ಗದಗ : SSLC ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದ್ದು. ಮೃತ ಬಾಲಕನನ್ನು 16 ವರ್ಷದ ರಾಕೇಶ್ ಮಣ್ಣೋಡ್ದರ್ ಎಂದು ಗುರುತಿಸಲಾಗಿದೆ.
ಗದಗ ಜಿಲ್ಲೆಯ, ಗಜೇಂದ್ರಗಡ ತಾಲೂಕಿನ, ನರೇಗಲ್ ಪಟ್ಟಣದಲ್ಲಿ ಘಟನೆ ನಡೆದಿದ್ದು. ಮೃತ ರಾಕೇಶ್ ನರೇಗಲ್ ಖಾಸಗಿ ಹೈಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಕ್ರೀಡೆಯಲ್ಲಿ ತುಂಭಾ ಕ್ರಿಯಾಶೀಲನಾಗಿದ್ದ ರಾಕೇಶ್, ಓದುವುದರಲ್ಲಿ ತೀರಾ ಹಿಂದುಳಿದಿದ್ದ ಎನ್ನಲಾಗಿದೆ. ಓದಿನಲ್ಲಿ ಹಿಂದುಳಿದಿದ್ದ ರಾಕೇಶ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಫೇಲ್ ಆಗಿದ್ದನು. ಇದನ್ನೂ ಓದಿ :ಸೂಟ್ಕೇಸ್ನಲ್ಲಿ 10 ವರ್ಷ ವಯಸ್ಸಿನ ಅಪರಿಚಿತ ಬಾಲಕಿ ಶವ ಪತ್ತೆ..!
ಫೇಲ್ ಆಗಿದ್ದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರಾಕೇಶ್, ನಿನ್ನೆ(ಮೇ.20) ರಾತ್ರಿ ಮನೆಯಿಂದ ಹೊರ ಹೋಗಿದ್ದು. ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ರಾಹುಲ್-ಸೋನಿಯಾಗೆ ED ಶಾಕ್: 142 ಕೋಟಿ ರೂಪಾಯಿ ಅಕ್ರಮ ಲಾಭ ಪಡೆದಿರುವ ಆರೋಪ