Site icon PowerTV

ಭಯೋತ್ಪಾದನೆಯ DNA ಕಿತ್ತು ಹಾಕಬೇಕು, ವೋಟ್​ಗಾಗಿ ಬ್ರದರ್ಸ ಅನ್ನಬಾರದು: ಸಿ,ಟಿ ರವಿ

ಬೆಂಗಳೂರು : ಭಯೋತ್ಪಾದನೆ ವಿರುದ್ದ ಭಾರತೀಯ ಸೇನೆ ನಡೆಸಿದ ಆಪರೇಷನ್​ ಸಿಂಧೂರ್ ಮತ್ತು ಭಯೋತ್ಪಾದನೆ ಕುರಿತು ಮಾತನಾಡಿದ ಪರಿಷತ್​ ಶಾಸಕ ಸಿ.ಟಿ ರವಿ ‘ಭಯೋತ್ಪಾದನೆಯ ಡಿಎನ್​ಎ ಕಿತ್ತು ಹಾಕಬೇಕಿದೆ. ವೋಟ್​ ಬ್ಯಾಂಕ್​ಗಾಗಿ ಅವರನ್ನು ಪೋಷಿಸುತ್ತಿರೋದು ಯಾರು? ಅವರನ್ನು ಮೈ ಬ್ರದರ್ಸ್​ ಅಂತ ಕರೆದವರು ಯಾರು ಎಂದು ಸಿ,ಟಿ ರವಿ ಪ್ರಶ್ನಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ವಿಧಾನ ಪರಿಷತ್​ ಸದಸ್ಯ ಸಿ.ಟಿ ರವಿ ‘ ತಾಜ್ ಹೊಟೇಲ್ ಮೇಲೆ ದಾಳಿ ಆದಾಗ, ವಾರಣಾಸಿ ಸ್ಪೋಟ ಆದಾಗ, ರೈಲು ಸ್ಫೋಟ ಆದಾಗ, ಮಾಲೇಗಾಂವ್ ಸ್ಫೋಟ, ಅಹಮದಾಬಾದ್ ಬಾಂಬ್ ಸ್ಫೋಟ, ದೆಹಲಿ ಬಾಂಬ್ ಸ್ಫೋಟ್, ಪುಣೆ ಬಾಂಬ್ ಸ್ಫೋಟ ಇದೆಲ್ಲ ಆದಾಗ ಕಾಂಗ್ರೆಸ್​ ಯಾವ ಕ್ರಮ ಕೈಗೊಂಡ್ರು, ಯಾವ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರು? ಕಾಂಗ್ರೆಸ್‌ನವರು ಸೇನೆಗೆ ಸ್ವಾತಂತ್ರ್ಯ ಕೊಟ್ಟಿದ್ರಾ?
ಆಗೆಲ್ಲ ಭಯೋತ್ಪಾದನೆ ಬೇರು ಸಮೇತ ಕಿತ್ ಹಾಕಬೇಕು ಅಂತ ಅನಿಸಿಲಿಲ್ಲ. ಈಗ ಅನಿಸುತ್ತಿರೋದರ ಹಿಂದೆ ಕಾರಣ ಏನಿದೆ..? ಇದನ್ನೂ ಓದಿ :ಚೈತ್ರಾ ಕುಂದಾಪುರ ತಂದೆ ಮಾನಸಿಕ ಅಸ್ವಸ್ಥ; ಮಗಳ ಪರ ಬ್ಯಾಟ್ ಬೀಸಿದ ತಾಯಿ ರೋಹಿಣಿ

ಭಯೋತ್ಪಾದನೆಯ ಮೂಲ ಅದರ ಡಿಎನ್​ಎನಲ್ಲೇ ಇದೆ, ಮೊದಲು ಅದನ್ನ ಕಿತ್ತು ಹಾಕಬೇಕಿದೆ.  ಇಥಿಯೋಪಿಯಾ, ಸುಡಾನ್, ಹಮಾಸ್ ಭಯೋತ್ಪಾದನೆ, ಆಫ್ಘಾನಿಸ್ತಾನ, ಇರಾಕ್, ಇರಾನ್, ಟ್ವಿನ್ ಟವರ್ ಸ್ಫೋಟ ಇದಕ್ಕೆಲ್ಲ ಯಾವ ಭಯೋತ್ಪಾದನೆಯ ಡಿಎನ್‌ಎ ಕಾರಣ? ಈ ಡಿಎನ್‌ಎ ಅನ್ನು ಮತಬ್ಯಾಂಕ್​ಗಾಗಿ ಪೋಷಿಸುತ್ತಿರೋದು ಯಾರು? ಅವರನ್ನು ಮೈ ಬ್ರದರ್ಸ್​ ಅಂದವರು ಯಾರು ? ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಸಾಕ್ಷಿ ಕೇಳಿದವರು ಇದೇ ಕಾಂಗ್ರೆಸ್‌ನವರು. ಈಗ ಪಾಕ್ ಉಗ್ರರ ಮೇಲಿನ ದಾಳಿಗೆ ಭಾರತ ಜಾಗತಿಕ ಸಾಕ್ಷ್ಯ ಕೊಟ್ಟಿದೆ ಎಂದು ಹೇಳಿದರು. ಇದನ್ನೂ ಓದಿ:ಕೇಂದ್ರ ಸರ್ಕಾರ ನಾಲ್ಕು ಫ್ಲೈಟ್​ ಕಳ್ಸಿದ್​ ಬಿಟ್ರೆ ಏನು ಮಾಡಿಲ್ಲ: ಶಾಸಕ ಕೊತ್ತೂರು ಮಂಜುನಾಥ್​ ಅನುಮಾನ

ಮುಂದುವರಿದು ಮಾತನಾಡಿದ ಸಿ,ಟಿ ರವಿ “ಯುದ್ಧ ನಿಲ್ಲಿಸಿಲ್ಲ, ಇದು ತಾತ್ಕಾಲಿಕ ಅಷ್ಟೇ, ಮತ್ತೆ ಯುದ್ಧ ಶುರುವಾದರೆ ಅವರ ತಲೇನೂ, ಬಾಲನೂ ಕಟ್ ಆಗುತ್ತೆ. ಭಯೋತ್ಪಾದನೆಯ ಮೂಲ ಕಿತ್ತು ಹಾಕಲು ಕಾಂಗ್ರೆಸ್​ ನಮ್ಮ ಜೊತೆ ಕೈಜೋಡಿಸಲಿ. ಇದಕ್ಕೆ ಕಾಂಗ್ರೆಸ್​ ಸಿದ್ದವಾಗಿದೆಯಾ. ಭಯೋತ್ಪಾದನೆ ಬೆಳೆಸುವ ವ್ಯವಸ್ಥೆಯ ಕೇಂದ್ರಗಳಿಗೆ ನೀರು ಗೊಬ್ಬರ ಹಾಕಿ ಪೋಷಿಸ್ತಿರೋರು ಕಾಂಗ್ರೆಸ್. ಕಾಂಗ್ರೆಸ್ ಮನಸ್ಥಿತಿ ಬದಲಾಗಬೇಕು.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಪಾಕ್ ನ್ಯಾಷನಲ್ ಕಾಂಗ್ರೆಸ್ ತರ ಯಾಕೆ ವರ್ತಿಸ್ತಿದೆ. ಭಯೋತ್ಪಾದನೆಯ ಮೂಲವನ್ನ ಮೊದಲು ಮಟ್ಟ ಹಾಕಬೇಕು ಎಂದು ಹೇಳಿದರು.

Exit mobile version