Site icon PowerTV

Viral Video: ಸೆಕೆ ತಾಳಲಾರದೆ ಎಟಿಎಂ ಎಸಿಯಲ್ಲಿ ವಾಸ್ತವ್ಯ ಹೂಡಿದ ಕುಟುಂಬ

ಉತ್ತರ ಪ್ರದೇಶ: ಬಿಸಿಲಿನ ತಾಪಕ್ಕೆ ಬೇಸತ್ತ ಕುಟುಂಬವೊಂದು ಎಟಿಎಂನಲ್ಲಿ ಆಶ್ರಯ ಪಡೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು. ಸೆಖೆ ತಾಳಲಾಗದೆ ಈ ಕುಟುಂಬ ಎಟಿಎಂನಲ್ಲಿರುವ ಎಸಿಯ ಆಶ್ರಯ ಪಡೆದಿದೆ.

ಸಾಮಾನ್ಯವಾಗಿ ಭಾರೀ ಮಳೆ, ಗಾಳಿಗೆ ವಿದ್ಯುತ್ ವ್ಯತ್ಯಯ ಆಗೋದೆನೋ ಸಹಜ. ಆದರೆ ಸುಡು ಬಿಸಿಲಿನ ನಡುವೆ ಪದೇ ಪದೇ ವಿದ್ಯುತ್ ಕಡಿತವಾದರೆ ಜನರ ಪರಿಸ್ಥಿತಿ ಹೇಗಿರಬಹುದು ಒಮ್ಮೆ ಊಹಿಸಿ. ಆದರೆ ಉತ್ತರ ಪ್ರದೇಶದ ಝಾನ್ಸಿಯ ಜನರು ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಕಡಿತದಿಂದ ಹೈರಾಣಾಗಿ ಹೋಗಿದ್ದಾರೆ. ವಿದ್ಯುತ್ ಕಡಿತದ ವಿರುದ್ಧ ಜನರು ಪ್ರತಿಭಟನೆ ಮಾಡಿದರೂ ಏನು ಪ್ರಯೋಜನವಾಗುತ್ತಿಲ್ಲ. ಇದನ್ನೂ ಓದಿ :ಕೊಲೆ ಮಾಡಿ, ಶವವನ್ನು ಮೊಸಳೆಗೆ ಎಸೆಯುತ್ತಿದ್ದ ಸೀರಿಯಲ್​ ಕಿಲ್ಲರ್​ ಬಂಧನ..!

ಇದೀಗ ಕುಟುಂಬವೊಂದು ಈ ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಎಟಿಎಂ ಬೂತ್ ನಲ್ಲೇ ಆಶ್ರಯ ಪಡೆದುಕೊಂಡಿದೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು.  ಈ ವಿಡಿಯೋದಲ್ಲಿ ಕುಟುಂಬವೊಂದು ಎಟಿಎಂ ಬೂತ್ ನಲ್ಲಿ ಆಶ್ರಯ ಪಡೆದುಕೊಂಡಿರುವುದನ್ನು ಕಾಣಬಹುದು. ಇಲ್ಲಿ ಇಬ್ಬರೂ ಮಹಿಳೆಯರು ತನ್ನ ಇಬ್ಬರೂ ಮಕ್ಕಳೊಂದಿಗೆ ಎಟಿಎಂ ಬೂತ್ ನಲ್ಲಿ ಆಶ್ರಯ ಪಡೆದುಕೊಂಡಿರುವುದನ್ನು ಕಾಣಬಹುದು. ಇದನ್ನೂ ಓದಿ :ಪರಂ ವಿರುದ್ದ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸಿಗರೆ ಪತ್ರ ಬರೆದಿದ್ದಾರೆ: ಹೊಸ ಬಾಂಬ್​ ಸಿಡಿಸಿದ ಜೋಶಿ

ಈ ವಿಡಿಯೋದಲ್ಲಿ ಮಾತನಾಡಿರುವ ಮಹಿಳೆ ನಾವು ಇರುವ ಪ್ರದೇಶದಲ್ಲಿ ಕಳೆದೊಂದು ತಿಂಗಳಿಂದ ವಿದ್ಯುತ್​ ವ್ಯತ್ಯಯ ಉಂಟಾಗಿದೆ. ಹೀಗಾಗಿ ನಾವು ಎಟಿಎಂನಲ್ಲಿ ಆಶ್ರಯ ಪಡೆದಿದ್ದೇವೆ. ನಮಗೆ ಇಲ್ಲಿ ಇರಬೇಡಿ ಎಂದು ಯಾರು ಹೇಳಿಲ್ಲ. ಒಂದು ವೇಳೆ ನಮ್ಮನ್ನು ಇಲ್ಲಿಂದ ಹೊರ ಹಾಕಿದರೆ ನಾವು ರಸ್ತೆ ಮೇಲೆ ಮಲಗಬೇಕಾಗುತ್ತದೆ ಎಂದು ಹೇಳಿದ್ದಾರೆ.

Exit mobile version