Site icon PowerTV

ಕೊತ್ತೂರ್​ಗೆ, ಸಂತೋಷ್​ ಲಾಡ್​ಗೆ ಜನ ಓಡಾಡಿಸ್ಕೊಂಡು ಹೊಡಿಬೇಕು: ರೇಣುಕಾಚಾರ್ಯ

ದಾವಣಗೆರೆ : ಮಾಜಿ ಸಚಿವ ರೇಣುಕಾಚಾರ್ಯ ಸಚಿವ ಸಂತೋಷ್​ ಲಾಡ್​ ಮತ್ತು ಕೊತ್ತೂರು ಮಂಜುನಾಥ್​ ವಿರುದ್ದ ಆಕ್ರೋಶ ಹೊರಹಾಕಿದ್ದು. ಇಬ್ಬರನ್ನು ಜನರು ಓಡಾಡಿಸ್ಕೊಂಡು ಹೊಡಿಬೇಕು ಎಂದು ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರೇಣುಕಚಾರ್ಯ ‘ಅಯೋಗ್ಯ ಕೊತ್ತೂರು ಮಂಜುನಾಥ್​ ಮತ್ತು ಸಂತೋಷ್​ ಲಾಡ್​ ಇಬ್ಬರು ಸೇನೆ ಬಗ್ಗೆ ಅಪಪ್ರಚಾರದ ಹೇಳಿಕೆ ನೀಡುತ್ತಿದ್ದಾರೆ. ಕೊತ್ತೂರು ಮಂಜುನಾಥ್​ ಕೊತ್ವಾಲ್​ ಶಿಷ್ಯನಾಗಿದ್ದಾನೆ. ಛತ್ರಪತಿ ಶಿವಾಜಿ ವಂಶದಲ್ಲಿ ಹುಟ್ಟಿದ ಸಂತೋಷ್ ಲಾಡ್​ ದೇಶದ್ರೋಹಿ ಹೇಳಿಕೆ ನೀಡಿದ್ದಾನೆ ಇವರನೆಲ್ಲಾ ಯಾವುದರಲ್ಲಿ ಹೊಡಿಬೇಕು ಎಂದು ಹೇಳಿದರು.

ಇದನ್ನೂ ಓದಿ:ಕರ್ನಲ್​ ಖುರೇಷಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಚಿವನ ವಿರುದ್ದ SIT ರಚನೆಗೆ ಸುಪ್ರೀಂ ಸೂಚನೆ

ಮುಂದುವರಿದು ಮಾತನಾಡಿದ ರೇಣುಕಾಚಾರ್ಯ “ಕೃಷ್ಣ ಬೈರೇಗೌಡ, ಸಿಎಂ ಸಿದ್ದರಾಮಯ್ಯ, ಕೊತ್ತೂರು, ಸಂತೋಷ್​ ಲಾಡ್ ಎಲ್ಲರೂ ಸೇನೆ ವಿರುದ್ದವಾಗಿ ಮಾತನಾಡುತ್ತಾರೆ. ವಿಡಿಯೋ ಕೊಟ್ಟರು ಆಪರೇಷನ್​ ಸಿಂಧೂರ್ ಬಗ್ಗೆ ಸಾಕ್ಷಿ ಕೇಳ್ತಾರೆ. ಅದೇ ಮನಮೋಹನ್​ ಸಿಂಗ್​ ಅಧಿಕಾರದಲ್ಲಿದ್ದಾಗ ಎಷ್ಟು ಜನ ಸತ್ತಿದ್ದಾರೆ. ಸಂತೋಷ್​ ಲಾಡ್​ ಪದೇ ಪದೇ ಮೋದಿ ವಿರುದ್ದ ಮಾತನಾಡುತ್ತಾರೆ. ಸಂತೋಷ್​ ಲಾಡ್​, ಮಂಜುನಾಥ್​ ಕೊತ್ತೂರ್​ಗೆ ಜನರು ಓಡಾಡಿಸಿಕೊಂಡು ಹೊಡಿಬೇಕು ಎಂದು ಹೇಳಿದರು.

Exit mobile version