ಮಾನಹಾನಿ ಪ್ರಕರಣ: ರಾಹುಲ್​ ಗಾಂಧಿ ವಿರುದ್ದ ಜಾಮೀನು ರಹಿತ ವಾರೆಂಟ್​ ಜಾರಿ

ಜಾರ್ಖಂಡ್​: ಕೇಂದ್ರ ಗೃಹ ಸಚಿವ ಅಮಿತ್​ ಷಾ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದ ರಾಹಲ್​ ಗಾಂಧಿ ವಿರುದ್ದ ಜಾರ್ಖಂಡ್​ ವಿರುದ್ದ ಜಾಮೀನು ರಹಿತ ವಾರೆಂಟ್​ ಹೊರಡಿಸಿದ್ದು. ಜೂನ್​ 26ಕ್ಕೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಆದೇಶ ಹೊರಡಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

 ಏನಿದು ಪ್ರಕರಣ..!

2018 ರಲ್ಲಿ, ಕಾಂಗ್ರೆಸ್ ಅಧಿವೇಶನದ ವೇಳೆ, ರಾಹುಲ್ ಗಾಂಧಿ ಅವರು ಕೊಲೆ ಆರೋಪ ಹೊತ್ತಿರುವ ಯಾರಾದರೂ ಬಿಜೆಪಿ ಅಧ್ಯಕ್ಷರಾಗಬಹುದು ಎಂದು ಹೇಳಿಕೆ ನೀಡಿದ್ದರು. ಈ ಸಮಯದಲ್ಲಿ ಅಮಿತ್​ ಶಾ ರಾಷ್ಟ್ರ ಬಿಜೆಪಿ ಅಧ್ಯಕ್ಷರಾಗಿದ್ದರು. ಈ ಹೇಳಿಕೆಯನ್ನ ಖಂಡಿಸಿ ಬಿಜೆಪಿಯ ನಾಯಕ ಪ್ರತಾಪ್​ ಕಟಿಯಾರ್​ ಜುಲೈ 9, 2018 ರಂದು ದೂರು ದಾಖಲಿಸಿದ್ದರು. ಇದನ್ನೂ ಓದಿ :ಹಣಕ್ಕಾಗಿ ಭಾರತದ ಗೌಪ್ಯ ಮಾಹಿತಿಯನ್ನ ಪಾಕ್​ ಹಂಚಿಕೊಳ್ಳುತ್ತಿದ್ದ ದೇಶದ್ರೋಹಿ ಬಂಧನ

ಪ್ರಾರಂಭದಲ್ಲಿ ಈ ಪ್ರಕರಣವನ್ನು ಚೈಬಾಸಾದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಬಳಿಕ 2020 ರಲ್ಲಿ ಜಾರ್ಖಂಡ್ ಹೈಕೋರ್ಟ್ ಆದೇಶದ ನಂತರ ರಾಂಚಿಯ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಯ್ತು. ನಂತರ ಚೈಬಾಸಾದ ಸಂಸದ-ಶಾಸಕ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ನ್ಯಾಯಾಲಯವು ಪದೇ ಪದೇ ಸಮನ್ಸ್ ಜಾರಿ ಮಾಡಿದರೂ, ರಾಹುಲ್‌ ಗಾಂಧಿ ವಿಚಾರಣೆಗೆ ಹಾಜರಾಗಲಿಲ್ಲ. ಹೀಗಾಗಿ ನ್ಯಾಯಾಲಯವು ಮೊದಲು ಜಾಮೀನು ಸಹಿತ ವಾರಂಟ್ ಹೊರಡಿಸಿತು.

ಇದನ್ನೂ ಓದಿ :ಮಹಾಮಾರಿಯಿಂದ ಹೆಚ್ಚಿನ ಸಾವು-ನೋವು ಉಂಟಾಗಲಿದೆ; ಯುದ್ದದ ಭೀತಿ ಮತ್ತೆ ಆರಂಭವಾಗಲಿದೆ: ಕೋಡಿ ಶ್ರೀ

RELATED ARTICLES

Related Articles

TRENDING ARTICLES