Monday, August 25, 2025
Google search engine
HomeUncategorizedಸರಿಗಮಪ ಸಿಂಗರ್​ ಪೃಥ್ವಿ ಭಟ್‌ ಅದ್ಧೂರಿ ರಿಸೆಪ್ಷನ್: ವಿಜಯ್​ ಪ್ರಕಾಶ್​ ಸೇರಿದಂತೆ ಹಲವರು ಭಾಗಿ

ಸರಿಗಮಪ ಸಿಂಗರ್​ ಪೃಥ್ವಿ ಭಟ್‌ ಅದ್ಧೂರಿ ರಿಸೆಪ್ಷನ್: ವಿಜಯ್​ ಪ್ರಕಾಶ್​ ಸೇರಿದಂತೆ ಹಲವರು ಭಾಗಿ

ಸರಿಗಮಪ ಖ್ಯಾತಿಯ ಪೃಥ್ವಿ ಭಟ್​ ಕಳೆದ ಮಾರ್ಚ್​ 27ರಂದು ದೇವಸ್ಥಾನವೊಂದರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ನಾನ್‌ ಫಿಕ್ಷನ್‌ ವಿಭಾಗದಲ್ಲಿ ಎಕ್ಸಿಕ್ಯೂಟಿವ್‌ ಪ್ರೊಡ್ಯೂಸರ್‌ ಆಗಿದ್ದ ಅಭಿಷೇಕ್‌ ಎಂಬುವವರ ಜೊತೆ ಸರಳವಾಗಿ ಮದುವೆಯಾಗಿದ್ದರು. ಇದೀಗ ಅವರು ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದು. ಇದರ ವಿಡಿಯೋಗಳು ವೈರಲ್​ ಆಗಿವೆ.

ಕಳೆದ ಮಾರ್ಚ್ 27ರಂದು ಪೃತ್ವಿಭಟ್ ಅವರು ಸರಿಗಮಪ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಭಿಷೇಕ್​ ಎಂಬುವವರ ಜೊತೆ ಮದುವೆಯಾಗಿದ್ದರು. ಈ ಮದುವೆಗೆ ಪೃಥ್ವಿ ಭಟ್‌ ತಂದೆ ಅವರ ವಿರೋಧ ಇತ್ತು. ಮನೆಯವರಿಗೆ ತಿಳಿಸದೆ ಪೃಥ್ವಿ ಭಟ್‌ ಮದುವೆಯಾಗಿದ್ದರು. ಮದುವೆಯಾದ ಬಳಿಕ ಅವರು ತಂದೆಗೆ ಈ ವಿಷಯವನ್ನು ತಿಳಿಸಿದ್ದರು. ಇದನ್ನೂ ಓದಿ :ಬಿಜೆಪಿಯವರು ಕರೆಯದೆ ಅವರಪ್ಪನಾಣೆ ನಾನು ಬಿಜೆಪಿಗೆ ಹೋಗಲ್ಲ: ಯತ್ನಾಳ್​

ಮಗಳ ಮದುವೆ ಕುರಿತು ಅವರ ತಂದೆ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಅಭಿಷೇಕ್‌ ಅವರ ಜಾತಿ ಬೇರೆ. ಮಗಳು ನನ್ನ ಮೇಲೆ ಆಣೆ ಮಾಡಿಯೂ ಕೂಡ ಓಡಿ ಹೋಗಿ ಮದುವೆ ಆಗಿದ್ದಾಳೆ. ನರಹರಿ ದೀಕ್ಷಿತ್​ ಮಗಳನ್ನು ವಶೀಕರಣ ಮಾಡಿ ಕರೆದೊಯ್ದಿದ್ದಾರೆ ಎಂದು ಅವರ ತಂದೆ ಆರೋಪ ಮಾಡಿದ್ದರು. ಆದರೆ ಈ ಕುರಿತು ಸ್ಪಷ್ಟನೆ ನೀಡಿದ್ದ ಪೃಥ್ವಿ ಭಟ್​ ತಮ್ಮ ತಂದೆಯ ಬಳಿ ಕ್ಷಮೆ ಕೇಳಿದ್ದರು.

ಇದೀಗ ಪೃಥ್ವಿ ಭಟ್​ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದು. ಈ ಆರತಕ್ಷತೆಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್​, ನಿರೂಪಕಿ ಅನುಶ್ರೀ, ಬಿಗ್​ಬಾಸ್​ ವಿನ್ನರ್ ಹನುಮಂತು, ಶಿವರಾಜ್ ಕೆ.ಆರ್​ ಪೇಟೆ ಸೇರಿದಂತೆ ಹಲವರು ಜೀ ವಾಹಿನಿಯ ತಂತ್ರಜ್ಞರು ಭಾಗವಹಿಸಿದ್ದಾರೆ. ಒಂದು ಖಾಸಗಿ ವಾಹಿನಿಯೇ ಈ ಆರತಕ್ಷತೆಯಲ್ಲಿ ಭಾಗಿಯಾದಂತೆ ಕಾಣಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments