Site icon PowerTV

ಕೇಂದ್ರ ಸರ್ಕಾರ ನಾಲ್ಕು ಫ್ಲೈಟ್​ ಕಳ್ಸಿದ್​ ಬಿಟ್ರೆ ಏನು ಮಾಡಿಲ್ಲ: ಶಾಸಕ ಕೊತ್ತೂರು ಮಂಜುನಾಥ್​ ಅನುಮಾನ

ಕೋಲಾರ : ಶಾಸಕ ಕೊತ್ತೂರು ಮಂಜುನಾಥ್​ ಆಪರೇಷನ್​ ಸಿಂಧೂರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು. ಕೇಂದ್ರ ಸರ್ಕಾರ ಬೂಟಾಟಿಕೆಗೆ ನಾಲ್ಕು ಫ್ಲೈಟ್​ ಕಳಿಸಿದ್ದು ಬಿಟ್ಟರೆ ಏನೂ ಮಾಡಿಲ್ಲ, 26 ಮಹಿಳೆಯರ ಅರಿಶಿನ-ಕುಂಕುಮಕ್ಕೆ ಇಷ್ಟೇ ಬೆಲೆನಾ ಎಂದು ಕಾರ್ಯಚರಣೆ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಕೋಲಾರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೊತ್ತೂರು ಮಂಜುನಾಥ್ ‘ ಕೇಂದ್ರ ಸರ್ಕಾರ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ.29 ಜನ ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೆನಾ. ಆ‌ ಹೆಣ್ಣು ಮಕ್ಕಳಿಗೆ ಸಿಕ್ಕ ಪರಿಹಾರ ಇದೇನಾ ಎಂದು ಭಾರತ ಹಾಗೂ ಪಾಕಿಸ್ತಾನ ಮಧ್ಯೆ ನಡೆದ ಕದನ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ :ಬೆಂಗಳೂರಿಗರಿಗೆ BMRCL ಗುಡ್​ ನ್ಯೂಸ್​: ಜೂನ್​ನಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಸಾಧ್ಯತೆ

ಉಗ್ರರು ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೆ ಪತಿಯರನ್ನ ಹೊಡೆದಿದ್ದಾರೆ. ಆ ಹೆಣ್ಣು ಮಕ್ಕಳು ಗಟ್ಟಿಯಾಗಿರೋದಕ್ಕೆ ಪರವಾಗಿಲ್ಲ, ಇಲ್ಲಾ ಅಂದ್ರೆ ಹಾರ್ಟ್ ಅಟ್ಯಾಕ್ ಆಗಿ ಸಾಯಬೇಕಿತ್ತು. ಅಂತಹದಕ್ಕೆ ಪರಿಹಾರ ಇದಲ್ಲ, ಉಗ್ರರ ಬೇರು, ಕೊಂಬೆ, ಬುಡದ ತನಕ ಹೊಡಿಯಬೇಕು. ಭಾರತಕ್ಕೆ ಒಳ್ಳೆಯ ಅವಕಾಶ ಇತ್ತು, ಆದರೆ ನಾವು ಏನೂ ಮಾಡಿಲ್ಲ‌ ಅನ್ನೋದು ಬೇಸರ ಎಂದು ಹೇಳಿದರು.

ಉಗ್ರರು ಸತ್ತಿರುವ ಬಗ್ಗೆ ಸಾಕ್ಷಿ ಇಲ್ಲ..!

ಆಪರೇಷನ್​ ಸಿಂಧೂರ್​ನಲ್ಲಿ “ಅಷ್ಟು ಜನ ಉಗ್ರರು, ಇಷ್ಟು ಜನ ಉಗ್ರರು ಸತ್ತಿದ್ದಾರೆ ಅಂತಾರೆ, ಆದರ ಇಲ್ಲಿಯವರೆಗೂ ಎಲ್ಲೂ ಕನ್​ಫರ್ಮ್​ ಆಗಿಲ್ಲ.  ನಮ್ಮ ಊರಲ್ಲಿ ಬಂದು ನಮ್ಮನ್ನ ಹೊಡೆದು ತಪ್ಪಿಸಿಕೊಂಡು ಹೋಗ್ತಾರೆ ಅಂದರೆ ಹೇಗೆ. ಇದು ನಮ್ಮ ಭದ್ರತಾ ವೈಫಲ್ಯ, ಗಡಿಯಲ್ಲಿ ಸೇನೆ ಏನ್ ಮಾಡ್ತಾಯಿತ್ತು. ನಮ್ಮ ಸೈನಿಕರೆ ಇದರ ಬಗ್ಗೆ ಪ್ಲಾನ್​ ಮಾಡಿದ್ರಾ ಎಂದು ಸೇನೆಯ ಮೇಲೆ ಕೊತ್ತೂರು ಮಂಜುನಾಥ್​ ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ :‘ನಿನ್ನ ದೇಹದಲ್ಲಿ 15 ಆತ್ಮಗಳಿವೆ’: ಪೊಲೀಸರಿಗೆ ವಂಚಿಸಿ ಹಣ ವಸೂಲಿ ಮಾಡಿದ ಡೋಂಗಿ ಬಾಬಾ

ಮುಂದುವರಿದು ಮಾತನಾಡಿದ ಕೊತ್ತೂರು ಮಂಜುನಾಥ್ ” ಇದು ಸಮಧಾನಕರವಾದ ಕ್ರಮ ಅಲ್ಲ, ನಮಗೆ ಒಳ್ಳೆಯ ಚಾನ್ಸ್ ಇತ್ತು. ಉಗ್ರವಾದವನ್ನ ಬೇರು ಸಮೇತ ಕಿತ್ತೋಗೆಯಬಹುದಿತ್ತು, ಆದ್ರೆ ಹುಸಿಯಾಗಿದೆ. ಕದನ ವಿರಾಮ ಎಂದು ಹೇಳುವ ನೀವು ಇಸ್ರೇಲ್ ನೋಡಿ ಕಲಿಯಬೇಕಿದೆ. ಇಸ್ರೇಲ್ ಯಾರ ಮಾತು ಕೇಳಿಲ್ಲ, ಸರ್ವನಾಶ‌ ಮಾಡಿ ಬಿಟ್ರು, ಆದ್ರೆ, ನಮ್ಮ ಹೆಣ್ಣು ಮಕ್ಕಳಿಗೆ ಬೆಲೆ‌ ಇಲ್ವಾ. ಆ ಉಗ್ರರನ್ನ ಹಿಡಿದುಕೊಂಡು ಬಂದು ನಮ್ಮ ಹೆಣ್ಣು ಮಕ್ಕಳ ಕೈಗೆ ಕೊಡ ಬೇಕಿತ್ತು. ಆದರೆ ನಮ್ಮಲ್ಲಿ ಆಪರೇಷನ್​, ಯುದ್ದ ವಿಮಾನ, ನೌಕೆ ಅನ್ನುತಿದ್ದೇವೆ ಎಂದು ಶಾಸಕರು ಹೇಳಿದರು.

Exit mobile version