IPL 2025ರಲ್ಲಿ ಅನುಚಿತ ವರ್ತನೆಯಿಂದಲೇ ಪ್ರೇಕ್ಷಕರ ಗಮನ ಸೆಳೆದಿದ್ದ ಲಖ್ನೋ ಸೂಪರ್ ಜೈಂಟ್ಸ್ ತಂಡದ ಸ್ಪಿನ್ನರ್ ದಿಗ್ವೇಶ್ ರಾಥಿಯನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜೊತೆ ಜಗಳಕ್ಕಿಳಿದಿದ್ದ ರಾಥಿಗೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ.
ಲಖ್ನೋ ತಂಡದ ಆಟಗಾರ ದಿಗ್ವೇಶ್ ರಾಥಿ ನಿನ್ನೆ ನಡೆದ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿಸಿದ್ದು. ಸನ್ರೈಸರ್ಸ್ ತಂಡದ ಆಟಗಾರ ಅಭಿಷೇಕ್ ಶರ್ಮಾರೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ಇದರಿಂದಾಗಿ ದಿಗ್ವೇಶ್ ರಾಥಿಯನ್ನು ಗುಜರಾತ್ ಟೈಟಾನ್ಸ್ ವಿರುದ್ದದ ಪಂದ್ಯದಿಂದ ಹೊರಗಿಡಲಾಗಿದ್ದು. ಜೊತೆಗೆ ನೆನ್ನೆ ನಡೆದ ಪಂದ್ಯದ ಶುಲ್ಕದಲ್ಲಿ ಶೇ 50ರಷ್ಟುನ್ನು ದಂಡವಾಗಿ ವಿಧಿಸಲಾಗಿದೆ. ಇದನ್ನೂ ಓದಿ :ದರ್ಶನ್ ಕೊಲೆ ಪ್ರಕರಣದ ವಿಚಾರಣೆ ಮುಂದೂಡಿಕೆ: ದರ್ಶನ್ ಬಳಿ ಮೊಬೈಲ್ ನಂಬರ್ ಪಡೆದ ಪವಿತ್ರಾ
ದಿಗ್ವೇಶ್ ರಾಥಿ ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ಬಳಿಕ ದಿಗ್ವೇಶ್ ರಾಥಿ ನೋಟ್ಬುಕ್ ಸೆಲೆಬ್ರೇಷನ್ ಮಾಡಿದ್ದರು. ಇದಕ್ಕೆ ಅವರಿಗೆ ಶೇ.25ರಷ್ಟನ್ನು ದಂಡ ವಿಧಿಸಲಾಗಿತ್ತು. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು. ಇದಾದ ಬಳಿಕ ಮುಂಬೈ ವಿರುದ್ದದ ಪಂದ್ಯದಲ್ಲೂ ನೋಟ್ಬುಕ್ ಸೆಲಬ್ರೇಷನ್ ಮಾಡಿದ್ದ ದಿಗ್ವೇಶ್ಗೆ ಶೇ.50ರಷ್ಟು ದಂಡ ವಿಧಿಸಲಾಗಿತ್ತು. ಇದನ್ನೂ ಓದಿ:ವಯಸ್ಸಾಯ್ತು, ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ: ರಾಜಕೀಯಕ್ಕೆ ಕೆ,ಎನ್ ರಾಜಣ್ಣ ನಿವೃತ್ತಿ
ಇದೀಗ ಮೂರನೇ ಬಾರಿಗೆ ದಿಗ್ವೇಶ್ ರಾಥಿ ಐಪಿಎಲ್ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ದಿಗ್ವೇಶ್ ರಾಥಿಗೆ ಒಂದು ಪಂದ್ಯದ ನಿಷೇಧ ಹೇರಿದ್ದಾರೆ. ಇದರ ಜೊತೆಗೆ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಿ, 2 ಡಿಮೆರಿಟ್ ಪಾಯಿಂಟ್ ನೀಡಿದ್ದಾರೆ.