Site icon PowerTV

ED Raid: ಗೃಹ ಸಚಿವ ಪರಮೇಶ್ವರ್ ಅವರ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ..!

ತುಮಕೂರು (ಮೇ.21): ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.

ಡಾ. ಜಿ. ಪರಮೇಶ್ವರ್​ ಒಡೆತನದ ಎಸ್.ಎಸ್.ಐ.ಟಿ (SSIT) ಇಂಜಿನಿಯರಿಂಗ್ ಕಾಲೇಜು ಮತ್ತು ತುಮಕೂರು
ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಮೇಲೆ ಇಡಿ ದಾಳಿ ನಡೆಸಿದ್ದು. ಕಾಲೇಜಿಗೆ ಆಗಮಿಸಿದ ಅಧಿಕಾರಿಗಳು ದಾಖಲಾತಿ ಪರಿಶೀಲನೆ ಆರಂಭಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ದಾಳಿಯ ಸತ್ಯಾಸತ್ಯತೆ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿಗಳು ಬಹಿರಂಗವಾಗಬೇಕಿದೆ.

ಇದನ್ನೂ ಓದಿ :ಆಧುನಿಕ ರಾಬಿನ್​ ಹುಡ್: ಕಳ್ಳತನ ಮಾಡಿದ ಹಣದಲ್ಲಿ 20 ಶಾಲಾ ಮಕ್ಕಳ ಸ್ಕೂಲ್​ ಫೀಸ್​ ಕಟ್ಟಿ ಸಮಾಜ ಸೇವೆ

ಡಾ. ಜಿ. ಪರಮೇಶ್ವರ್ ಅವರ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಈ ದಾಳಿಯನ್ನು ಅಕ್ರಮವಾಗಿ ಹಣಕಾಸು ವ್ಯವಹಾರ ಹಾಗೂ ಆಸ್ತಿ ವಿಚಾರವಾಗಿ ನಡೆದಿರುವ ಸಾಧ್ಯತೆ ಇದೆ. ಇನ್ನು ಇಡಿ ದಾಳಿ ನಡೆದಿರುವ ಶಂಕೆಯ ನಡುವೆ ಡಾ.ಜಿ ಪರಮೇಶ್ವರ್ ತಮ್ಮ ಪತ್ನಿಯೊಂದಿಗೆ ತುಮಕೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.

Exit mobile version