Site icon PowerTV

ಕಾಂಗ್ರೆಸ್​ ಸಮಾವೇಶಕ್ಕೆ 4 ಲಕ್ಷ ಜನರ ನಿರೀಕ್ಷೆ: ಬಳ್ಳಾರಿಯಲ್ಲಿ ರಾರಾಜಿಸುತ್ತಿವೆ ಬ್ಯಾನರ್​, ಕಟೌಟ್​ಗಳು

ವಿಜಯನಗರ : ಕಾಂಗ್ರೆಸ್​ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆ ಬಳ್ಳಾರಿಯಲ್ಲಿ ಬೃಹತ್​ ಸಮಾವೇಶ ಹಮ್ಮಿಕೊಂಡಿದ್ದು. ‘ಸಮರ್ಪಣ ಸಂಕಲ್ಪ ಸಮಾವೇಶ’ ಹೆಸರಿನಲ್ಲಿ ಕಾರ್ಮಕ್ರಮ ನಡೆಯುತ್ತಿದೆ. ಈ ಸಮಾವೇಶಕ್ಕೆ ಸುಮಾರು 2 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ.

ಸಾಧನಾ ಸಮಾವೇಶ ಹಿನ್ನೆಲೆ ಹೊಸಪೇಟೆಯ ಡಾ.ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ 300 ಜನ ಜನಪ್ರತಿನಿಧಿಗಳು ಕೂರಲು ಬೃಹತ್ ವೇದಿಕೆ ಹಾಕಲಾಗಿದೆ. ಸಮಾವೇಶಕ್ಕೆ ಸಿಎ, ಡಿಸಿಎಂ ಸೇರಿದಂತೆ ಸುಮಾರು 4 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಇದಕ್ಕಾಗಿಯೇ ಕಲ್ಯಾಣ ಕರ್ನಾಟಕ ಭಾಗವೊಂದರಿಂದಲೇ ಸುಮಾರು 3,700 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ :ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ

ಮುಖ್ಯ ವೇದಿಕೆಯ ಎದುರುಗಡೆಯಿಂದ ಬ್ಯಾನರ್​ಗಳು, ಇಂದಿರಾಗಾಂಧಿ, ಸೋನಿಯಗಾಂಧಿ, ಪ್ರಿಯಾಂಕ ಗಾಂಧಿ, ಜವಾಹರ್ ಲಾಲ್ ನೆಹರು, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಅವರ ಕಟೌಟ್​ಗಳು ರಾರಾಜಿಸುತ್ತಿವೆ. ವಾಹನಗಳ ನಿಲುಗಡೆಗಾಗಿ ಸುಮಾರು 5 ಕಡೆ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಿದ್ದು. ಗಣ್ಯರ ಆಗಮನಕ್ಕಾಗಿ 3 ಕಡೆ ಹೆಲಿಪ್ಯಾಡ್​ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ :ಕೋವಿಡ್​ ಮಹಾಮಾರಿ: ಟ್ರಾವಿಸ್​ ಹೆಡ್​ ಬಳಿಕ ಬಾಲಿವುಡ್​ ನಟಿ ಶಿಲ್ಪ ಶಿರೋಧ್ಕರ್‌ಗೆ ಕೋವಿಡ್ ಪಾಸಿಟಿವ್

ಸಾರ್ವಜನಿಕರಿಗೆ ಮುಂಜಾನೆಯಿಂದಲೇ ಊಟದ ವ್ಯವಸ್ಥೆ ಮಾಡಿದ್ದು. ಸಾರ್ವಜನಿಕರು ಊಟಕ್ಕೆ ನೂಕು ನುಗ್ಗಲು ಆಗಬಾರದು ಎಂದು ಸುಮಾರು 100 ಕೌಂಟರ್ ಸ್ಥಾಪನೆ ಮಾಡಲಾಗಿದೆ. ಕಾರ್ಯಕ್ರಮದ ವೇದಿಕೆಯ ಸುತ್ತಲು ಯಾವುದೇ ಅಹಿತಕರ ಘಟನೆ ನಡೆಯದಂತೆ ಫೈರ್ ಸೇಫ್ಟಿಗಳ ಅಳವಡಿಸಲಾಗಿದೆ. ವೇದಿಕೆಯ ಸುತ್ತಲು ಪೋಲೀಸ್ ಸರ್ಪಗಾವಲು ಆಯೋಜಸಿದ್ದು. ಹಂಪಿ ರಸ್ತೆ, ಬಳ್ಳಾರಿ ರಸ್ತೆ, ಡ್ಯಾಂ ರಸ್ತೆ, ಮತ್ತೆ ಬೈಪಸ್ಗಳಲ್ಲಿ ವಾಹನಗಳ ಟ್ರಾಫಿಕ್ ಸಮಸ್ಯೆಯಾಗದಂತೆ ಪೋಲೀಸರ್ ನಿಯೋಜನೆ ಮಾಡಲಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಉಸ್ತುವಾರಿ ಸಚಿವ ಜಮೀರ್ ಕಳೆದೊಂದು ವಾರದಿಂದ ಬಳ್ಳಾರಿಯಲ್ಲೇ ಠಿಕಾಣಿ ಹೂಡಿದ್ದಾರೆ.

Exit mobile version