Site icon PowerTV

‘ಮೊದಲು ಇಲ್ಲಿಂದ ಎದ್ದು ಹೊರಹೋಗು’: ವರದಿಗಾರನ ಮೇಲೆ ಟ್ರಂಪ್​ ಗರಂ

ವಾಷಿಂಗ್​ಟನ್​ : ಅಮೇರಿಕಾದ ಓವಲ್​ನಲ್ಲಿನ ಕಛೇರಿಯಲ್ಲಿ ದಕ್ಷಿಣ ಆಫ್ರೀಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಜೊತೆ ಜಂಟಿ ಸುದ್ದಿಗೋಷ್ಟಿ ನಡೆಸಿದ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪ್ರಶ್ನೆ ಕೇಳಿದ ವರದಿಗಾರನ ಮೇಲೆ ಸಿಡಿಮಿಡಿಗೊಂಡಿದ್ದು. ‘ನೀನೊಬ್ಬ ಭಯಾನಕ ವರದಿಗಾರ, ನೀನು ಇಲ್ಲಿಂದ ಎದ್ದು ಹೊರಗೆ ಹೋಗು ಎಂದು ಕೂಡಾಗಿದ್ದಾರೆ.

ಇದನ್ನೂ ಓದಿ :ರಾಕೇಶ್​ ಪೂಜಾರಿ ನೆನೆದು ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ಕಣ್ಣೀರಿಟ್ಟ ಕಲಾವಿದರು

ಓವಲ್​ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸುತ್ತಿದ್ದ ವೇಳೆ ಎನ್‌ಬಿಸಿ ವರದಿಗಾರ, ಕತಾರ್‌ನಿಂದ ನಿಮಗೆ ಬೋಯಿಂಗ್ 747 ಐಷಾರಾಮಿ ವಿಮಾನ ಕೊಡುಗೆಯಾಗಿ ಸಿಗುತ್ತಿದೆಯಲ್ಲ? ಇದನ್ನು ಸ್ವೀಕರಿಸುತ್ತಿರೋ? ಎಂದು ಕಾಲೆಳೆಯಲು ನೋಡಿದ್ದಾರೆ. ಇದಕ್ಕೆ ತಕ್ಷಣವೇ ಸಿಡಿಮಿಡಿಗೊಂಡ ಟ್ರಂಪ್, ‘ಏನು ಮಾತನಾಡುತ್ತಿದ್ದಿಯಾ ನೀನು, ನಾವು ಇಲ್ಲಿ ದಕ್ಷಿಣ ಆಫ್ರಿಕಾದ ಬಿಳಿ ಬಣ್ಣದ ರೈತರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಮಾತನಾಡುವಾಗ ಬೇರೆಡೆ ಗಮನ ಸೆಳೆಯಲು ನೋಡುತ್ತಿದ್ದೀಯಾ.. ನಿನಗೆ ಬುದ್ದಿ ಇದೆಯಾ? ನಿನೊಬ್ಬ ಭಯಾನಕ ವರದಿಗಾರ, ಏನು ತಿಳಿದುಕೊಳ್ಳಬೇಕು ಅದನ್ನೇ ನೀನು ತಿಳಿದುಕೊಂಡಿಲ್ಲ’ ಎಂದು ಬಾಯಿಗೆ ಬಂದ ಹಾಗೆ ಕೂಗಾಡಿದ್ದಾರೆ.

ಇದರಿಂದ ಸುದ್ದಿಗೋಷ್ಠಿ ಕೆಲಕಾಲ ಸ್ಥಬ್ದವಾಗಿತ್ತು ಎಂದು ವರದಿಗಳು ಹೇಳಿವೆ. ಅಷ್ಟಕ್ಕೇ ಸುಮ್ಮನಾಗದೇ ಟ್ರಂಪ್, ‘ನಿಮ್ಮ ಎನ್‌ಬಿಸಿ ಚಾನಲ್ ಸಹ ಸರಿ ಇಲ್ಲ. ಅದರ ಮೇಲೆ ತನಿಖೆ ನಡೆಸಬೇಕು. ಸಾಕು ಮೊದಲು ಇಲ್ಲಿಂದ ಎದ್ದು ಹೊರಗೆ ಹೋಗು, ನೀನು ತುಂಬಾ ಅಸಹ್ಯಕರ, ಮತ್ತೆ ಯಾವುದೇ ಪ್ರಶ್ನೆ ಕೇಳಬೇಡ’ ಎಂದು ಅರಚಿದ್ದಾರೆ.

ಇದನ್ನೂ ಓದಿ :ಬಲವಂತವಾಗಿ ತಾಳಿ ಕಟ್ಟಿ ಅತ್ಯಾಚಾರ, ಖಾಸಗಿ ವಿಡಿಯೋ ತೋರಿಸಿ ಬ್ಲಾಕ್​ಮೇಲ್​: ಮಡೆನೂರು ವಿರುದ್ದ ಗಂಭೀರ ಆರೋಪ

ಇತ್ತೀಚೆಗೆ ಟ್ರಂಪ್ ಕತಾರ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ‘ಬೋಯಿಂಗ್ 747 ಐಷಾರಾಮಿ ವಿಮಾನವನ್ನು ಅಮೆರಿಕಕ್ಕೆ ಉಡುಗೊರೆಯಾಗಿ ನೀಡುತ್ತೇವೆ’ ಎಂದು ಕತಾರ್ ರಾಜ ಹೇಳಿದ್ದರು. ಅದಾದ ನಂತರ ಇದಕ್ಕೆ ಅಮೆರಿಕದಲ್ಲಿ ವಿರೋಧ ವ್ಯಕ್ತವಾಗಿತ್ತು. ಆಗ ಟ್ರಂಪ್ ಮಧ್ಯಪ್ರವೇಶಿಸಿ, ವಿಮಾನ ನೀಡುತ್ತಿರುವುದು ನನಗಲ್ಲ, ಅದು ಅಮೆರಿಕ್ ಒನ್ ಏರ್‌ಫೋರ್ಸ್‌ಗೆ. ಇದರಲ್ಲೇನು ಹೆಚ್ಚಿಗೆ ವಿಷಯವಿಲ್ಲ ಎಂದು ಹೇಳಿದ್ದರು.

Exit mobile version