Site icon PowerTV

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅಧ್ಯಕ್ಷರಾಗಿ ಮಾಜಿ ರೌಡಿಶೀಟರ್​ ಆಯ್ಕೆ: ಬಿಜೆಪಿಗರಿಂದ ಟೀಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನಾ ಆಡಳಿತ ಮಂಡಳಿ ಅಧ್ಯಕ್ಷನಾಗಿ ಮಾಜಿ ರೌಡಿಶೀಟರ್ ಹರೀಶ್ ಇಂಜಾಡಿ ನೇಮಕವಾಗಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಗೆ ಧೋಖಾ ಮಾಡಿದ ಪ್ರಕರಣದಲ್ಲಿ ಈತ ಜೈಲುವಾಸವನ್ನು ಅನುಭವಿಸಿ ಬಂದಿದ್ದಾನೆ.

ದೇಗುಲ ಆಡಳಿತ ಮಂಡಳಿಗೆ ದೋಖಾ ಮಾಡಿದ್ದ ಖದೀಮ

ಮಾಜಿ ರೌಡಿಶೀಟರ್ ಹರೀಶ್ ಇಂಜಾಡಿ ಈ ಮೊದಲು ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತದ್ದ. ನಕಲಿ ಚೆಕ್​ ನೀಡಿ ಹಣ್ಣು-ಕಾಯಿ ಟೆಂಡರ್​ ನೀಡಿ ದೇವಸ್ಥಾನಕ್ಕೆ ವಂಚಿಸಿದ್ದ ಆರೋಪದ ಮೇಲೆ ಹರೀಶ್​ ಇಂಜಾಡಿ ಪೊಲೀಸ್​ರಿಂದ ಬಂಧನವಾಗಿದ್ದನು. ಅಷ್ಟೇ ಅಲ್ಲದೇ ಈತನ ಮೇಲೆ ಮರಳು‌ ಮಾಫಿಯಾ ಮತ್ತು ಮರ ಕಳ್ಳ ಸಾಗಣೆಯಲ್ಲಿ ಭಾಗಿಯಾಗಿರುವ ಆರೋಪವು ಇದೆ. ಆದರೆ ಇದೀಗ ಈತನನ್ನೇ ದೇವಸ್ಥಾನದ ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ :ಯಾರ ಕೈ-ಕಾಲು ಹಿಡಿದು ಕದನ ವಿರಾಮ ಮಾಡಿದ್ದಾರೆ ಎಂಬುದನ್ನ ಮೋದಿ ಹೇಳ್ಬೇಕು: ಪ್ರಿಯಾಂಕ ಖರ್ಗೆ

ಹರೀಶ್​ ಇಂಜಾಡಿ ಕಾಂಗ್ರೆಸ್​ ಮುಖಂಡನಾಗಿದ್ದು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಈತನ ಹೆಸರನ್ನು ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ದಿನೇಶ್​ ಗುಂಡುರಾವ್​ ಅವರು ಸೂಚಿಸಿದ್ದಾರೆ. ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧ ಇದ್ದವರು ಆಡಳಿತ ಮಂಡಳಿ ಸದಸ್ಯ ಆಗಬಾರದು ಅನ್ನುವ ನಿಯಮವಿದ್ದರು. ಈ ನಿಯಮವನ್ನ ಮೀರಿ ಹರೀಶ್​ ಇಂಜಾಡಿಯನ್ನ ದೇವಸ್ಥಾನದ ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ :ಆಕಸ್ಮಿಕವಾಗಿ ಗಡಿ ದಾಟಿದ್ದ BSF ಯೋಧ ಪಿ.ಕೆ ಸಾಹು ಭಾರತಕ್ಕೆ ವಾಪಾಸ್​

ಇತ್ತ ಹರೀಶ್​ ಇಂಜಾಡಿ ಆಯ್ಕೆಗೆ ಸುಬ್ರಹ್ಮಣ್ಯ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದ್ದು. ಹರೀಶ್​ ಇಂಜಾಡಿ ಆಯ್ಕೆಗೆ ವಿರೋಧಿಸಿ ಸಾಕ್ಷಿ ಸಮೇತ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿಗೆ ಪತ್ರ ಬರೆಯಲಾಗಿದೆ. ಆದರೂ ಸಚಿವರೂ ನಿರ್ಲಕ್ಷ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತ ಬಿಜೆಪಿಯವರು ಇದನ್ನ ಟೀಕಿಸಿದ್ದು. ರೌಡಿಶೀಟರ್ ಸುಹಾಸ್​ ಶೆಟ್ಟಿ  ಮನೆಗೆ ಭೇಟಿ ಕೊಡಲ್ಲ ಎನ್ನುತ್ತಿದ್ದ ಕಾಂಗ್ರೆಸ್ ಮುಖಂಡರಿಂದಲೇ ಮಾಜಿ ರೌಡಿಗೆ ಅಧ್ಯಕ್ಷ ಸ್ಥಾನ ಎಂದು ಟೀಕಿಸಿದ್ದಾರೆ.

Exit mobile version