Site icon PowerTV

ಸಾಯಿ ಲೇಔಟ್‌ಗೆ ಜಲದಿಗ್ಭಂದನ: ಜೆಸಿಬಿ ಮೂಲಕ ಸ್ಥಳೀಯರಿಗೆ ಆಹಾರ ವಿತರಣೆ

ಬೆಂಗಳೂರು: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ಅಕ್ಷರಶಃ ತತ್ತರಿಸಿದ್ದು. ನಗರದ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಬೆಂಗಳೂರಿನ ಸಾಯಿ ಲೇಔಟ್​ ಸಂಪೂರ್ಣ ಜಲಾವೃತವಾಗಿದ್ದು. ಜನರು ಮನೆಯಿಂದ ಹೊರಬರಲಾಗದೆ ಪರದಾಡಿದ್ದಾರೆ. ಜನರಿಗೆ ಜೆಸಿಬಿ ಮೂಲಕ ಆಹಾರ ವಿತರಣೆ ಮಾಡಲಾಗಿದೆ.

ಮಳೆಯ ಪರಿಣಾಮ ಕಳೆದ ರಾತ್ರಿ ಬೆಂಗಳೂರಿನಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದ್ದು. ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಪ್ರತಿಬಾರಿಯಂತೆ ಈ ಭಾರಿಯೂ ಸಾಯಿ ಲೇಔಟ್​ ನೀರಿನಿಂದ ಜಲಾವೃತವಾಗಿದ್ದು. ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದೆ. ಆದ ಕಾರಣ ಜೆಸಿಬಿ ಮೂಲಕ ಜನರಿಗೆ ಆಹಾರ ವಿತರಣೆ ಮಾಡಲಾಗಿದೆ. ಇದನ್ನೂ ಓದಿ:ದರ್ಶನ್ ದಾಂಪತ್ಯಕ್ಕೆ ಜೀವನಕ್ಕೆ 22ನೇ ವರ್ಷದ ಸಂಭ್ರಮ: ಅಣ್ಣ-ಅತ್ತಿಗೆಗೆ ವಿಶ್​ ಮಾಡಿದ ಫ್ಯಾನ್ಸ್

ಮಳೆಗೆ ಮುಳುಗಡೆಯಾದ ಸಿಸಿಬಿ ಕಚೇರಿ..!

ಶಾಂತಿ ನಗರದಲ್ಲಿರುವ ಸಿಸಿಬಿ ಕಚೇರಿ ಸಂಪೂರ್ಣ ಜಲಾವೃತವಾಗಿದ್ದು. ಕಛೇರಿ ಒಳಗೆ ನೀರು ತುಂಬಿ ದಾಖಲೆಗಳು ಹಾಳಾಗಿರೋ ಸಾಧ್ಯತೆ ಇದೆ. ಕಛೇರಿಯ ಕೆಳಮಹಡಿ ಸಂಪೂರ್ಣ ನೀರಿನಿಂದ ತುಂಬಿ ಹೋಗಿದ್ದು. ಚರಂಡಿ ನೀರು ಕಛೇರಿ ಒಳಗೆ ತುಂಬಿರುವ ಕಾರಣ ಕಛೇರಿ ತುಂಬಾ ಕೆಟ್ಟ ವಾಸನೆ ಇದ್ದು, ಅಧಿಕಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ.

Exit mobile version