Site icon PowerTV

ಬಹುಕಾಲದ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಮಂತ್ ಬ್ರೋ ಗೌಡ

ಬಿಗ್​ಬಾಸ್​ ಸೀಸನ್​ 8 ಖ್ಯಾತಿಯ ಕಿರುತೆರೆ ನಟ ಶಮಂತ್​ ಬ್ರೋ ಗೌಡ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು. ತಮ್ಮ ಬಹುಕಾಲದ ಗೆಳತಿ ಮೇಘನಾ ಜೊತೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ:ಮಸೀದಿಗಳಲ್ಲಿ ಅಪರಿಚಿತ ವ್ಯಕ್ತಿಗಳ ಓಡಾಟ: ಪರಿಶೀಲಿಸುವಂತೆ ಕಮಿಷನರ್​ಗೆ ಬೆಲ್ಲದ್​ ಪತ್ರ

ನಿನ್ನೆ ಅದ್ಧೂರಿಯಾಗಿ ರಿಸೆಪ್ಶನ್​ ಮಾಡಿಕೊಂಡಿದ್ದ ಶಮಂತ್​ ಮತ್ತು ಮೇಘನಾ ಇಂದು ನವಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ರಾತ್ರಿ ನಡೆದ ಆರತಕ್ಷತೆಗೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್, ಬಿಗ್ ಬಾಸ್ ನವಾಜ್, ರ‍್ಯಾಪರ್ ಆಲ್ ಓಕೆ, ನಟಿ ಮೌನ ಗುಡ್ಡೆಮನೆ, ‘ಭಾಗ್ಯಲಕ್ಷ್ಮಿ’ ಸೀರಿಯಲ್ ಬಾಲನಟ ಗುಂಡಣ್ಣ ಅಲಿಯಾಸ್ ನಿಹಾರ್, ತನ್ವಿ ಅಲಿಯಾಸ್ ಅಮೃತಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ಇನ್ನೂ, ಎಷ್ಟೋ ಜನಕ್ಕೆ ಶಮಂತ್ ಉತ್ತರ ಕರ್ನಾಟಕದ ಹುಡುಗ ಅಂತ ಗೊತ್ತಿಲ್ಲ. ಅವರ ಪೂರ್ತಿ ಹೆಸರು ಶಮಂತ್​ ಹಿರೇಮಠ. ಮೇಘನಾ ಕುಟುಂಬಸ್ಥರು ಮರಾಠಿಗರಾಗಿದ್ದು. ಎರಡು ರೀತಿಯ ಪದ್ದತಿಯಂತೆ ಮನೆಯವರು ಮದುವೆ ಶಾಸ್ತ್ರಗಳನ್ನ ನಡೆಸಿದ್ದಾರೆ. ‘ಬಿಗ್ ಬಾಸ್ ಕನ್ನಡ 8’ರಲ್ಲಿ ಶಮಂತ್ ಸ್ಪರ್ಧಿಯಾಗಿದ್ದರು. ಈ ಶೋನಲ್ಲಿ ಮಂಜು ಪಾವಗಡ ಗೆದ್ದಿದ್ದರು. ಈ ಕಾರ್ಯಕ್ರಮ ಬಳಿಕ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಶಮಂತ್ ಲೀಡ್ ಹೀರೋ ಆಗಿ ನಟಿಸಿದ್ದರು.

Exit mobile version