Site icon PowerTV

ರಿಯಲ್ ಎಸ್ಟೇಟ್ ಡೆವಲಪ್ಮೆಂಟ್ ಮಾಡೋಕೆ ಹೆಸರು ಚೇಂಜ್​ ಮಾಡಿದಿವಿ: ಡಿ.ಕೆ ಶಿವಕುಮಾರ್

ರಾಮನಗರ : ರಿಯಲ್​ ಎಸ್ಟೇಟ್​ ಡೆವಲಪ್​ ಮಾಡೋದಕ್ಕೆ ರಾಮನಗರದ ಹೆಸರು ಬದಲಾವಣೆ ಮಾಡಿದ್ದಾರೆ ಎಂಬ ಹೇಳಿಕೆ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್​ ” ಹೌದು, ರಿಯಲ್​ ಎಸ್ಟೇಟ್​ ಡೆವಲಪ್​ ಮಾಡೋದಕ್ಕೆ ಹೆಸರು ಬದಲಾವಣೆ ಮಾಡಿದ್ದೀವಿ ಅಂತ ಅಂದ್ಕೊಳ್ಳಿ. ನಮ್ಮ ಜನರ ಆಸ್ತಿ ಬೆಲೆ ಕೂಡ ಹೆಚ್ಚಾಗಬೇಕು ಎಂದು ಹೇಳಿದರು.

ವಿಜಯಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್​ ” ರಾಮನಗರ ಅದು ಬೆಂಗಳೂರು ಜಿಲ್ಲೆ. ಕುಮಾರಸ್ವಾಮಿ ಯಾಕೆ ಹಾಸನದಿಂದ ಇಲ್ಲಿಗೆ ಬಂದ್ರು. ಅವರು ಹಾಸನದಲ್ಲೇ ರಾಜಕಾರಣ ಮಾಡಬಹುದಿತ್ತು. ಮೊದಲು ಇವರ ಹೆಸರು ಬದಲಾವಣೆ ಮಾಡಿಕೊಳ್ಳಲಿ. ಹೆಚ್​.ಡಿ ಕುಮಾರ್​ಸ್ವಾಮಿ ಅಂತ ಇರೋ ಹೆಸರನ್ನ ಬದಲಾಯಿಸಿಕೊಳ್ಳಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ:ರಾಮಲಲ್ಲಾ ಶಿಲೆ ಸಿಕ್ಕ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ದಲಿತ ಸಂಘಟನೆ ವಿರೋಧ: ಫ್ಲೆಕ್ಸ್​ ಹರಿದು ದಾಂಧಲೆ

ಮುಂದುವರಿದು ಮಾತನಾಡಿದ ಡಿಕೆಶಿ “ನಾವು ಬೆಂಗಳೂರು ಜಿಲ್ಲೆಯವರು, ನಮಗೂ ನಮ್ಮದೆ ಆದ ಆಸೆ ಇದೆ. ಮದ್ರಾಸ್​ನ ಚೆನೈ ಅಂತ ಮಾಡಿದ್ದಾರೆ. ಗುಲ್ಬರ್ಗಾವನ್ನ ಕಲಬುರ್ಗಿ ಅಂತ ಯಾಕೆ ಮಾಡಿದ್ರು, ಅದೇ ರೀತಿ ಬೆಂಗಳೂರು ಜಿಲ್ಲೆ ಅಂತ ಮಾಡಿದ್ರೆ, ಇವರಿಗೆ ಏನು ತೊಂದ್ರೆ. ನಾವು ಮುಂದೆ ಏನ್​ ಮಾಡ್ತೀವಿ ಅಂತ ಕಾದು ನೋಡಲಿ ಎಂದು ಹೇಳಿದರು. ಇದನ್ನೂ ಓದಿ :ಪರಂ ವಿರುದ್ದದ ತನಿಖೆಗೆ ಮಹಾ ನಾಯಕನಿಂದ ಪತ್ರ: ರಾಜಕೀಯದಲ್ಲಿ ಇವೆಲ್ಲ ಇರುತ್ತೆ ಎಂದ ಜಾರಕಿಹೊಳಿ

ರಿಯಲ್​ ಎಸ್ಟೇಟ್​ ಡೆವಲಪ್ಮೆಂಟ್​ಗಾಗಿನೇ ಹೆಸರು ಬದಲಾವಣೆ..!

ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪದ ಕುರಿತು ಮಾತನಾಡಿದ ಡಿಕೆಶಿ ” ಹೌದ್ರಿ ರಿಯಲ್​ ಎಸ್ಟೇಟ್​ ಡೆವಲಪ್ಮೆಂಟ್​ಗಾಗಿನೇ ಹೆಸರು ಬದಲಾವಣೆ ಮಾಡಿದ್ದೀವಿ. ನಮ್ಮ ಬೆಂಗಳೂರು, ನಮ್ಮ ಹಳ್ಳಿಯವರು ಅಭಿವೃದ್ಧಿ ಆಗಬೇಕು, ಎಲ್ಲರ ಆಸ್ತಿಗಳ ಬೆಲೆ ಹೆಚ್ಚಾಗಬೇಕು. ರೈತರ ಬದುಕು ಒಳ್ಳೆಯದಾಗಬೇಕು, ಉದ್ಯೋಗ ಸಿಗಬೇಕು.
ಹೊರ ದೇಶದಿಂದ ಬಂದು ಬಂಡವಾಳ ಹಾಕಬೇಕು ಅದಕ್ಕಾಗಿ ಹೆಸರು ಬದಲಾವಣೆ ಮಾಡಿದ್ದೀವಿ ಎಂದು ಡಿಕೆ ಶಿವಕುಮಾರ್ ಹೇಳಿದರು.

Exit mobile version