Site icon PowerTV

ಭಾರತವೇ ಕದನ ವಿರಾಮ ಪ್ರಸ್ತಾಪಿಸಿದೆ ಅಂತ ಪಾಕ್​ ಪ್ರಧಾನಿ ಹೇಳಿದ್ದಾರೆ: ಪ್ರಿಯಾಂಕ್​ ಖರ್ಗೆ

ಬೆಂಗಳೂರು : “ಅಪರೇಷನ್ ಸಿಂದೂರ” ಕಾರ್ಯಚರಣೆ ವಿರುದ್ದ ಮಾತನಾಡುವ ನಾಯಕರನ್ನ ಪಾಕಿಸ್ತಾನಕ್ಕೆ ಕಳಿಸಬೇಕೆಂದು ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ​ ಸಚಿವ ಪ್ರಿಯಾಂಕ್​ ಖರ್ಗೆ “ಕದನ ವಿರಾಮದ ಪ್ರಸ್ತಾಪ ಪಾಕ್​ನಿಂದ ಆಗಿದ್ದರೆ ಬಹಳ ಸಂತೋಷ, ಆದರೆ ಬಿಜೆಪಿಯವರ ಹೇಳಿಕೆಗೂ ಅಮೇರಿಕಾ ಅಧ್ಯಕ್ಷರ ಹೇಳಿಕೆಗೂ ವ್ಯತ್ಯಾಸವಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕ್​ ಖರ್ಗೆ “ಕದನ ವಿರಾಮ ನಮ್ಮಿಂದ ಘೋಷಣೆಯಾಗಿದೆ ಅಂತ ಡೋನಾಲ್ಡ್​ ಟ್ರಂಪ್​ 7ನೇ ಭಾರಿ ಹೇಳಿದ್ದಾರೆ. ಟ್ರಂಪ್​ ಅವರ ಪ್ರೆಸ್​ ಸೆಕ್ರೆಟರಿ ಕೂಡ ಈ ಕುರಿತು ಪೋಸ್ಟ್​ ಹಾಕಿದ್ದಾರೆ. ಹಾಗಿದ್ದರೆ ನಮ್ಮ ವಿದೇಶಾಂಗ ನೀತಿಯ ತೀರ್ಮಾನ ಮಾಡುತ್ತಿರೋದು ಮೋದಿನ ಅಥವಾ ಡೋನಾಲ್ಡ್​ ಟ್ರಂಪ್​ ಎಂಬ ಬಗ್ಗೆ ಮಾತನಾಡಬೇಕು. ಇದನ್ನೂ ಓದಿ :ಅಮೆರಿಕಾದಿಂದ ಪಾಕ್​ ಬದುಕುಳಿದಿದೆ: ಭಾರತದ ದಾಳಿಯ ಬಗ್ಗೆ ಸತ್ಯ ಬಿಚ್ಚಿಟ್ಟ ಪಾಕ್​ ಪರ್ತಕರ್ತ

ನಾವು ಇಲ್ಲಿಯವರೆಗೂ ಆಪರೇಷನ್​ ಸಿಂಧೂರದ ಬಗ್ಗೆ ಮಾತನಾಡಿಲ್ಲ, ಕಾರ್ಯಚರಣೆ ಬಗ್ಗೆ ಕೊಟ್ಟಿರೋ ದಾಖಲೆ ಬಗ್ಗೆ ಕೂಡ ನಾವು ಮಾತನಾಡಿಲ್ಲ. ಆದರೆ ಬಿಜೆಪಿ ಸೈನಿಕರಿಗೆ ಅಗೌರವ ನೀಡುತ್ತಿದೆ. ಸೋಫಿಯಾ ಕುರೇಶಿ ಬಗ್ಗೆ ಮಧ್ಯ ಪ್ರದೇಶದ ಸಚಿವರು ಮಾತಾಡ್ತಾರೆ, ಇವರ ಮೇಲೆ ಇನ್ನು ಕ್ರಮ ತೆಗೆದುಕೊಂಡಿಲ್ಲ. ಅವರನ್ನು ಸಂಪುಟದಿಂದ ವಜಾ ಮಾಡಿಲ್ಲ. ಇಂತವರಿಂದ ನಾವು ಕಲಿಯಬೇಕಿಲ್ಲ, ಈ ಕುರಿತು ಮಾತನಾಡುವ ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದು ಹೇಳಿದರು. ಇದನ್ನೂ ಓದಿ :ಕನ್ನಡಿಗರಿಗೆ ಅಪಮಾನ ಮಾಡಿದ್ದ ಹೋಟೆಲ್​ ಸೀಜ್: ಮ್ಯಾನೇಜರ್ ಬಂಧನ

ಮುಂದುವರಿದು ಮಾತನಾಡಿದ ಖರ್ಗೆ “ನಮ್ಮ ವಿದೇಶಾಂಗ ನೀತಿ ಬಗ್ಗೆ ಅಮೇರಿಕಾದ ಅಧ್ಯಕ್ಷರು ಮಾತಾಡ್ತಾರೆ. ಮೋದಿ 100 ದೇಶ ಸುತ್ತಿ 200 ಜನರನ್ನ ಅಪ್ಪಿಕೊಂಡರು, ಇದರ ಪ್ರಯೋಜನ ಏನಾಯ್ತು. ಮೇಕ್ ಇನ್ ಇಂಡಿಯಾ ಮಾಡಬಾರದು , ಆ್ಯಪಲ್ ಫೋನ್ ತಯಾರಿ ಮಾಡಬಾರದು ಅಂತ ಟ್ರಂಪ್​ ನೇರವಾಗಿ ಹೇಳ್ತಾರೆ. ಟ್ರಂಪ್​ ಹೇಳಿದ್ದಕ್ಕೆ ತೆರಿಗೆಯನ್ನ ಶೂನ್ಯ ಮಾಡಿದ್ದಾರೆ. ಇದರ ಬಗ್ಗೆ ಯಾರು ಮಾತನಾಡುತ್ತಿಲ್ಲ. ಇದಕ್ಕೆ ಅಶೋಕ್, ವಿಜಯೇಂದ್ರ ಉತ್ತರ ಕೊಡ್ತಾರಾ. ಇದಕ್ಕೆ ಮೋದಿ ಉತ್ತರ ಕೊಡಬೇಕು. ಕದನ ವಿರಾಮ ಪ್ರಸ್ತಾಪಿಸಿದ್ದು ಭಾರತ ಅಂತ ಪಾಕಿಸ್ತಾನದ ಪ್ರಧಾನಿ ಹೇಳ್ತಾರೆ. ಆದರೆ ನಮ್ಮ ಪ್ರಧಾನಿ ಪಾರ್ಲಿಮೆಂಟ್​ ಅಧಿವೇಶನ ಕರೆದು ಯಾಕೆ ಮಾತನಾಡುತ್ತಿಲ್ಲ ಎಂದು ಹೇಳಿದರು.

Exit mobile version