ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಕಳೆದ ಮಾರ್ಚ್ 27ರಂದು ದೇವಸ್ಥಾನವೊಂದರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ನಾನ್ ಫಿಕ್ಷನ್ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದ ಅಭಿಷೇಕ್ ಎಂಬುವವರ ಜೊತೆ ಸರಳವಾಗಿ ಮದುವೆಯಾಗಿದ್ದರು. ಇದೀಗ ಅವರು ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದು. ಇದರ ವಿಡಿಯೋಗಳು ವೈರಲ್ ಆಗಿವೆ.
ಕಳೆದ ಮಾರ್ಚ್ 27ರಂದು ಪೃತ್ವಿಭಟ್ ಅವರು ಸರಿಗಮಪ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಭಿಷೇಕ್ ಎಂಬುವವರ ಜೊತೆ ಮದುವೆಯಾಗಿದ್ದರು. ಈ ಮದುವೆಗೆ ಪೃಥ್ವಿ ಭಟ್ ತಂದೆ ಅವರ ವಿರೋಧ ಇತ್ತು. ಮನೆಯವರಿಗೆ ತಿಳಿಸದೆ ಪೃಥ್ವಿ ಭಟ್ ಮದುವೆಯಾಗಿದ್ದರು. ಮದುವೆಯಾದ ಬಳಿಕ ಅವರು ತಂದೆಗೆ ಈ ವಿಷಯವನ್ನು ತಿಳಿಸಿದ್ದರು. ಇದನ್ನೂ ಓದಿ :ಬಿಜೆಪಿಯವರು ಕರೆಯದೆ ಅವರಪ್ಪನಾಣೆ ನಾನು ಬಿಜೆಪಿಗೆ ಹೋಗಲ್ಲ: ಯತ್ನಾಳ್
ಮಗಳ ಮದುವೆ ಕುರಿತು ಅವರ ತಂದೆ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಅಭಿಷೇಕ್ ಅವರ ಜಾತಿ ಬೇರೆ. ಮಗಳು ನನ್ನ ಮೇಲೆ ಆಣೆ ಮಾಡಿಯೂ ಕೂಡ ಓಡಿ ಹೋಗಿ ಮದುವೆ ಆಗಿದ್ದಾಳೆ. ನರಹರಿ ದೀಕ್ಷಿತ್ ಮಗಳನ್ನು ವಶೀಕರಣ ಮಾಡಿ ಕರೆದೊಯ್ದಿದ್ದಾರೆ ಎಂದು ಅವರ ತಂದೆ ಆರೋಪ ಮಾಡಿದ್ದರು. ಆದರೆ ಈ ಕುರಿತು ಸ್ಪಷ್ಟನೆ ನೀಡಿದ್ದ ಪೃಥ್ವಿ ಭಟ್ ತಮ್ಮ ತಂದೆಯ ಬಳಿ ಕ್ಷಮೆ ಕೇಳಿದ್ದರು.
ಇದೀಗ ಪೃಥ್ವಿ ಭಟ್ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದು. ಈ ಆರತಕ್ಷತೆಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್, ನಿರೂಪಕಿ ಅನುಶ್ರೀ, ಬಿಗ್ಬಾಸ್ ವಿನ್ನರ್ ಹನುಮಂತು, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಹಲವರು ಜೀ ವಾಹಿನಿಯ ತಂತ್ರಜ್ಞರು ಭಾಗವಹಿಸಿದ್ದಾರೆ. ಒಂದು ಖಾಸಗಿ ವಾಹಿನಿಯೇ ಈ ಆರತಕ್ಷತೆಯಲ್ಲಿ ಭಾಗಿಯಾದಂತೆ ಕಾಣಿಸಿದೆ.