Site icon PowerTV

‘ಮುಸ್ಸಂಜೆ ಮಾತಿನ’ ಬಗ್ಗೆ ಕಿಚ್ಚನ ಮಾತು: ತಾಯಿಯನ್ನ ನೆನೆದು ಸುದೀಪ್​ ಮಾತು

ನಟ ಕಿಚ್ಚ ಸುದೀಪ್​ ಅಭಿನಯದ ಮುಸ್ಸಂಜೆ ಮಾತು ಸಿನಿಮಾ ಬಿಡುಗಡೆಯಾಗಿ 17 ವರ್ಷದ ಹಿನ್ನೆಲೆ ಸಾಮಾಜಿಕ ಜಾಲತಾಣ ಎಕ್ಷ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದು, ಸಿನಿಮಾ ಚಿತ್ರೀಕರಣದ ಬಗ್ಗೆ ತಮ್ಮ ಹಳೆಯ ನೆನಪುಗಳನ್ನ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾದಲ್ಲಿ “ಏನಾಗಲಿ, ಮುಂದೆ ಸಾಗು ನೀ” ಗೀತೆ ತಮ್ಮ ಅಮ್ಮನಿಗೆ ಅದೆಷ್ಟು ಇಷ್ಟವಾಗಿತ್ತು ಎಂಬುದರ ಕುರಿತು ಅಂತರಾಳದ ಮಾತುಗಳನ್ನ ತೋಡಿಕೊಂಡಿದ್ದಾರೆ.

ಮುಸ್ಸಂಜೆ ಮಾತು ಸಿನಿಮಾ ಬಿಡುಗಡೆಯಾಗಿ 17 ವರ್ಷ ಪೂರೈಸಿದೆ, ಇದರ ಬೆನ್ನಲ್ಲೇ ನಟ ಸುದೀಪ್​ ಈ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ” ಈ ವಿಡಿಯೋದಲ್ಲಿ ತಮ್ಮ ಹಳೆಯ ನೆನಪುಗಳನ್ನ ಹಂಚಿಕೊಂಡಿರುವ ನಟ  ಸುದೀಪ್​  ಆ ಚಿತ್ರದ ನಿರ್ದೇಶಕ ‘ಮುಸ್ಸಂಜೆ ಮಹೇಶ್’, ಸಂಗೀತ ನಿರ್ದೇಶಕ ‘ವಿ ಶ್ರೀಧರ್’ ಹಾಗೂ ಆ ಚಿತ್ರದಲ್ಲಿ ನಟಿಸಿರುವ ನಟಿಯರಾದ ರಮ್ಯಾ ಹಾಗೂ ಅನು ಪ್ರಭಾಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ :ಕ್ರಿಕೆಟ್​ ಆಡಬೇಡ ಎಂದು ಹೇಳಿದ ಶಿಕ್ಷಕನಿಗೆ ಬಿಯರ್​ ಬಾಟಲ್​ನಲ್ಲಿ ಇರಿದ ಯುವಕ

ಇನ್ನು ಸಿನಿಮಾದ ತಮ್ಮ ಸಿದ್ದತೆ ಕುರಿತು ಮಾತನಾಡಿದ ಕಿಚ್ಚ ” ಅಂದು ಕನ್ನಡದ ಆರ್‌ಜೆಗಳು ಸ್ವಲ್ಪ ವಿಭಿನ್ನವಾಗಿ ಡ್ರೆಸ್ ಮಾಡಿಕೊಳ್ಳುತ್ತಿದ್ದರು. ನಾನು ಅ ಪಾತ್ರಕ್ಕೆ ಹೊಂದಿಕೆಯಾಗಲು ಬ್ಯಾಂಕಾಕ್‌ನಿಂದ ಹಲವು ಡ್ರೆಸ್‌ಗಳನ್ನು ಖರೀದಿ ಮಾಡಿ ತಂದಿದ್ದೆ. ಆದರೆ, ಅವೆಲ್ಲಾ ನನಗೆ ಟೈಟ್ ಆಗುತ್ತಿತ್ತು. ಆಗ ನಾನು, ‘ಈ ಬಟ್ಟೆಗೆ ನಾನು ಫಿಟ್ ಆಗುವಂತೆ ನಾನು ಸ್ಲಿಮ್ ಆಗಬೇಕು ಎಂದು ನಿರ್ಧಾರ ಮಾಡಿ, ಅದಕ್ಕೆ ತಕ್ಕಂತೆ ಜಿಮ್-ವರ್ಕೌಟ್ ಶುರುಮಾಡಿಕೊಂಡಿದ್ದೆ. ಇದನ್ನೂ ಓದಿ:

ಪ್ರತಿ ನಿತ್ಯ 50 ರಿಂದ 60 ಕಿ,ಮೀ ಸೈಕ್ಲಿಂಗ್​ ಮಾಡುತ್ತಿದ್ದೆ, ಪ್ರತಿ ದಿನವೂ ಹಣ್ಣುಗಳನ್ನ ಸೇವಿಸುತ್ತಿದ್ದೆ. ಕೊನೆಗೆ, ಕೆಲವು ಸಮಯದಲ್ಲಿ ನನ್ನ ನಿರ್ಧಾರದಂತೆ ಆ ಬಟ್ಟೆಗಳೊಳಗೆ ನಾನು ಆರಾಮವಾಗಿ ಇರುವಂತೆ ನನ್ನ ದೇಹವನ್ನು ಮಾರ್ಪಾಟು ಮಾಡಿಕೊಂಡೆ. ಅದಾದ ಬಳಿಕವೇ ನಾನು ಶೂಟಿಂಗ್‌ ಮಾಡಿದ್ದು’ ಎಂದಿದ್ದಾರೆ.

ಅಮ್ಮನನ್ನು ನೆನೆದ ಕಿಚ್ಚ..!

ಈ ಚಿತ್ರದಲ್ಲಿ ಅದೊಂದು ಹಾಡು ನನ್ನ ಹಾಗೂ ನನ್ನ  ಅಮ್ಮನ ಫೆವರೆಟ್ ಹಾಡು. ಅದು ‘ಏನಾಗಲೀ, ಮುಂದೆ ಸಾಗು ನೀ..’ ಹಾಡು. ಈ ಹಾಡನ್ನು ಕನ್ನಡದ ಬಹಳಷ್ಟು ಸಿನಿಪ್ರೇಕ್ಷಕರ ಅಚ್ಚುಮೆಚ್ಚಿನ ಹಾಡೂ ಹೌದು ಎಂಬುದಕ್ಕೆ ಅದು ಸೂಪರ್ ಹಿಟ್ ಆಗಿದ್ದೇ ಸಾಕ್ಷಿ. ಇದನ್ನೂ ಓದಿ :ಚೈತ್ರಾ ಕುಂದಾಪುರ ತಂದೆ ಮಾನಸಿಕ ಅಸ್ವಸ್ಥ; ಮಗಳ ಪರ ಬ್ಯಾಟ್ ಬೀಸಿದ ತಾಯಿ ರೋಹಿಣಿ

“ನನ್ನ ಅಮ್ಮನಿಗಂತೂ ಈ ಹಾಡು ಅದೆಷ್ಟು ಇಷ್ಟವಾಗಿತ್ತು ಎಂದರೆ, ಅವರು ಆ ಹಾಡು ಬಿಡುಗಡೆ ಆದಾಗಿನಿಂದ ಕೊನೆಯವರೆಗೂ ಅದೇ ಹಾಡನ್ನು ತಮ್ಮ ರಿಂಗ್‌ ಟೋನ್‌ ಅಗಿ ಇಟ್ಟುಕೊಂಡಿದ್ದರು. ಈಗಲೂ ಕೂಡ ಅಪ್ಪನ ಬಳಿ ಇರೋ ಆ ಫೋನ್ ರಿಂಗ್ ಟೋನ್ ಇದೆ ಎಂದು ಸುದೀಪ್​ ತಮ್ಮ ಸಿನಿ ಜರ್ನಿಯ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ಮುಸ್ಸಂಜೆ ಮಾತಿನ ಬಗ್ಗೆ ಮಾತನಾಡಿದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

Exit mobile version