Site icon PowerTV

ಬೇಹುಗಾರಿಕೆ ಆರೋಪ: ವಿಚಾರಣೆ ವೇಳೆ ಜ್ಯೋತಿ ಕುರಿತು ಸ್ಪೋಟಕ ಮಾಹಿತಿ ಬಹಿರಂಗ

ದೆಹಲಿ : ಪಾಕಿಸ್ತಾನದ ಪರ ಗೂಡಚಾರಿಕೆ ಮಾಡುತ್ತಿದ್ದ ಹರಿಯಾಣ ಮೂಲದ ಯೂಟ್ಯೂಬರ್​ ಜ್ಯೋತಿ ಮಲ್ಹೋತ್ರಾ ಎಂಬಾಕೆಯನ್ನ ಭಾರತದ ಗುಪ್ತಚರ ಇಲಾಖೆ ಬಂಧಿಸಿದ್ದು. ಜ್ಯೋತಿ ಅವರ ಮೊಬೈಲ್ ಫೋನ್ ಮತ್ತು ವಶಪಡಿಸಿಕೊಂಡ ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಈಕೆಯನ್ನ ಹರಿಯಾಣ ಪೊಲೀಸರು ಬಂಧಿಸಿದ್ದು. ಸ್ಥಳೀಯ ನ್ಯಾಯಾಲಯವು ಆಕೆಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಪೊಲೀಸರ ಪ್ರಕಾರ, ಪೊಲೀಸರು ಆಕೆಯ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅನ್ನು ವಶಪಡಿಸಿಕೊಂಡ ನಂತರ ಅನುಮಾನಾಸ್ಪದ ವಸ್ತುಗಳು ಕಂಡುಬಂದಿವೆ. ಹೆಚ್ಚುವರಿಯಾಗಿ, ಹಿಸಾರ್‌ನ ಉಪ ಸೂಪರಿಂಟೆಂಡೆಂಟ್ ಕಮಲ್‌ಜೀತ್, ವ್ಲಾಗರ್ ಪಾಕಿಸ್ತಾನಿ ಪ್ರಜೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಹೇಳಿದರು.

ಇದನ್ನೂ ಓದಿ :ಚಾರ್​ಮಿನಾರ್​ ಬಳಿ ಭಾರೀ ಅಗ್ನಿ ದುರಂತ: ಮಕ್ಕಳು ಸೇರಿದಂತೆ 17 ಮಂದಿ ಸಜೀವ ದಹನ

ಇದನ್ನೂ ಓದಿ :ಪಂಜಾಬ್​ಗೆ​ ತೆರಳಿದ್ದ ಧರ್ಮಸ್ಥಳ ಮೂಲದ ಏರೋಸ್ಪೇಸ್​ ಇಂಜಿನಿಯರ್​ ನಿಗೂಢವಾಗಿ ಸಾವು

ಜ್ಯೋತಿ ಮಲ್ಹೋತ್ರಾ ಜೊತೆಗೆ ಗಜಾಲಾ (ಪಂಜಾಬ್‌ನಿಂದ), ಯಾಸೀನ್ ಮೊಹಮ್ಮದ್, ಇಮಾನ್ ಇಲಾಹಿ (ಯುಪಿಯ ಕೈರಾನಾದಿಂದ), 26 ವರ್ಷದ ಅರ್ಮಾನ್ (ನುಹ್ ನಿಂದ ಬಂಧಿಸಲಾಗಿದೆ), 25 ವರ್ಷದ ದೇವೇಂದ್ರ ಸಿಂಗ್ ಧಿಲ್ಲೋನ್ (ಕೈತಾಲ್‌ನಿಂದ ಬಂಧಿಸಲಾಗಿದೆ. ಬಂಧಿತ ಎಲ್ಲಾ ಶಂಕಿತರು ಪರಸ್ಪರ ಸಂಪರ್ಕ ಹೊಂದಿದ್ದಾರೆಯೇ ಅಥವಾ ಡ್ಯಾನಿಶ್ ಅವರನ್ನು ಬೇಹುಗಾರಿಕೆಗಾಗಿ ಪ್ರತ್ಯೇಕವಾಗಿ ನೇಮಿಸಿಕೊಂಡಿದ್ದಾರೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಚೀನಾಗೂ ಭೇಟಿ ನೀಡಿದ್ದಳು ಜ್ಯೋತಿ..!

ಜ್ಯೋತಿ 2024 ರಲ್ಲಿ ಸುಮಾರು 12 ದಿನಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಳು. ನಂತರ ಈಕೆ ಕೂಡಲೇ ಚೀನಾಕ್ಕೆ ಭೇಟಿ ನೀಡಿದ್ದಳು. ಈ ವಿಷಯ ಭದ್ರತಾ ಪಡೆಗಳ ಗಮನಕ್ಕೂ ಬಂದಿತ್ತು. ಚೀನಾದಲ್ಲಿ, ಐಷಾರಾಮಿ ಕಾರುಗಳಲ್ಲಿ, ಆಭರಣ ಅಂಗಡಿಗಳು ಸೇರಿದಂತೆ ಹಲವು ಸ್ಥಳಗಳನ್ನು ಸುತ್ತಿದ್ದಳು. ಇದು ಬೆಳಕಿಗೆ ಬಂದ ತಕ್ಷಣ, ಭಾರತೀಯ ಭದ್ರತಾ ಸಂಸ್ಥೆಗಳು ಅವನ ಉದ್ದೇಶಗಳು ಮತ್ತು ಖರ್ಚಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವು.

ಇದನ್ನೂ ಓದಿ :ಅಮೆರಿಕಾದಿಂದ ಪಾಕ್​ ಬದುಕುಳಿದಿದೆ: ಭಾರತದ ದಾಳಿಯ ಬಗ್ಗೆ ಸತ್ಯ ಬಿಚ್ಚಿಟ್ಟ ಪಾಕ್​ ಪರ್ತಕರ್ತ

ವಿದೇಶಗಳಲ್ಲಿ ಮಾತ್ರ ವಿಐಪಿ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುವ ಮತ್ತು ದುಬಾರಿ ಕಾರುಗಳಲ್ಲಿ ಪ್ರಯಾಣಿಸಿ  ತನ್ನ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದ ಜ್ಯೋತಿ, ಭಾರತಕ್ಕೆ ಬಂದ ನಂತರ ಅವಳು ಸಾಮಾನ್ಯ ಹುಡುಗಿಯ ಜೀವನವನ್ನು ನಡೆಸುತ್ತಿದ್ದಳು.

Exit mobile version