Site icon PowerTV

ಕೋವಿಡ್​ ಹೊಸ ಅಲೆ ಆರಂಭ: ಹಾಂಗ್​ಕಾಂಗ್​, ಸಿಂಗಪೂರದಲ್ಲಿ ಕೋವಿಡ್​ ಪ್ರಕರಣ ಹೆಚ್ಚಳ

ಕಳೆದ ಕೆಲ ವರ್ಷಗಳಿಂದ ಕಾಣೆಯಾಗಿದ್ದ ಕೋವಿಡ್​ 19 ಹೊಸ ಅಲೆ ಮತ್ತೆ ಶುರುವಾಗಿದ್ದು. ಹಾಂಗ್​ಕಾಂಗ್​ ಮತ್ತು ಸಿಂಗಾಪುರದಲ್ಲಿ ಕೋವಿಡ್​-19 ಸೋಂಕುಗಳು ಹೆಚ್ಚಾಗುತ್ತಿದ್ದಂತೆ ಆರೋಗ್ಯ ಅಧಿಕಾರಿಗಳು ಎಚ್ಚರಕೆ ನೀಡಿದ್ದಾರೆ. ಪ್ರಕರಣಗಳ ಹೆಚ್ಚಳವು ಏಷ್ಯಾದಾದ್ಯಂತ ಮತ್ತೆ ಅಲೆಯೊಂದು ಮರುಕಳಿಸುತ್ತಿದೆ ಎಂಬ ಸೂಚನೆಯನ್ನು ನೀಡಿದೆ.

ಹಾಂಗ್ ಕಾಂಗ್‌ನಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಹಾಂಗ್ ಕಾಂಗ್‌ನಲ್ಲಿ ವೈರಸ್ ಚಟುವಟಿಕೆಯು ಸಾಕಷ್ಟು ಹೆಚ್ಚಿನ ಮಟ್ಟವನ್ನು ತಲುಪಿದೆ ಎಂದು ನಗರದ ಆರೋಗ್ಯ ರಕ್ಷಣಾ ಕೇಂದ್ರದ ಸಾಂಕ್ರಾಮಿಕ ರೋಗ ಶಾಖೆಯ ಮುಖ್ಯಸ್ಥ ಆಲ್ಬರ್ಟ್ ಔ ಹೇಳಿದ್ದಾರೆ. ಕೋವಿಡ್ -19 ಗೆ ಪರೀಕ್ಷೆ ಮಾಡುವ ಉಸಿರಾಟದ ಮಾದರಿಗಳ ಶೇಕಡಾವಾರು ಪ್ರಮಾಣ ವರ್ಷದಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಅವರು ಹೇಳಿದರು. ಇದನ್ನೂ ಓದಿ :ಮೋದಿ ಹೇಳಿದ್ದೆಲ್ಲಾ ವೇದವಾಕ್ಯವಲ್ಲ, ಇಡೀ ದೇಶದಲ್ಲೇ ಮೋದಿ ದೊಡ್ಡ ಸುಳ್ಳುಗಾರ: ದಿನೇಶ್​ ಗುಂಡುರಾವ್

ಜೊತೆಗೆ ಹೆಚ್ಚುತ್ತಿರುವ ಕೋವಿಡ್​-19 ಪ್ರಕರಣಗಳ ಸಂಖ್ಯೆ ಕಳೆದ ಒಂದು ವರ್ಷದಲ್ಲೇ ಗರಿಷ್ಟ ಮಟ್ಟಕ್ಕೆ ತಲುಪಿದ್ದು. ಕೋವಿಡ್​ ಸಂಬಂಧಿತ ರೋಗ ಲಕ್ಷಣಗಳುಳ್ಳ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಹಾಂಗ್ ಕಾಂಗ್ ಗಾಯಕ ಈಸನ್ ಚಾನ್ ನಡೆಸಿಕೊಡಬೇಕಿದ್ದ ಸಂಗೀತ ಕಛೇರಿಯನ್ನು ರದ್ದುಗೊಳಿಸಲಾಗಿದೆ ಎಂದು ಮಾಹಿತಿ ದೊರೆತಿದೆ.ಇದನ್ನೂ ಓದಿ:‘ಮುಸ್ಸಂಜೆ ಮಾತಿನ’ ಬಗ್ಗೆ ಕಿಚ್ಚನ ಮಾತು: ತಾಯಿಯನ್ನ ನೆನೆದು ಸುದೀಪ್​ ಮಾತು

ಸಿಂಗಾಪುರದಲ್ಲೂ ಹೆಚ್ಚುತ್ತಿದೆ ಕೋವಿಡ್​

ಸಿಂಗಾಪುರ್​ನಲ್ಲೂ ಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು. ಸಿಂಗಾಪುರ ಆರೋಗ್ಯ ಸಚಿವಾಲಯವು ಕಳೆದ ಏಳು ದಿನಗಳಲ್ಲಿ ಅಂದಾಜು ಪ್ರಕರಣಗಳ ಸಂಖ್ಯೆಯಲ್ಲಿ ಶೇ.28ರಷ್ಟು ಹೆಚ್ಚಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ  14,200ಕ್ಕೆ ತಲುಪಿದೆ. ಜೊತೆಗೆ ದಿನೇ ದಿನೇ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲೂ ಸರಿಸುಮಾರು 20% ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

Exit mobile version