Site icon PowerTV

ಭಾರೀ ಮಳೆಗೆ ರಾಜಧಾನಿ ತತ್ತರ: ಸಿಸಿಬಿ ಕಛೇರಿಗೆ ನೀರು ನುಗ್ಗಿ ಅವಾಂತರ, ಈಜೀಪುರದಲ್ಲಿ ಈಜಾಡೋ ಪರಿಸ್ಥಿತಿ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ನಸುಕಿನ ಜಾವ ಸುರಿದ ಭಾರೀ ಮಳೆಗೆ ನಗರದ ಹಲವು ಭಾಗಗಳು ಜಲಾವೃತವಾಗಿದ್ದು. ಸಿಸಿಬಿ ಕಛೇರಿ ಒಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅಷ್ಟೇ ಅಲ್ಲದೇ ಎಲೆಕ್ಟ್ರಾನಿಕ್​ ಸಿಟಿ ಫ್ಲೈಓವರ್​ ಮೇಲೆ ಸ್ವಿಮ್ಮಿಂಗ್​ ಪೂಲ್ ನಿರ್ಮಾಣವಾಗಿದ್ದು. ತಾತ್ಕಾಲಿಕವಾಗಿ ಫ್ಲೈಓವರ್​ ಮುಚ್ಚಲಾಗಿದೆ. ಹಾಗಾದರೆ ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗಿರುವ ಅವಾಂತರವನ್ನ ನೋಡಾಣ ಬನ್ನಿ. ಇದನ್ನೂ ಓದಿ:ಆರ್​ಸಿಬಿ-ಕೆಕೆಆರ್​ ಪಂದ್ಯ ರದ್ದು: ಟಿಕೆಟ್​ ಹಣ ಮರುಪಾವತಿಸಲು ಫ್ರಾಂಚೈಸಿ ನಿರ್ಧಾರ

ಈಜೀಪುರದಲ್ಲಿ ಈಜಾಡೋ ಪರಿಸ್ಥಿತಿ..!

ಪ್ರತಿಭಾರಿಯಂತೆ ಈ ಬಾರಿಯೂ ಈಜಿಪುರದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು. ಈಜೀಪುರದಲ್ಲಿ  ಈಜಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಈಜೀಪುರದ ಆರ್.ಎ.ರೋಡ್ ನಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು. ಮಳೆಯಿಂದಾಗಿ ನಿವಾಸಿಗಳು ಕಂಗಾಲು ಆಗಿದ್ದಾರೆ. ಇನ್ನು ಸ್ಥಳೀಯರು ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಬಿಬಿಎಂಪಿ ಕಂಟ್ರೋಲ್​ ರೂಂಗೆ ಕರೆ ಮಾಡಿದ್ರು ಏನು ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಭಾರಿ ಮಳೆಗೆ ಮನೆಯಲ್ಲಿದ್ದ ವಸ್ತುಗಳು  ಚೆಲ್ಲಾಪಿಲ್ಲಿಯಾಗಿದೆ. ಇದನ್ನೂ ಓದಿ:ವಿರಾಟ್‌ಗೆ ಭಾರತ ರತ್ನ ಸಿಗಲೇಬೇಕು ಎಂದು ಆಗ್ರಹಿಸಿದ ಸುರೇಶ್​ ರೈನಾ

ನಂದ ಗೋಕುಲದಲ್ಲಿ ಮಳೆ ಅವಾಂತರ..!

ಬೆಂಗಳೂರಿನ ನಾಗವಾರದ ನಂದಗೋಕುಲ ಬಡಾವಣೆಯಲ್ಲಿ ಸುರಿದ ಭಾರೀ ಮಳೆಗೆ ಮನೆಗಳು ಜಲಾವೃತವಾಗಿದ್ದು. ಮನೆಯೊಂದಕ್ಕೆ ನೀರು ನುಗ್ಗಿದ ಕಾರಣ ಮಹಿಳೆಯೊಬ್ಬರು ತಮ್ಮ 2 ತಿಂಗಳ ಹಸುಗೂಸನ್ನ ನೆಂಟರ ಮನೆಗೆ ಎತ್ತಿಕೊಂಡು ಹೋಗಿದ್ದಾರೆ. ಮನೆಯ ಮುಂಭಾಗ ಸಂಪೂರ್ಣ ಜಲಮಯವಾಗಿದ್ದು. ಸ್ಥಳೀಯ ನಿವಾಸಿಗಳು ದಿಕ್ಕು ತೋಚದಂತಾಗಿದ್ದಾರೆ. ಇದನ್ನೂ ಓದಿ :‘ಆ ಟ್ರಂಪ್​ ಬಡ್ಡೆತದು ಹೇಳ್ತು, ಅಂತ ಈ ಬಡ್ಡೆತದು ಕೇಳ್ತು’: ಮೋದಿ ವಿರುದ್ದ ಇಬ್ರಾಹಿಂ ವಾಗ್ದಾಳಿ

ಸಿಸಿಬಿ ಕಛೇರಿ ಜಲಾವೃತ..!

ಶಾಂತಿ ನಗರದಲ್ಲಿರುವ ಸಿಸಿಬಿ ಕಚೇರಿ ಸಂಪೂರ್ಣ ಜಲಾವೃತವಾಗಿದ್ದು. ಕಛೇರಿ ಒಳಗೆ ನೀರು ತುಂಬಿ ದಾಖಲೆಗಳು ಹಾಳಾಗಿರೋ ಸಾಧ್ಯತೆ ಇದೆ. ಕಛೇರಿಯ ಕೆಳಮಹಡಿ ಸಂಪೂರ್ಣ ನೀರಿನಿಂದ ತುಂಬಿ ಹೋಗಿದ್ದು. ಚರಂಡಿ ನೀರು ಕಛೇರಿ ಒಳಗೆ ತುಂಬಿರುವ ಕಾರಣ ಕಛೇರಿ ತುಂಬಾ ಕೆಟ್ಟ ವಾಸನೆ ಇದ್ದು, ಅಧಿಕಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ.

ಇದನ್ನೂ ಓದಿ:ಹಳೆ ವೈಶಮ್ಯ: ಗಾಂಜಾ ಮಾರದಂತೆ ಬುದ್ದಿ ಹೇಳಿದ್ದಕ್ಕೆ ಕೊ*ಲೆ

ಅಷ್ಟೇ ಅಲ್ಲದೇ ಧಾರಾಕಾರ ಮಳೆಗೆ ಮೆಜೆಸ್ಟಿಕ್, ಕೆ ಆರ್ ಮಾರುಕಟ್ಟೆ, ಜಯನಗರ, ವಿಜಯನಗರ, ಚಂದ್ರಲೇಔಟ್, ರಾಜಾಜಿನಗರ, ಆರ್ ಟಿ ನಗರ, ಹೆಬ್ಬಾಳ, ಕೋರಮಂಗಲ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಯಶವಂತಪುರ, ಪೀಣ್ಯ, ಬೊಮ್ಮನ ಹಳ್ಳಿ, ನಾಯಂಡಹಳ್ಳಿ, ಕುಮಾರಸ್ವಾಮಿ ಲೇಔಟ್‌, ಆರ್ ಆರ್ ನಗರ ಸೇರಿದಂತೆ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು. ಜನರು ಗ್ರೇಟರ್​ ಬೆಂಗಳೂರು ಅಥಾರಿಟಿಗೆ ಹಿಡಿಶಾಪ ಹಾಕುವಂತಾಗಿದೆ.

Exit mobile version