Site icon PowerTV

ಪಾಕ್​ಗೆ IMF ನೀಡುವ ಹಣಕಾಸು ನೆರವು ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿದಂತಿದೆ: ರಾಜನಾಥ್​ ಸಿಂಗ್

ದೆಹಲಿ: ಗುಜರಾತ್​ನ ಭುಜ್​ನಲ್ಲಿರುವ ಮಿಲಿಟರಿ ನೆಲೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸಲ್ಪಟ್ಟ ನಿಷೇಧಿತ ಜೈಶ್-ಎ-ಮೊಹಮ್ಮದ್ ಗುಂಪಿನ ಮುಖ್ಯಸ್ಥ ಮಸೂದ್ ಅಜರ್‌ಗೆ 14 ಕೋಟಿ ರೂ.ಗಳನ್ನು ನೀಡಲು ಪಾಕಿಸ್ತಾನ ಸರ್ಕಾರ ತನ್ನ ನಾಗರಿಕರಿಂದ ಸಂಗ್ರಹಿಸಿದ ತೆರಿಗೆಯನ್ನು ಖರ್ಚು ಮಾಡುವ ಯೋಜನೆಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಕಠಿಣ ಎಚ್ಚರಿಕೆ ನೀಡಿದರು.

ಏಪ್ರಿಲ್ 22 ರಂದು ಪಾಕ್ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ನಡೆಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಆಪರೇಷನ್​ ಸಿಂಧೂರ್​ ಮೂಲಕ ಪಾಕ್​ನಲ್ಲಿರುವ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಪಡಿಸಿದ್ದೇವೆ. ಆದರೆ ಪಾಕ್ ಪುನನಿರ್ಮಿಸಲು ಪ್ರಾರಂಭಿಸಿದೆ. ಇದಕ್ಕಾಗಿ ಪಾಕ್​ ಸರ್ಕಾರ ಅಂತರ್​ ರಾಷ್ಟ್ರೀಯ ಹಣಕಾಸು ನಿಧಿಯಿಂದ 2.1 ಬಿಲಿಯನ್​ ಡಾಲರ್​ ನೆರವು ಪಡೆದಿದೆ.

ಇದನ್ನೂ ಓದಿ :ಕೋವಿಡ್​ ಹೊಸ ಅಲೆ ಆರಂಭ: ಹಾಂಗ್​ಕಾಂಗ್​, ಸಿಂಗಪೂರದಲ್ಲಿ ಕೋವಿಡ್​ ಪ್ರಕರಣ ಹೆಚ್ಚಳ

“ಜೈಶ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿದ್ದರೂ, ಪಾಕಿಸ್ತಾನ ನಾಗರಿಕರಿಂದ ಸಂಗ್ರಹಿಸಲಾದ ತೆರಿಗೆಯನ್ನು ಖರ್ಚು ಮಾಡಿ ಅವನಿಗೆ 14 ಕೋಟಿ ರೂ.ಗಳನ್ನು ನೀಡಿದೆ. ಮುರಿಡ್ಕೆ ಮತ್ತು ಬಹವಾಲ್ಪುರದಲ್ಲಿ ಲಷ್ಕರ್ ಮತ್ತು ಜೈಶ್‌ನ ಭಯೋತ್ಪಾದಕ ಮೂಲಸೌಕರ್ಯವನ್ನು ಪುನನಿರ್ಮಿಸಲು ಪಾಕ್ ಸರ್ಕಾರ ಆರ್ಥಿಕ ನೆರವು ನೀಡುವುದಾಗಿ ಹೇಳಿದೆ, ಪಾಕಿಸ್ತಾನ ಭಾರತವನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಚಟುವಟಿಕೆಯನ್ನ ಪ್ರಾಯೋಜಿಸುತ್ತಿದೆ. ಇದನ್ನೂ ಓದಿ :ಮೋದಿ ಹೇಳಿದ್ದೆಲ್ಲಾ ವೇದವಾಕ್ಯವಲ್ಲ, ಇಡೀ ದೇಶದಲ್ಲೇ ಮೋದಿ ದೊಡ್ಡ ಸುಳ್ಳುಗಾರ: ದಿನೇಶ್​ ಗುಂಡುರಾವ್

‘ಪಾಕಿಸ್ತಾನಕ್ಕೆ ಐಎಂಎಫ್​ ನೆರವು ನೀಡುವುದು ಭಯೋತ್ಪಾದನೆಗೆ ಪರೋಕ್ಷವಾಗಿ ನೆರವು ನೀಡುವಂತಿದೆ.  ಪಾಕಿಸ್ತಾನಕ್ಕೆ ನೀಡುವ ಯಾವುದೇ ಹಣಕಾಸಿನ ನೆರವು ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ಒದಗಿಸಿದಂತೆ. ಐಎಂಎಫ್ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ಪಾಕಿಸ್ತಾನಕ್ಕೆ ನೀಡುವ ಹಣಕಾಸಿನ ಬಗ್ಗೆ ಪುನರ್​ ಪರಿಶೀಲಿಸಬೇಕು. ಭಾರತ ಪಾಕಿಸ್ತಾನಕ್ಕೆ ನೀಡಿದ 2.3ಬಿಲಿಯನ್​ ಡಾಲರ್ ಹಣ ನೀಡುವ ಪ್ರಸ್ತಾಪವನ್ನು ವಿರೋಧಿಸಿತು, ಪಾಕಿಸ್ತಾನ ಈ ಹಣವನ್ನ ಗಡಿಯಾಚೆಗಿನ ಹಣಕಾಸು ಒದಗಿಸಲು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಎಚ್ಚರಿಸಿದ್ದೆವು ಎಂದು ಹೇಳಿದರು.

Exit mobile version