Site icon PowerTV

2 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಲು ತಾಯಿಯಿಂದಲೇ ಅನುಮತಿ

ಮುಂಬೈ : ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದ್ದು. ಮಗುವಿನ ಮೇಲೆ ಅತ್ಯಾಚಾರವೆಸಗಲು ಆ ಮಗುವಿನ ತಾಯಿಯೇ ಅನುಮತಿ ನೀಡಿದ್ದಳು ಎಂಬ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ 30 ವರ್ಷದ ಮಹಿಳೆ (ಮಗುವಿನ ತಾಯಿ) ಮತ್ತು ಆಕೆಯ 19 ವರ್ಷದ ಪ್ರಿಯಕರನನ್ನು ಮುಂಬೈನ ಮಾಲ್ವಾನಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಪೊಲೀಸರು ಇಬ್ಬರ ಮೇಲೂ ಸಾಮೂಹಿಕ ಅತ್ಯಾಚಾರದ ಪ್ರಕರಣ ಮತ್ತು ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ :ಅನೈತಿಕ ಸಂಬಂಧ: ಗಂಡನನ್ನೇ ಕೊಂದು ಬಾವಿಗೆ ಎಸೆದ ಪತ್ನಿ, ಪ್ರಿಯಕರ ಅಂದರ್​

ಏನಿದು ಘಟನೆ..!

ಆರೋಪಿ ಮಹಿಳೆಯ ಪತಿ ಕಳೆದ ಮೂರು ವರ್ಷಗಳ ಹಿಂದೆ ಆಕೆಯನ್ನು ತ್ಯಜಿಸಿದ್ದನು, ಈ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದಳು. ಮಗು ಜನಿಸಿದ ನಂತರ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆ ಕೆಲವು ತಿಂಗಳ ಹಿಂದೆ ಯುವಕನೊಂದಿಗೆ ಸ್ನೇಹ ಬೆಳೆಸಿದ್ದಳು. ಈ ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿತ್ತು.

ಕಳೆದ ಭಾನುವಾರ (ಮೇ.18) ಮಹಿಳೆಯ ಮನೆಗೆ ಬಂದಿದ್ದ ಪಾಗಲ್​ ಪ್ರೇಮಿ ಮಹಿಳೆಯ 2 ವರ್ಷದ ಮಗುವಿನ ಜೊತೆ ಲೈಂಗಿಕ ಸಂಪರ್ಕ ಬೆಳೆಸುವ ಬಯಕೆ ವ್ಯಕ್ತಪಡಿಸಿದ್ದ. ಇಂತಹ ಹೀನಾ ಕೃತ್ಯಕ್ಕೆ ಮಗುವಿನ ತಾಯಿಯೂ ಅವಕಾಶ ನೀಡಿದ್ದಳು ಎನ್ನಲಾಗಿದ್ದು. ತಾಯಿಯ ಮುಂದೆಯೇ ಯುವಕ 2 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ ನಂತರ ನೋವಿನಿಂದ ಅಳುತ್ತಿದ್ದ ಮಗುವನ್ನು ದಿಂಬಿನಿಂದ ಉಸಿರುಕಟ್ಟಿಸಿ ಕೊಲೆ ಮಾಡಿದ್ದಾರೆ. ಇದನ್ನೂ ಓದಿ ;ಜಿಟಿ-ಜಿಟಿ ಮಳೆಯಲ್ಲಿ ನವಜಾತ ಶಿಶುವನ್ನು ರಸ್ತೆಯಲ್ಲಿ ಬಿಟ್ಟು ಹೋದ ಪಾಪಿ ತಾಯಿ

ನಂತರ ಬಾಲಕಿಯ ತಾಯಿ ಮಗಳು ಪ್ರಜ್ಞೆ ಕಳೆದುಕೊಂಡಿದೆ ಎಂದು ಮಾಲ್ವಾನಿಯ ಜನಕಲ್ಯಾಣ್ ನಗರದಲ್ಲಿರುವ ಹತ್ತಿರದ ಜನರಲ್ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರ ಬಳಿ ಸುಳ್ಳು ಹೇಳಿದ್ದಾಳೆ. ಈ ವೇಳೆ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿನ ಆತಂರಿಕ ಅಂಗಗಳಿಗೆ ಹಾನಿಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ತಾಯಿ ಮತ್ತು ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ :ಆರ್​ಸಿಬಿ-ಕೆಕೆಆರ್​ ಪಂದ್ಯ ರದ್ದು: ಟಿಕೆಟ್​ ಹಣ ಮರುಪಾವತಿಸಲು ಫ್ರಾಂಚೈಸಿ ನಿರ್ಧಾರ

ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಮೇಲೆ ಅತ್ಯಾಚಾರವಾಗಿರುವುದು ಧೃಡವಾಗಿದ್ದು.  ಆರೋಪಿಗಳಲ್ಲಿ ಇಬ್ಬರೂ ಉದ್ಯೋಗದಲ್ಲಿ ಇರಲಿಲ್ಲ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಮಹಿಳೆಯ ತಾಯಿ ಮನೆಕೆಲಸ ಮಾಡುತ್ತಿದ್ದು, ಮನೆಯನ್ನು ನೋಡಿಕೊಳ್ಳುತ್ತಿದ್ದರು. ಆರೋಪಿ ನಿರುದ್ಯೋಗಿಯಾಗಿದ್ದು,  ತನ್ನ ತಂದೆಯ ಗಳಿಕೆಯ ಮೇಲೆ ಅವಲಂಬಿತನಾಗಿದ್ದನು ಎಂದು ತಿಳಿದು ಬಂದಿದೆ.

Exit mobile version