Site icon PowerTV

ನಮ್ಮ ಮೆಟ್ರೋದಲ್ಲಿ ಶೌಚಾಲಯ ಬಳಸಲು ದರ ನಿಗದಿ: BMRCL ನಿರ್ಧಾರಕ್ಕೆ ಪ್ರಯಾಣಿಕರ ಆಕ್ರೋಶ

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಲಯ ಉಪಯೋಗಿಸಲು ಇನ್ನು ಮುಂದೆ ಹಣ ನೀಡಬೇಕು ಎಂದು BMRCL ಶುಲ್ಕ ನಿಗದಿ ಮಾಡಿದೆ. ಬಿಎಂಆರ್​ಸಿಎಲ್​ನ ಈ ನಡೆಗೆ ಪ್ರಯಾಣಿಕರು ಸಾಕಷ್ಟು ವಿರೋಧ ವ್ಯಕ್ತಪಪಡಿಸಿದ್ದಾರೆ.

ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆಗಳಲ್ಲಿ ಒಂದಾಗಿರುವ ನಮ್ಮ ಮೆಟ್ರೋದಲ್ಲಿ ಪ್ರತಿ ದಿನವೂ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ನಮ್ಮ ಮೆಟ್ರೋ ಆರಂಭವಾದಾಗಿನಿಂದ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ಶೌಚಾಲಯ ಸೌಲಭ್ಯ ನೀಡಲಾಗುತ್ತಿತ್ತು. ಸದ್ಯ ಏಕಾಏಕಿ ದರ ನಿಗದಿ ಮಾಡಿದೆ. ಈ ಬಗ್ಗೆ ಬಿಎಂಆರ್‌ಸಿಎಲ್‌ ಖಾಸಗಿ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಂಡಿದ್ದು, ಇನ್ನು ಮುಂದೆ ಆ ಸಂಸ್ಥೆಯೇ ಮೆಟ್ರೋ ನಿಲ್ದಾಣಗಳ ಶೌಚಾಲಯಗಳನ್ನು ನಿರ್ವಹಣೆ ಮಾಡಲಿದೆ. ಇದನ್ನೂ ಓದಿ :‘ಫ್ರೀ ಪ್ಯಾಲೆಸ್ತೀನ್’ ಘೋಷಣೆ ಕೂಗುತ್ತ ಗುಂಡಿನ ದಾಳಿ; ಓರ್ವ ಇಸ್ರೇಲಿ ರಾಯಭಾರ ಕಛೇರಿ ಸಿಬ್ಬಂದಿ ಸಾ*ವು

ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿರುವ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ನಿರ್ವಹಣೆಗೆ ಎಂದು ಸುಲಭ ಶೌಚಾಲಯ ಸಂಸ್ಥೆ ಜೊತೆಗೆ ಬಿಎಂಆರ್​ಸಿಎಲ್​ ಒಪ್ಪಂದ ಮಾಡಿಕೊಂಡಿದ್ದು. ಕೆಲ ನಿಲ್ದಾಣಗಳಲ್ಲಿ ಈಗಾಗಲೇ ಶೌಚಕ್ಕೆ ದರ ನಿಗಧಿ ಮಾಡಲಾಗಿದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.

ದರ ಎಷ್ಟು..!

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಾಲಯ ಉಪಯೋಗಿಸಲು ದರ ನಿಗಧಿ ಮಾಡಿದ್ದು. ಮೂತ್ರ ವಿಸರ್ಜನೆಗೆ 2₹ ಮತ್ತು ಮಲ ವಿಸರ್ಜನೆಗೆ 5₹ ದರ ನಿಗಧಿ ಮಾಡಲಾಗಿದೆ. ಇದನ್ನೂ ಓದಿ :ED ದಾಳಿ ಬಗ್ಗೆ ಪರಂ ಮೊದಲ ರಿಯಾಕ್ಷನ್​: ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದ ಸಚಿವ

ಪ್ರಯಾಣಿಕರಿಂದ ಆಕ್ರೋಶ..!

ಪ್ರಸಕ್ತ ವರ್ಷ ಆರಂಭದಲ್ಲಿ ನಮ್ಮ ಮೆಟ್ರೋ ಟಿಕೆಟ್‌ ದರ ಭಾರೀ ಹೆಚ್ಚಳ ಮಾಡಿ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ದರ ತುಸು ಪರಿಷ್ಕರಣೆ ಮಾಡಿ ಸಮಾಧಾನ ನಾಟಕವಾಡಿತ್ತು. ದರ ಹೆಚ್ಚಳ ಮಾಡಿದ ಮೇಲೆ ಅಗತ್ಯ ಮೂಲಭೂತ ಸೌಲಭ್ಯ ನೀಡುವುದು ಬಿಎಂಆರ್‌ಸಿಎಲ್‌ ಕರ್ತವ್ಯವಾಗಿದೆ. ಆದರೆ, ಪ್ರಯಾಣಿಕರು ಬಳಸುವ ಶೌಚಾಲಯಕ್ಕೂ ದರ ನಿಗದಿ ಮಾಡಿದೆ. ಇದು ಪ್ರಯಾಣಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಬಿಎಂಆರ್‌ಸಿಎಲ್‌ ನಡೆಯನ್ನು ಖಂಡಿಸಿದ್ದಾರೆ. ಇದನ್ನೂ ಓದಿ :ಹೊಟ್ಟೆ ಹಸಿವು ಎಂದು ಬಿಸ್ಕೆಟ್​ ಕದ್ದಿದ್ದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಜೆಡಿಎಸ್​ ಆಕ್ರೋಶ..!

ನಮ್ಮ ಮೆಟ್ರೋ ಶೌಚಾಲಯಗಳಲ್ಲಿ ದರ ನಿಗದಿ ಮಾಡಿರುವ ಕುರಿತು ರಾಜ್ಯ ಜೆಡಿಎಸ್​ ಟೀಕಿಸಿದ್ದು. ” ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.

Exit mobile version