Site icon PowerTV

ವಿರಾಟ್‌ಗೆ ಭಾರತ ರತ್ನ ಸಿಗಲೇಬೇಕು ಎಂದು ಆಗ್ರಹಿಸಿದ ಸುರೇಶ್​ ರೈನಾ

ಮುಂಬೈ: ಭಾರತೀಯ ಕ್ರಿಕೆಟ್‌ ರಂಗಕ್ಕೆ ವಿರಾಟ್‌ ಕೊಹ್ಲಿ ನೀಡಿರುವ ಅಪಾರ ಕೊಡುಗೆಗಾಗಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಮಾಜಿ ಕ್ರಿಕೆಟಿಗ ಸುರೇಶ್‌ ರೈನಾ ಹೇಳಿದ್ದು.ಐಪಿಎಲ್ ವೀಕ್ಷಣಾ ವಿವರಣೆ ವೇಳೆ ಸುರೇಶ್ ರೈನಾ, ಕೊಹ್ಲಿಗೆ ಭಾರತ ರತ್ನ ನೀಡಬೇಕೆಂದು ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ದಿಗ್ಗಜ ಮತ್ತು ಆಧುನಿಕ ಚೇಸ್‌ ಮಾಸ್ಟರ್ ಎಂದೇ ಕರೆಯಲ್ಪಡುವ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಕಿಂಗ್ ಕೊಹ್ಲಿ ಅವರ ಈ ನಿರ್ಧಾರ ಅಭಿಮಾನಿಗಳಿಗೆ ಬೇಸರ ತಂದಿದೆ. ಇದರ ನಡುವೆ ಸುರೇಶ್​ ರೈನಾ ಈ ರೀತಿಯಾಗಿ ಆಗ್ರಹಿಸಿದ್ದಾರೆ.  ಇದನ್ನೂ ಓದಿ :‘ಆ ಟ್ರಂಪ್​ ಬಡ್ಡೆತದು ಹೇಳ್ತು, ಅಂತ ಈ ಬಡ್ಡೆತದು ಕೇಳ್ತು’: ಮೋದಿ ವಿರುದ್ದ ಇಬ್ರಾಹಿಂ ವಾಗ್ದಾಳಿ

Exit mobile version