Site icon PowerTV

ನಿರಂತರ ಮಳೆ: RCB vs SRH ನಡುವಿನ ಪಂದ್ಯ ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್​

ದೆಹಲಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್ ಪಂದ್ಯವನ್ನು  ಬೆಂಗಳೂರಿನಿಂದ ಲಕ್ನೋಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದ್ದು. ಮೇ. 23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಲಕ್ನೋದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.

ಬೆಂಗಳೂರಿನಲ್ಲಿ ಹವಾಮಾನವು ಹಿತಕರವಾಗಿಲ್ಲ, ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಆದ್ದರಿಂದ RCB ಮತ್ತು SRH ನಡುವಿನ ಪಂದ್ಯವನ್ನು ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್​ ಮಾಡಲಾಗಿದೆ. ಆರ್​ಸಿಬಿ ತನ್ನ ಲೀಗ್​ ಹಂತದ ಕೊನೆಯ ಎರಡು ಪಂದ್ಯಗಳನ್ನು ಲಕ್ನೋದಲ್ಲೇ ಆಡಲಿದೆ. ಇದನ್ನೂ ಓದಿ :2 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಲು ತಾಯಿಯಿಂದಲೇ ಅನುಮತಿ

ಪ್ಲೇಆಫ್​ ಸ್ಥಳಗಳು ಬದಲಾವಣೆ..!

ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಫೈನಲ್ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು. ಇದಕ್ಕೂ ಮುನ್ನ ನಡೆಯುವ ಪ್ಲೇಆಫ್ ಪಂದ್ಯಗಳು ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿ ನಡೆಯಬಹುದು. ಇದನ್ನೂ ಓದಿ :ಅನೈತಿಕ ಸಂಬಂಧ: ಗಂಡನನ್ನೇ ಕೊಂದು ಬಾವಿಗೆ ಎಸೆದ ಪತ್ನಿ, ಪ್ರಿಯಕರ ಅಂದರ್​

ದೇಶದಲ್ಲಿ ಮಳೆಗಾಲ ಆರಂಭವಾಗಿರುವುದರಿಂದ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎರಡು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜೂನ್ 3 ರಂದು ಫೈನಲ್ ಪಂದ್ಯ ನಡೆಯಲಿದೆ. ವರದಿಯ ಪ್ರಕಾರ, ನರೇಂದ್ರ ಮೋದಿ ಕ್ರೀಡಾಂಗಣವು ಜೂನ್ 1 ರಂದು ಕ್ವಾಲಿಫೈಯರ್ 2 ಅನ್ನು ಸಹ ಆಯೋಜಿಸಬಹುದು. ಇತರ ಎರಡು ಪಂದ್ಯಗಳು – ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ – ಕ್ರಮವಾಗಿ ಮೇ 29 ಮತ್ತು 30 ರಂದು ಮುಲ್ಲನ್‌ಪುರದಲ್ಲಿ ನಡೆಯಲಿವೆ.

Exit mobile version