Site icon PowerTV

ತಮನ್ನಾಗೆ 6 ಕೋಟಿ ಯಾಕೆ..?, ನಾನೇ ಫ್ರೀಯಾಗಿ ರಾಯಭಾರಿ ಆಗ್ತೀನಿ: ವಾಟಾಳ್​ ನಾಗರಾಜ್​

ರಾಮನಗರ: KSDLಗೆ ತಮನ್ನಾ ಭಾಟಿಯಾರನ್ನ ರಾಯಭಾರಿಯಾಗಿ ನೇಮಕ ಮಾಡಿರುವ ವಿಚಾರದ ಕುರಿತು ಮಾತನಾಡಿದ ವಾಟಾಳ್​ ನಾಗರಾಜ್​ ” ತಮ್ಮನ್ನಾನು ಬೇಡ, ಸುಮ್ಮನ್ನಾನು ಬೇಡ, ಅವರ ಬದಲು ನಾನೇ ಫ್ರೀಯಾಗಿ ರಾಯಭಾರಿ ಆಗ್ತೀನಿ ಅಂತ ಹೇಳಿಕೆ” ನೀಡಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ವಾಟಾಳ್​ ನಾಗರಾಜ್​ “ಸ್ಯಾಂಡಲ್ ಸೋಪಿನ ರಾಯಭಾರಿಯಾಗಿ ಯಾರು ಬೇಡ.
ತಮಿಳು, ತೆಲುಗಿನವರು ಯಾರು ಬೇಡ, ಮೈಸೂರು ಶ್ರೀ ಗಂಧ ಪ್ರಪಂಚದಲ್ಲೇ ಬ್ರಾಂಡ್. ಸಿಎಂ, ಡಿಸಿಎಂ, ಸೇರಿದಂತೆ ರಾಜ್ಯದ ಎಲ್ಲಾ ಮಂತ್ರಿಗಳು, ಶಾಸಕರು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿ. ಇವರೆಲ್ಲಾ ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿದ್ರೆ ಅದೇ ದೊಡ್ಡ ರಾಯಭಾರಿಯಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ:‘ರೇಪ್​ ಮಾಡಿರೋದ್ಕೆ, ಬಾಳ್​ ಕೊಟ್ಟಿದ್ದೀನಿ’: ಮಡೆನೂರು ಮನು ಆಡಿಯೋ ವೈರಲ್​..!

ಮುಂದುವರಿದು ಮಾತನಾಡಿದ ವಾಟಾಳ್​ ನಾಗರಾಜ್​ “ಮೈಸೂರ್​ ಸ್ಯಾಂಡಲ್​ಗೆ ರಾಯಭಾರಿಯಾಗಿ  ತಮನ್ನಾನು ಬೇಡ, ಸುಮನ್ನಾನು ಬೇಡ. ತಮನ್ನಾಗೆ 6 ಕೋಟಿ ಕೊಡುವುದರಲ್ಲಿ ದೊಡ್ಡ ರಾಜಕೀಯ ಇದೆ . ಸಿಕ್ಕ, ಸಿಕ್ಕವರಿಗೆ ಕೋಟಿ ಕೊಟ್ರೆ ನಾಳೆ ಕಾರ್ಖಾನೆ ಮುಚ್ಚಬೇಕಾಗುತ್ತದೆ. ಸ್ಯಾಂಡಲ್​ ಸೋಪ್​ ಕನ್ನಡಿಗರ ಸೋಪು, ಎಲ್ಲರು ಅದನ್ನು ಬಳಸಬೇಕು, ನಾನೇ ಫ್ರೀಯಾಗಿ ಸ್ಯಾಂಡಲ್​ ಸೋಪ್​ಗೆ ರಾಯಭಾರಿ ಆಗ್ತೀನಿ ಎಂದು ಹೇಳಿದರು.

ಇದನ್ನೂ ಓದಿ :ಕನ್ನಡದಲ್ಲೇ ಜನಪ್ರಿಯ ನಟಿಯರಿದ್ದರು, ತಮನ್ನಾ ಭಾಟಿಯಾ ಯಾಕೆ: ಸಂಸದ ಯದುವೀರ್ ಒಡೆಯರ್​

ತಮ್ಮನ್ನಾ ಭಾಟಿಯರನ್ನು KSDLಗೆ ರಾಯಭಾರಿಯಾಗಿ ನೇಮಿಸಿದ್ದು. 2 ವರ್ಷದ ಒಪ್ಪಂದಕ್ಕೆ 6.1 ಕೋಟಿ ಹಣಕ್ಕೆ ಒಪ್ಪಂದವಾಗಿದೆ. ಇನ್ನು ಈ ಕುರಿತು ಬೃಹತ್​ ಕೈಗಾರಿಕ ಸಚಿವ ಎಂ.ಬಿ ಪಾಟೀಲ್​ ಹೇಳಿಕೆ ನೀಡಿದ್ದು. ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಇಂತಹ ನಿರ್ಧಾರ ಮಾಡಿದ್ದೇವೆ. ಮೈಸೂರ್​ ಸ್ಯಾಂಡಲ್​ ಬ್ರ್ಯಾಂಡ್​ನ್ನು ಅಂತರ್​ ರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕಿದೆ ಎಂದು ಹೇಳಿದರು.

Exit mobile version