Site icon PowerTV

ವಿದೇಶಾಂಗ ಸಚಿವ ಜೈ ಶಂಕರ್​ಗೆ ನೀಡಿದ್ದ ಭದ್ರತೆಯಲ್ಲಿ ದಿಢೀರ್​ ಹೆಚ್ಚಳ..!

ದೆಹಲಿ : ಆಪರೇಷನ್​ ಸಿಂಧೂರ ಕಾರ್ಯಚರಣೆ ಬೆನ್ನಲ್ಲೇ ವಿದೇಶಾಂಗ ಸಚಿವ ಎಸ್​.ಜೈ ಶಂಕರ್​ಗೆ ನೀಡಿದ್ದ ಭದ್ರತೆಯನ್ನ ಗೃಹ ಇಲಾಖೆ ಹೆಚ್ಚಿಸಿದ್ದು. ಅವರಿಗೆ ವಿಶೇಷ ಬುಲೆಟ್ ಪ್ರೂಪ್​ ಸೇರಿದಂತೆ. Z ಕ್ಯಾಟಗಿರಿ ಭದ್ರತೆಯನ್ನ ನೀಡಲಾಗಿದೆ.

ಗೃಹ ಸಚಿವಾಲಯದ ಮೂಲಗಳ ಪ್ರಕಾರ, ದೆಹಲಿಯಲ್ಲಿರುವ ಜೈಶಂಕರ್ ಅವರ ನಿವಾಸದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಗೃಹ ಸಚಿವಾಲಯವು ಈಗಾಗಲೇ Z ವರ್ಗದ ಭದ್ರತೆಯನ್ನು ಒದಗಿಸಿದೆ. ವಿದೇಶಾಂಗ ಸಚಿವರಿಗೆ ಸಿಆರ್‌ಪಿಎಫ್ ಕಮಾಂಡೋಗಳು ಭದ್ರತೆ ಒದಗಿಸುತ್ತಾರೆ. ಇದರಲ್ಲಿ, 36 ಕಮಾಂಡೋಗಳು ಭದ್ರತೆಯನ್ನು ಒದಗಿಸುತ್ತಾರೆ. ಆಪರೇಷನ್ ಸಿಂಧೂರ್ ನಂತರ ಗೃಹ ಸಚಿವಾಲಯ ಇಂತಹುದೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಇದನ್ನೂ ಓದಿ :ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅಧ್ಯಕ್ಷರಾಗಿ ಮಾಜಿ ರೌಡಿಶೀಟರ್​ ಆಯ್ಕೆ: ಬಿಜೆಪಿಗರಿಂದ ಟೀಕೆ

ಮೂಲಗಳ ಪ್ರಕಾರ, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ಭದ್ರತೆಯನ್ನು ಹೆಚ್ಚಿಸುವಂತೆ ಗೃಹ ಸಚಿವಾಲಯ ಬುಧವಾರ ದೆಹಲಿ ಪೊಲೀಸರಿಗೆ ಸೂಚಿಸಿದೆ. ದೆಹಲಿ ಪೊಲೀಸರು ಜೈಶಂಕರ್ ಅವರ ಭದ್ರತೆಯನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಅವರ ಭದ್ರತೆಗೆ ವಿಶೇಷ ಬುಲೆಟ್ ಪ್ರೂಫ್ ಕಾರನ್ನು ಸೇರಿಸಲಾಗಿದೆ. ಇದನ್ನೂ ಓದಿ :ಯಾರ ಕೈ-ಕಾಲು ಹಿಡಿದು ಕದನ ವಿರಾಮ ಮಾಡಿದ್ದಾರೆ ಎಂಬುದನ್ನ ಮೋದಿ ಹೇಳ್ಬೇಕು: ಪ್ರಿಯಾಂಕ ಖರ್ಗೆ

ಏನಿದು Z ಕ್ಯಾಟಗರಿ ಭದ್ರತೆ..!

Z ಕ್ಯಾಟಗರಿಯಲ್ಲಿ 36 ಸೈನಿಕರನ್ನು ನಿಯೋಜಿಸಲಾಗಿದೆ. ಇದರಲ್ಲಿ ವಿಐಪಿಗಳ ಭದ್ರತೆಗಾಗಿ ಬೆಂಗಾವಲು ಕಾರು ಕೂಡ ಸೇರಿದೆ. ಯಾವುದೇ ಸ್ಥಳಕ್ಕೆ ಹೋಗುವಾಗ ಅದು ವಿಐಪಿ ಕಾರಿನ ಮುಂದೆ ಹೋಗುತ್ತದೆ. ಬೆಂಗಾವಲು ಕಾರು ಎಲ್ಲಾ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಕಣ್ಣಿಡುತ್ತದೆ. Z ವರ್ಗದ ಅಡಿಯಲ್ಲಿ ಭದ್ರತಾ ವ್ಯಾಪ್ತಿ ಸಾಕಷ್ಟು ಪ್ರಬಲ ಮತ್ತು ಕಟ್ಟುನಿಟ್ಟಾಗಿದೆ. ಇದರಲ್ಲಿ ಸೈನಿಕರು ಆಧುನಿಕ ಶಸ್ತ್ರಾಸ್ತ್ರಗಳನ್ನು ಹಾಗೂ ಆಧುನಿಕ ಸಂವಹನ ಸಾಧನಗಳನ್ನು ಹೊಂದಿದ್ದಾರೆ.
Exit mobile version