Site icon PowerTV

ಬೆಂಗಳೂರಿಗರಿಗೆ BMRCL ಗುಡ್​ ನ್ಯೂಸ್​: ಜೂನ್​ನಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಸಾಧ್ಯತೆ

ಬೆಂಗಳೂರು: ನಗರ ವಾಸಿಗಳಿಗೆ ಬಿಎಂಆರ್​ಸಿಎಲ್​ ಗುಡ್​ ನ್ಯೂಸ್​ ಕೊಟ್ಟಿದ್ದು. ಇದೇ ಜೂನ್​ ಅಥವಾ ಜುಲೈನಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಶುರುವಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ.  ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪಶ್ಚಿಮ ಬಂಗಾಳದ ಟಿಟಾಗಢದಿಂದ ಒಂದು ಸೆಟ್‌ ರೈಲು ಬೋಗಿಗಳು ಬೆಂಗಳೂರಿಗೆ ಆಗಮಿಸಿವೆ.

ಕಳೆದ ಅನೇಕ ತಿಂಗಳಿಂದ ಬೆಂಗಳೂರಿನ ಜನರು ಯಲ್ಲೋ ಲೈನ್​ ಮೆಟ್ರೋಗಾಗಿ ಕಾಯುತ್ತಿದ್ದು. ಟ್ರ್ಯಾಕ್​ಗಳು ಸಿದ್ದವಾಗಿದ್ದರು, ಸಮಯಕ್ಕೆ ಸರಿಯಾಗಿ ರೈಲುಗಳ ಪೂರೈಕೆಯಾಗದ ಕಾರಣ ಇನ್ನು ಸಂಚಾರ ಆರಂಭವಾಗಿಲ್ಲ. ಬೊಮ್ಮಸಂದ್ರದಿಂದ ಆರ್‌.ವಿ. ರಸ್ತೆ ನಡುವಿನ 18.8 ಕಿ.ಮೀ. ಉದ್ದದ ಮಾರ್ಗ ಇದಾಗಿದ್ದು. ಮುಂದಿನ ತಿಂಗಳಿಂದ ಸಂಚಾರ ಆರಂಭವಾಗುವು ನಿರೀಕ್ಷೆ ಇದೆ. ಇದನ್ನೂ ಓದಿ :‘ನಿನ್ನ ದೇಹದಲ್ಲಿ 15 ಆತ್ಮಗಳಿವೆ’: ಪೊಲೀಸರಿಗೆ ವಂಚಿಸಿ ಹಣ ವಸೂಲಿ ಮಾಡಿದ ಡೋಂಗಿ ಬಾಬಾ

ರೈಲು ಸಂಚಾರ ಆರಂಭಗೊಳ್ಳಲು ಕನಿಷ್ಠ ಮೂರು ರೈಲುಗಳ ಅವಶ್ಯಕತೆ ಇತ್ತು. ಚಾಲಕರಹಿತ ಎಂಜಿನ್‌ ಹೊಂದಿರುವ ಪ್ರೊಟೊಟೈಪ್‌ ಎರಡು ರೈಲುಗಳು ಪೂರೈಕೆಯಾಗಿ, ಮೂರನೇ ರೈಲಿಗಾಗಿ ಕಾಯಲಾಗಿತ್ತು. ಇದೀಗ ಮೂರೂ ರೈಲುಗಳು ಪೂರೈಕೆಯಾಗಿವೆ. ಅಲ್ಲಿಗೆ ಒಟ್ಟು 4 ರೈಲು ಈ ಮಾರ್ಗಕ್ಕೆ ಸಿಗಲಿದ್ದು ಪ್ರತಿ 30 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ರೈಲುಗಳ ಸಂಖ್ಯೆ ಹೆಚ್ಚಳವಾದಂತೆ ಟ್ರಿಪ್‌ಗಳ ನಡುವಿನ ಅವಧಿ ಕಡಿಮೆಯಾಗಲಿದೆ. ಈ ಮಾರ್ಗಕ್ಕೆ ಒಟ್ಟು 14 ರೈಲುಗಳ ಅಗತ್ಯವಿದೆ. ಪ್ರತಿ 15 ನಿಮಿಷಗಳಿಗೆ ಒಂದು ರೈಲು ಸಂಚರಿಸಲು 8 ರೈಲುಗಳು ಇರಬೇಕಿದೆ.

Exit mobile version