Site icon PowerTV

ಗ್ಯಾಂಗ್​ರೇಪ್​ ಪ್ರಕರಣ: ಜೈಲಿನಿಂದ ಹೊರಬಂದು ರೋಡ್ ಶೋ ನಡೆಸಿದ್ದ ಆರೋಪಿಗಳು ಮರಳಿ ಜೈಲಿಗೆ

ಹಾವೇರಿ: ಹಾನ್​ಗಲ್ ಗ್ಯಾಂಗ್​ರೇಪ್ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿದ್ದ ಆರೋಪಿಗಳು, ಇದೀಗ ಮತ್ತೆ ಜೈಲು ಪಾಲಾಗಿದ್ದಾರೆ. ಬಿಎನ್​ಎಸ್​ನ ವಿವಿಧ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

ಕಳೆದ ಜನವರಿ 8, 2024 ರಂದು ಸಂತ್ರಸ್ಥೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಸೇರಿದ್ದ ಆರೋಪಿಗಳು. ಮೇ.20ರಂದು ಹಾವೇರಿ ಸೆಷನ್ಸ್​ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಗಳು 5 ಕಾರುಗಳಲ್ಲಿ ಜೈಲಿನಿಂದ, ಅಕ್ಕಿ ಆಲೂರಿನವರೆಗು ರೋಡ್​ ಶೋ ನಡೆಸಿದ್ದರು. ಇದರ ವಿಡಿಯೋ ಸೋಷಿಯಲ್​ ಮಿಡಿಯಾದಲ್ಲಿ ಸಾಕಷ್ಟು ವೈರಲ್​ ಆಗಿತ್ತು, ಇದಕ್ಕೆ ಜನರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ :ವೃದ್ದನ ಹೊಟ್ಟೆಯಲ್ಲಿತ್ತು 8000 ಕಲ್ಲುಗಳು: 1 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ವೈದ್ಯರು

ಪೊಲೀಸ್​ ವರಿಷ್ಠಾಧಿಕಾರಿ ಹೇಳಿಕೆ..!

ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶಕುಮಾರ್ ಘಟನೆ ಕುರಿತು ಹೇಳಿಕೆ ನೀಡಿದ್ದು. “ಆರೋಪಿಗಳಿಗೆ ದಿನಾಂಕ 20ರಂದು ಜಾಮೀನು ಮಂಜೂರು ಆಗಿತ್ತು. ಆ ಬಳಿಕ ಸಬ್ ಜೈಲಿನಿಂದ ಮೆರವಣಿಗೆ ಮಾಡಿ ವಿಡಿಯೋ ಮಾಡಿದ್ದಾರೆ. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಪ್ರಕರಣ ದಾಖಲಿಸಲಾಗಿದೆ. ಹಾನಗಲ್ ಠಾಣೆಯಲ್ಲಿ 189(2),192(2),281.351(3) 190 ಬಿಎನ್​ಎಸ್ ಆ್ಯಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿದೆ.

ಇದನ್ನೂ ಓದಿ:ತಮನ್ನಾಗೆ 6 ಕೋಟಿ ಯಾಕೆ..?, ನಾನೇ ಫ್ರೀಯಾಗಿ ರಾಯಭಾರಿ ಆಗ್ತೀನಿ: ವಾಟಾಳ್​ ನಾಗರಾಜ್​

5 ಜನ ಆರೋಪಿಗಳು ಹೀಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. 5 ಜನ ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರಿಪಡಿಸ್ತೀವಿ. ಆರೋಪಿಗಳಿಂದ ಕೋರ್ಟ್ ಜಾಮೀನು ನಿಯಮ ಉಲ್ಲಂಘನೆ ಆಗಿದೆ. ಜಾಮೀನು ರದ್ದು ಕೋರಿ ಅರ್ಜಿಯನ್ನ ಸಲ್ಲಿಸ್ತೀವಿ ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ವಿಜಯೇಂದ್ರ ಆಕ್ರೋಶ..!

ಇನ್ನು ಈ ಘಟನೆ ಬಗ್ಗೆ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಟ್ವಿಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು. “ಹಾವೇರಿಯ ಹಾನಗಲ್​ನಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪ ಹೊತ್ತ ಕ್ರಿಮಿನಲ್ ಹಿನ್ನೆಲೆಯ ದುರುಳರು ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಸಂದರ್ಭವನ್ನು ರೋಡ್ ಶೋ ಮೂಲಕ ಸಂಭ್ರಮಿಸಿರುವುದು ಹಾಗೂ ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಕಾನೂನು ಸುವ್ಯವಸ್ಥೆಯ ಸ್ಥಿತಿಯನ್ನು ಗಮನಿಸಿದರೆ ಈ ರಾಜ್ಯದಲ್ಲಿ ಸಭ್ಯ ನಾಗರೀಕ ಸಮಾಜ ಮರೆಯಾಗುತ್ತಿರುವ ಆತಂಕ ಉಂಟಾಗುತ್ತಿದೆ.

ಇದನ್ನೂ ಓದಿ :‘ರೇಪ್​ ಮಾಡಿರೋದ್ಕೆ, ಬಾಳ್​ ಕೊಟ್ಟಿದ್ದೀನಿ’: ಮಡೆನೂರು ಮನು ಆಡಿಯೋ ವೈರಲ್​..!

‘ಅಪರಾಧ ಎಸಗುವುದು ವಿಜಯದ ಸಂಕೇತ’ ಎಂಬಂತೆ ವರ್ತಿಸಿರುವ ರಕ್ಕಸೀ ಮನಸ್ಥಿತಿಯ ಈ ದುಷ್ಟರ ಅತಿರೇಕದ ವರ್ತನೆಯನ್ನು ಹತ್ತಿಕ್ಕುವಲ್ಲಿ ವಿಫಲವಾಗಿರುವ ಕಾಂಗ್ರೆಸ್​ ಸರ್ಕಾರದ ವ್ಯವಸ್ಥೆಯಲ್ಲಿ ಮಾನವಂತ ಹೆಣ್ಣು ಮಕ್ಕಳಿಗೆ, ಸಭ್ಯ ನಾಗರಿಕರಿಗೆ ರಕ್ಷಣೆ ಎನ್ನುವುದು ಮರೀಚಿಕೆ ಎಂಬುದನ್ನು ಸಂಕೇತಿಸಿದೆ. ಸುಸಂಸ್ಕೃತ ನಾಗರೀಕ ಸಮಾಜ ಭಯದಲ್ಲಿ ಬದುಕುವ ದುಸ್ಥಿತಿಗೆ ರಾಜ್ಯದ ಆಡಳಿತ ವ್ಯವಸ್ಥೆ ಸಾಗಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ.

ಜಾಮೀನು ದೊರೆತದ್ದೇ ತಾವು ಆರೋಪದಿಂದ ಖುಲಾಸೆ ಆಗಿರುವಂತೆ ವರ್ತಿಸಿರುವ 7 ಪ್ರಮುಖ ಆರೋಪಿಗಳ ಅಟ್ಟಹಾಸ ನ್ಯಾಯಾಂಗ ವ್ಯವಸ್ಥೆಯನ್ನು ನಾಚಿಸುವಂತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಅವಮಾನಿಸುವ ದೃಶ್ಯವನ್ನು ಕಂಡು ರಾಜ್ಯದ ಜನತೆ ಆತಂಕಿತರಾಗಿದ್ದಾರೆ. ಈ ರಾಜ್ಯದಲ್ಲಿ ಸರ್ಕಾರವೆಂಬುದೊಂದಿದೆ, ಅದರಲ್ಲಿ ಕಾನೂನು ಸುವ್ಯವಸ್ಥೆ ಇದೆ, ಪೋಲಿ ಪುಂಡರ ಕಪಿಮುಷ್ಠಿಯಲ್ಲಿ ಸಮಾಜವನ್ನು ಸಿಲುಕಿಸಿಲ್ಲ ಎಂಬ ಸಂದೇಶ ರವಾನಿಸುವ ಕನಿಷ್ಠ ಕಾಳಜಿ ಇದ್ದರೆ ಈ ಕೂಡಲೇ ರಾಜ್ಯ ಸರ್ಕಾರ ಸದರಿ ಪ್ರಕರಣದಲ್ಲಿ ಕಠಿಣ ಕ್ರಮ ಜರುಗಿಸಲಿ ಎಂದು ಒತ್ತಾಯಿಸುತ್ತೇನೆ.

Exit mobile version