Site icon PowerTV

ಕಾಂಗ್ರೆಸ್​ ಮಾಡ್ತಿರೋದು ಸಾಧನ ಸಮಾವೇಶ ಅಲ್ಲ, 2ನೇ ವರ್ಷದ ಪುಣ್ಯ ತಿಥಿ: ಬಿ.ಸಿ ಪಾಟೀಲ್​

ಹಾವೇರಿ : ಬಳ್ಳಾರಿಯ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರ ಎರಡನೇ ವರ್ಷದ ಸಾಧನ ಸಮಾವೇಶ ಮಾಡಲು ತಯಾರಿ ನಡೆಸಿದ್ದು. ಇದರ ಕುರಿತು ಮಾತನಾಡಿದ ಮಾಜಿ ಸಚಿವ ಬಿ,ಸಿ ಪಾಟೀಲ್​ ವಾಗ್ದಾಳಿ ನಡೆಸಿದ್ದು. “ಕಾಂಗ್ರೆಸ್​ ಪಕ್ಷ 2 ವರ್ಷದ ಪೂರೈಸಿದಕ್ಕೆ ಸಾಧನ ಸಮಾವೇಶ ಮಾಡಲು ಹೊರಟಿದೆ, ಇದು ಸಾಧನ ಸಮಾವೇಶ ಅಲ್ಲ. ಎರಡನೇ ವರ್ಷದ ಪುಣ್ಯತಿಥಿ” ಎಂದು ಹೇಳಿದರು.

ಹಾವೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್​ ‘ ಕಾಂಗ್ರೆಸ್ ಪಕ್ಷ 2 ಪೂರೈಸಿ ಸಾಧನ ಸಮಾವೇಶ ಮಾಡಲು ಹೊರಟಿದೆ. ಇದೊಂದು ಸಾಧನ ಸಮಾವೇಶ ಅಲ್ಲ, ಎರಡನೇ ವರ್ಷದ ಪುಣ್ಯತಿಥಿ. ಕಾಂಗ್ರೆಸ್​​ ಸರ್ಕಾರ ಜನರಿಂದ ತಿರಸ್ಕೃತಗೊಂಡಿದೆ. ಇದೊಂದು ಜಾಹಿರಾತಿನ ಸರ್ಕಾರ ಎಂದು ಕಿಡಿಕಾರಿದರು.

ಇದನ್ನೂ ಓದಿ :ರಾಜಧಾನಿಯಲ್ಲಿ ಭಾರಿ ಮಳೆ: ನಗರದ ಕಸವನ್ನ ರಾಮನಗರಕ್ಕೆ ಸಾಗಿಸಿದ ವೃಷಭಾವತಿ

 ಆಪರೇಷನ್​ ಸಿಂಧೂರ್​ ಬಗ್ಗೆ ಬಿ,ಸಿ ಪಾಟೀಲ್​ ಮಾತು..!

ಪೆಹಲ್ಗಾಮ್​ ಬಗ್ಗೆ ಮಾತನಾಡಿದ ಬಿ,ಸಿ ಪಾಟೀಲ್​ “ಪೆಹಲ್ಗಾಮ್​ನಲ್ಲಿ ಹಿಂದೂಗಳನ್ನ ಭಯೋತ್ಪಾದಕರು ಹತ್ಯೆ ಮಾಡಿದರು. ಮೇ.07 ರಂದು ಆಪರೇಷನ್ ಸಿಂಧೂರು ಹೆಸರಲ್ಲಿ ಪ್ರತಿಕಾರವಾಗಿ ದಾಳಿ ನಡೆಸಲಾಗಿದೆ. ಕೇವಲ 23 ನಿಮಿಷಗಳಲ್ಲಿ ಪಾಕಿಸ್ತಾನದ 9 ನೆಲೆಗಳನ್ನ ದ್ವಂಸ ಮಾಡಲಾಗಿದೆ. ಮುಸಲ್ಮಾನರು ಸಹ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‌ಕಾರ್ಯವನ್ನ ಮೆಚ್ಚಿದರು. ಇದನ್ನೂ ಓದಿ :ಮತ್ತೆ ಮಳೆ ಆರಂಭ: ಮುಂದಿನ 4 ಗಂಟೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಆದರೆ ಡೋಂಗಿ ಕಾಂಗ್ರೆಸ್​ ಸರ್ಕಾರ ತಿರಂಗ ಯಾತ್ರೆ ಮಾಡಿದ್ದಾರೆ. ಇದೊಂದು ಡೋಂಗಿ ಯಾತ್ರೆ.  ಆಪರೇಷನ್ ಸಿಂಧೂರು ಬಗ್ಗೆ ಕೈ ನಾಯಕರು ಸಾಕ್ಷಿ ಕೇಳ್ತಿದ್ದಾರೆ, ನಾಚಿಕೆಯಾಗಬೇಕು. ಆಪರೇಷನ್ ಸಿಂಧೂರ ಬಗ್ಗೆ ಸಾಕ್ಷಿ ಬೇಕು ಅನ್ನೋರು ಪಾಕಿಸ್ತಾನಕ್ಕೆ ಹೋಗಿ ಬನ್ನಿ. ಪ್ರಿಯಾಂಕಾ ಖರ್ಗೆಯವರು ಮೇ 07 ರಿಂದ ಮೇ 12 ರವರೆಗೆ ಪ್ರಧಾ ನ ಮಂತ್ರಿಯವರು ಎಲ್ಲಿದ್ರು ಅಂತ ಪ್ರಶ್ನೆ ಮಾಡ್ತಾರೆ. ಕಾಮಲೆ ಕಣ್ಣಿಗೆ ಕಾಣೋದೆಲ್ಲ ಜಗತ್ತೆ ಹಳದಿ ಅನ್ನುವಂತೆ ಆಗಿದೆ. ಇದನ್ನೂ ಓದಿ:ಪ್ರಾಧ್ಯಪಕನೊಂದಿಗೆ ಪ್ರೇಮ ವೈಪಲ್ಯ: ಕಾಲೇಜು ಕಟ್ಟಡದಿಂದ ಜಿಗಿದು ಯುವತಿ ಸಾ*ವು..!

ಪ್ರಧಾನ ಮಂತ್ರಿಯವರು ಏನೇ ಮಾಡಿದರು ತಪ್ಪು ಅಂತ ಕಾಣ್ತಿದೆ. ಬ್ರಹ್ಮೋಸ್ ಬಗ್ಗೆ ಸಚಿವ ಮದು ಬಂಗಾರಪ್ಪ ರವರು ಟೀಕೆ ಮಾಡ್ತಾರೆ. ಬ್ರಹ್ಮೋಸ್ ತಯಾರಿಯಾಗಿದ್ದು ವಾಜಪೇಯಿ ಅವರ ಕಾಲದಲ್ಲಿ. ಕೈ ಸರಕಾರ ತಮ್ಮ ಸಾಧನೆ ಅಂತೇಳಿ ಪಾಕಿಸ್ತಾನದ ಮೇಲೆ ಒಂದೆ ಒಂದು ಗುಂಡು ಹಾಕಿಲ್ಲ. ಸರಕಾರದ ಹಣದಲ್ಲಿ ದುಂದು ವೆಚ್ಚದಲ್ಲಿ ಸಮಾವೇಶ ಮಾಡಲು ಹೊರಟಿದ್ದಾರೆ. ಪತ್ರಿಕೆಗಳ ಜಾಹೀರಾತಿನಲ್ಲಿ ‌ಮಾತ್ರ ಸರಕಾರದ ಸಾಧನೆಯಾಗಿದೆ ಎಂದು ಬಿ.ಸಿ ಪಾಟೀಲ್​ ವಾಗ್ದಾಳಿ ನಡೆಸಿದರು.

Exit mobile version