Site icon PowerTV

ಕ್ರಿಕೆಟ್​ ಆಡಬೇಡ ಎಂದು ಹೇಳಿದ ಶಿಕ್ಷಕನಿಗೆ ಬಿಯರ್​ ಬಾಟಲ್​ನಿಂದ ಇರಿದ ಯುವಕ

ಬಾಗಲಕೋಟೆ : ಕ್ರಿಕೆಟ್​ ಆಡುತ್ತಿದ್ದ ಯುವಕನಿಗೆ ಶಿಕ್ಷಕರೊಬ್ಬರು ಬೈದಿದಕ್ಕೆ ಕೋಪಗೊಂಡ ಯುವಕನೊಬ್ಬ ಶಿಕ್ಷಕರಿಗೆ ಬಿಯರ್​​ ಬಾಟಿಲಿಯಿಂದ ಇರಿದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು. ಹಲ್ಲೆ ನಡೆಸಿದ ಯುವಕನನ್ನು 21 ವರ್ಷದ ಪವಲ್ ಜಾದವ್​ ಎಂದು ಗುರುತಿಸಲಾಗಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಶಿಕ್ಷಕ ರಾಮಪ್ಪನ ಮನೆ ಬಳಿ ಅರೋಪಿ ಪವನ್ ಗೆಳೆಯರೊಂದಿಗೆ ಕ್ರಿಕೆಟ್ ಆಡುವ ವೇಳೆ, ಬಾಲ್ ಶಿಕ್ಷಕನ ಮನೆ‌ ಕಡೆ ಹೋಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಪವನ್​ ಶಿಕ್ಷಕ ರಾಮಪ್ಪನ ಬಳಿ ಮನೆಯೊಳಗೆ ಬಾಲ್​ ಹೋಗಿದೆ ಕೊಡಿ ಎಂದು ಕೇಳಿದ್ದ. ಆದರೆ ರಾಮಪ್ಪ ಇಲ್ಲಿ ಬಾಲ್​ ಬಂದಿಲ್ಲ ಎಂದು ಯುವಕನಿಗೆ ಬೈದಿದ್ದ. ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು,  ಯುವಕ ರಾಮಪ್ಪನಿಗೆ ನಿನ್ನ ನೋಡ್ಕೋತಿನಿ ಅಂತ ವಾರ್ನಿಂಗ್​ ಮಾಡಿದ್ದನು. ಇದನ್ನೂ ಓದಿ :ಭಯೋತ್ಪಾದನೆಯ DNA ಕಿತ್ತು ಹಾಕಬೇಕು, ವೋಟ್​ಗಾಗಿ ಬ್ರದರ್ಸ ಅನ್ನಬಾರದು: ಸಿ,ಟಿ ರವಿ

ಇದೇ ಸೇಡಿನ್ನು ಇಟ್ಟುಕೊಂಡಿದ್ದ ಯುವಕ ಪವನ್​ ನಿನ್ನೆ ಶಿಕ್ಷಕ ರಾಮಪ್ಪ ಕೆಲಸ ಮಾಡುತ್ತಿದ್ದ  ಬಿಎಲ್​ಡಿಇ ಖಾಸಗಿ ಶಾಲೆಗೆ ಎಂಟ್ರಿ ಕೊಟ್ಟಿದ್ದು. ಬಿಯರ್ ಬಾಟೆಲ್​ನಿಂದ ರಾಮಪ್ಪನ ಮುಖಕ್ಕೆ ಇರಿದು ಗಾಯ ಗಂಭೀರ ಗಾಯಮಾಡಿದೆ. ಶಿಕ್ಷಕನಿಗೆ ಬಾಟಲಿ ಇರಿದ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ‌ಸದ್ಯ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಶಿಕ್ಷಕ ರಾಮಪ್ಪ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ :ಚೈತ್ರಾ ಕುಂದಾಪುರ ತಂದೆ ಮಾನಸಿಕ ಅಸ್ವಸ್ಥ; ಮಗಳ ಪರ ಬ್ಯಾಟ್ ಬೀಸಿದ ತಾಯಿ ರೋಹಿಣಿ

ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಟಲಿ ಇರಿತಕ್ಕೆ ಸಂಬಂಧಿಸಿದಂತೆ ಯುವಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಾವಳಗಿ ಪೊಲೀಸ್ ಠಾಣೆಯ ಪೊಲೀಸರು ಯುವಕನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Exit mobile version