Site icon PowerTV

ರಾಕೇಶ್​ ಪೂಜಾರಿ ನೆನೆದು ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ಕಣ್ಣೀರಿಟ್ಟ ಕಲಾವಿದರು

ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್​ ಪೂಜಾರಿ ಇತ್ತೀಚೆಗೆ ಹೃದಯಘಾತದಿಂದ ಸಾವನ್ನಪ್ಪಿದ್ದರು.  ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ರಾಕೇಶ್‌ ಆನಂತರ ಕನ್ನಡ ಸೇರಿದಂತೆ ತುಳುವಿನ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ತಮ್ಮ ಮನರಂಜನೆಯಿಂದಲೇ ಹೆಸರಾಗಿದ್ದ ರಾಕೇಶ್​ ಪೂಜಾರಿಗೆ ಭರ್ಜರಿ ಬ್ಯಾಚುಲರ್ಸ್​ ವೇದಿಕೆ ಮೇಲೆ ಶ್ರದ್ದಾಂಜಲಿ ಸಲ್ಲಿಸಿದ್ದು, ರಾಕೇಶ್​ ಸಾವಿಗೆ ಜಗ್ಗೇಶ್​, ಯೋಗರಾಜ್​ ಭಟ್​ ಸೇರಿದಂತೆ ಅವರ ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ :ಬಲವಂತವಾಗಿ ತಾಳಿ ಕಟ್ಟಿ ಅತ್ಯಾಚಾರ, ಖಾಸಗಿ ವಿಡಿಯೋ ತೋರಿಸಿ ಬ್ಲಾಕ್​ಮೇಲ್​: ಮಡೆನೂರು ವಿರುದ್ದ ಗಂಭೀರ ಆರೋಪ

ಜೀ ಕನ್ನಡ ವಾಹಿನಿಯಲ್ಲಿ ಹಲವು ವಿವಿಧ ರಿಯಾಲಿಟಿ ಶೋಗಳಲ್ಲಿ ಸ್ಪರ್ದಿಸಿ ವಾಹಿನಿ ಜೊತೆಗೆ ಒಳ್ಳೆಯ ಒಡನಾಟವನ್ನಿಟ್ಟುಕೊಂಡಿದ್ದ ನಟ ರಾಕೇಶ್‌ ಪೂಜಾರಿಗೆ ಗೆಳೆಯರಿಂದ ವಿಶೇಷ ಟ್ರಿಬ್ಯೂಟ್‌ ಸಿಕ್ಕಿದೆ. ‘ಭರ್ಜರಿ ಬ್ಯಾಚುಲರ್ಸ್​ ಸೀಸನ್​ 2’ ಕಾರ್ಯಕ್ರಮದ ವೇದಿಕೆ ಮೇಲೆ ರಾಕೇಶ್​ ಪೋಟೊಗೆ ಪುಷ್ಪನಮನ ಸಲ್ಲಿಸಿ ಕಣ್ಣೀರಾಗಿದ್ದಾರೆ.

ಇದನ್ನೂ ಓದಿ :ಮಿಲ್ಕಿ ಬ್ಯೂಟಿಗೆ ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿ ಪಟ್ಟ: ಬರೋಬ್ಬರಿ 6.2 ಕೋಟಿ ಸಂಭಾವನೆ

ಈ ಕುರಿತು ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದ್ದು. ನಟ ಜಗ್ಗೇಶ್​, ನಿರ್ದೇಶಕ ಯೋಗರಾಜ್​ ಭಟ್​, ಅರ್ಜುನ್ ಜನ್ಯಾ ಸೇರಿದಂತೆ ಹಲವರು ರಾಕೇಶ್​ ಸಾವಿಗೆ ಕಂಬನಿ ಮಿಡಿದಿದ್ದಾರೆ. ಈ ವೇಳೆ ಮಾತನಾಡಿದ ಶಿವರಾಜ್ ಕೆ ಆರ್ ಪೇಟೆ, “ಮೊಗ್ಗು ಅರಳುವುದಕ್ಕೂ ಮುನ್ನ ದೇವರು ಅವನ ಮುಡಿಗೇರಿಸಿಕೊಂಡು ಬಿಟ್ಟ” ಎಂಬ ಮಾತನ್ನು ಹೇಳಿದ್ದಾರೆ. ಇನ್ನೂ, “ಅವನ ನೆನಪುಗಳಲ್ಲಿ ಆದರೂ ಅವನನ್ನು ನಾವು ಸದಾ ಕಾಲ ಬದುಕಿಸಬೇಕು” ಎಂದು ಯೋಗರಾಜ್‌ ಭಟ್‌ ಅವರು ಹೇಳಿದ್ದಾರೆ. ಈ ಮಾತುಗಳನ್ನೆಲ್ಲಾ ಕೇಳಿ, “ಮತ್ತೆ ಹುಟ್ಟಿ ಬಾ, ಆದರೆ ಬೇಗ ಬಾ” ಎಂದು ಪ್ರವೀಣ್‌ ಜೈನ್‌ ಅವರು ಗೆಳೆಯನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಉಡುಪಿ ಮೂಲದ ಜನಪ್ರಿಯ ಕಲಾವಿದ, ಕಿರುತೆರೆ, ಸಿನಿಮಾ ಲೋಕದಲ್ಲಿ ಅಪಾರ ಖ್ಯಾತಿ ಗಳಿಸಿದ್ದ 34 ವರ್ಷದ ರಾಕೇಶ್ ಪೂಜಾರಿ ಕಳೆದ ಮೇ.12ರಂದು ಹೃದಯಘಾತದಿಂದ ಕೊನೆಯುಸಿರೆಳೆದಿದ್ದರು.
Exit mobile version