READY for an action-packed Test series ?

A look at the squad for India Men’s Tour of England ?#ENGvIND | @ShubmanGill pic.twitter.com/y2cnQoWIpq

— BCCI (@BCCI) May 24, 2025

ಟೆಸ್ಟ್​ ಸರಣಿಗೆ ಭಾರತ ತಂಡದ ಪಟ್ಟಿ..!

ಶುಭಮನ್ ಗಿಲ್ (ಸಿ), ರಿಷಭ್ ಪಂತ್ (ವಿಸಿ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಬಿ ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ ಜುರೆಲ್, ವಾಷಿಂಗ್ಟನ್ ಸುಂದರ್​, ಶಾರ್ದೂಲ್​ ಠಾಕೂರ್​, ಜಸ್ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್.

ಇದನ್ನೂ ಓದಿ :CT Ravi: ನಿಯತ್ತು ಇಲ್ಲದ ನಾಯಿಗಳು ಪಾಕಿಸ್ತಾನದ ಪರವಾಗಿ ಬೊಗಳುತ್ತವೆ: ಸಿಟಿ ರವಿ ಘರ್ಜನೆ

ಅಚ್ಚರಿಯ ರೀತಿಯಲ್ಲಿ ಟೆಸ್ಟ್​ ತಂಡದಿಂದ ವೇಗಿ ಮೊಹಮ್ಮದ್ ಶಮಿಯನ್ನು ತಂಡದಿಂದ ಹೊರಗೆ ಇಟ್ಟಿದ್ದು. ಶಮಿ ದೈಹಿಕವಾಗಿ ಫಿಟ್​ ಇಲ್ಲ ಎಂದು ಮುಖ್ಯ ಆಯ್ಕೆದಾರ ಅಜಿತ್​ ಅರರ್ಕರ್​ ತಿಳಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:

  • ಮೊದಲ ಟೆಸ್ಟ್: 20-24 ಜೂನ್, 2025 – ಹೆಡ್ಲಿಂಗ್ಲೆ, ಲೀಡ್ಸ್
  • 2ನೇ ಟೆಸ್ಟ್: ಜುಲೈ 2-6, 2025 – ಎಡ್ಜ್‌ಬಾಸ್ಟನ್, ಬರ್ಮಿಂಗ್​ಹ್ಯಾಮ್
  • 3ನೇ ಟೆಸ್ಟ್: ಜುಲೈ 10-14, 2025 – ಲಾರ್ಡ್ಸ್, ಲಂಡನ್
  • 4ನೇ ಟೆಸ್ಟ್: 23-27 ಜುಲೈ, 2025 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
  • 5ನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025 – ದಿ ಓವಲ್, ಲಂಡನ್
Categories: Uncategorized
Leave a Comment

PowerTV

Back to top
Exit mobile version