ಕುಂದಾಪುರ: ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಕೆಲವೇ ದಿನಗಳ ಹಿಂದೆ ಹಸೆಮಣೆ ಏರಿ ಸುದ್ದಿಯಾಗಿದ್ದರು. ಆದರೆ ಚೈತ್ರ ಮದುವೆಯಾದ ಒಂದು ವಾರದಲ್ಲೇ ಚೈತ್ರ ತಂದೆ ಮಗಳ ಮೇಲೆ ವಾಗ್ದಾಳಿ ನಡೆಸಿ, ಚೈತ್ರ ಮತ್ತು ಆಕೆಯ ಗಂಡ ಇಬ್ಬರು ಕಳ್ಳರೆ ಎಂದು ಹೇಳಿದ್ದರು. ಇದೀಗ ಚೈತ್ರ ಅವರ ತಾಯಿ ಈ ಕುರಿತು ಮಾತನಾಡಿದ್ದು. ಚೈತ್ರಾ ಬಗ್ಗೆ ತಂದೆ ಮಾಡಿರುವ ಆರೋಪಗಳೆಲ್ಲಾ ಸುಳ್ಳು, ಅವರು ಮಾನಸಿಕ ಅಸ್ವಸ್ಥರು ಎಂದು ಹೇಳಿದ್ದಾರೆ.
ಕಳೆದ ವಾರವಷ್ಟೇ ಚೈತ್ರ ಅವರು ತನ್ನ ಬಹುಕಾಲದ ಪ್ರೇಮಿ , ಶ್ರೀಕಾಂತ್ ಕಶ್ಯಪ್ ರನ್ನು ವರಿಸಿದ್ದಾರೆ. ಮದುವೆಯಾಗಿ ವಾರದಲ್ಲೇ ಚೈತ್ರಾ ತಂದೆ ಮಗಳ ವಿರುದ್ಧ ತಿರುಗಿ ಬಿದ್ದಿದ್ದರು. ನಿನ್ನೆ ಮಾಧ್ಯಮಗಳಿಗೆ ಹೇಳಿಕೆ ನೀಡಿ ,ನನ್ನ ಮಗಳು ಮತ್ತು ಅಳಿಯ ಸರಿ ಇಲ್ಲ ,ಇಬ್ಬರೂ ಕಳ್ಳರೇ. ನಾನು ಮದುವೆಗೂ ಹೋಗಿಲ್ಲ ಎಂದೆಲ್ಲ ಹೇಳಿಕೆ ನೀಡಿದ್ದರು. ಚೈತ್ರಾ ತಂದೆ ಬಾಲಕೃಷ್ಣ ನಾಯ್ಕ ಮಾತುಗಳು ಸಂಚಲನ ಸೃಷ್ಟಿಸಿದ್ದವು. ಇದನ್ನೂ ಓದಿ:ಕೇಂದ್ರ ಸರ್ಕಾರ ನಾಲ್ಕು ಫ್ಲೈಟ್ ಕಳ್ಸಿದ್ ಬಿಟ್ರೆ ಏನು ಮಾಡಿಲ್ಲ: ಶಾಸಕ ಕೊತ್ತೂರು ಮಂಜುನಾಥ್ ಅನುಮಾನ
ಆದರೆ ಅವರ ಆರೋಪಗಳಿಗೆ, ಅವರ ಪತ್ನಿ ರೋಹಿಣಿಯೇ ತಿರುಗೇಟು ನೀಡಿದ್ದಾರೆ. ಚೈತ್ರಾ ಬಗ್ಗೆ ತಂದೆ ಮಾಡಿರುವ ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ. ಅಲ್ಲದೇ, ಗಂಡನ ಜೊತೆಗೆ ತನ್ನ ಹಿರಿಮಗಳ ಬಗ್ಗೆಯೂ ಅವರು ಕಿಡಿಕಾರಿದ್ದಾರೆ. ನನ್ನ ಗಂಡನಿಗೆ ಮಾತನಾಡಲು ಬರುವುದಿಲ್ಲ, ಅವರು ಒಂಥರಾ ಮಾನಸಿಕ ವ್ಯಕ್ತಿ. ದೊಡ್ಡ ಮಗಳು ಹೇಳಿಕೊಟ್ಟದ್ದನ್ನು ಅವರು ಹೇಳುತ್ತಿದ್ದಾರೆ.
ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡ ವ್ಯಕ್ತಿಯಲ್ಲ. ಕೆಲಸ ಮಾಡುತ್ತೇನೆ ಎಂದು ಎಲ್ಲೆಲ್ಲಿ ಹೋಗುತ್ತಾರೆ ದುಡಿದ ಹಣವನ್ನು ದೊಡ್ಡ ಮಗಳಿಗೆ ಕೊಡುತ್ತಾರೆ. ನನ್ನ ದೊಡ್ಡ ಮಗಳು ಆಸ್ತಿ ಗೋಸ್ಕರ ತಂದೆಗೆ ಈ ರೀತಿ ಮಾತನಾಡಲು ಹೇಳಿಕೊಟ್ಟಿದ್ದಾಳೆ. ಆ ಕಾಲದಲ್ಲಿ ಒಂದುವರೆ ಎರಡು ಲಕ್ಷ ರೂಪಾಯಿಯಲ್ಲಿ ಮನೆ ಕಟ್ಟಿದರು. ಅವರು ಕಟ್ಟಿದ ಮನೆ ಬಿದ್ದು ಹೋಗಿದೆ. ನಾನು ಚೂರುಪಾರು ಹಣ ದೊಡ್ಡ ಮಗಳ ಗಂಡನ ಸೊಸೈಟಿಯಲ್ಲಿ ಇಟ್ಟಿದ್ದೆ. ಇದನ್ನೂ ಓದಿ:ಬೆಂಗಳೂರಿಗರಿಗೆ BMRCL ಗುಡ್ ನ್ಯೂಸ್: ಜೂನ್ನಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಸಾಧ್ಯತೆ
ಅದನ್ನು ಕೂಡ ನನ್ನ ಗಂಡ ದೊಡ್ಡ ಮಗಳಿಗೆ ಕೊಟ್ಟಿದ್ದಾರೆ. ನಮ್ಮ ಭೂಮಿ ಬೇಕು ಎಂದು ದೊಡ್ಡ ಮಗಳು ಬೆನ್ನು ಬಿದ್ದಿದ್ದಾಳೆ. ಅವಳ ಮನೆಗೆ ಸಹಾಯ ಮಾಡಲು ಚೈತ್ರ ಜಾಗ ಬರೆದುಕೊಟ್ಟಿದ್ದಾಳೆ. 25 ಲಕ್ಷ ಲೋನ್ ನಾವೇ ಮಾಡಿಕೊಟ್ಟಿದ್ದೇವೆ. ಅಪ್ಪನ ಬಳಿ ಸಹಿ ಪಡೆದು ಜಾಗ ಒಳ ಹಾಕುವ ಸಂಚು ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.