Site icon PowerTV

ದೇಶದ ರಕ್ಷಣಾ ನಿಧಿಗೆ ಮಂತ್ರಾಲಯ ಮಠದಿಂದ 25 ಲಕ್ಷ ರೂ ದೇಣಿಗೆ

ರಾಯಚೂರು : ಭಾರತ ಮತ್ತು ಪಾಕಿಸ್ತಾನದ ನಡುವೆ ಘರ್ಷಣೆ ನಡೆಯುತ್ತಿದ್ದು. ದೇಶದ ಯೋಧರ ರಕ್ಷಣೆಗೆ ಮತ್ತು ಅವರ ಆತ್ಮಸ್ಥೈರ್ಯ ಹೆಚ್ಚಿಸಲು ದೇಶದ ಹಲವಡೆ ಪೂಜೆ, ಪುನಸ್ಕಾರ ನೆರವೇರಿಸಲಾಗುತ್ತಿದೆ. ರಾಯಚೂರಿನ ಮಂತ್ರಲಯ ಮಠವೂ ಯೋಧರ ರಕ್ಷಣೆಗಾಗಿ ಎರಡು ದಿನದ ಹಿಂದಷ್ಟೆ ಹೋಮ-ಹವನವನ್ನ ಕೈಗೊಂಡಿತ್ತು. ಇದೀಗ ಇದರ ಬೆನ್ನಲ್ಲೇ ಮಂತ್ರಾಲಯ ದೇಶದ ರಕ್ಷಣಾ ನಿಧಿಗೆ 25 ಲಕ್ಷ ರೂ ಹಣವನ್ನ ದೇಣಿಗೆಯಾಗಿ ನೀಡಿದೆ.

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ದೇಣಿಗಯನ್ನ  ಘೋಷಿಸಿದ್ದು. ತಮ್ಮ 13ನೇ ಪಟ್ಟಭೀಷೇಕ ಮಹೋತ್ಸವದ ನಿಮಿತ್ತ ಭಕ್ತರು ತುಲಾಭಾರ ನಡೆಸುತ್ತಿದ್ದ ವೇಳೆ ಶ್ರೀಗಳು ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ :56 ಇಂಚಿನ ಎದೆ ಕೇವಲ ಮಾತನಾಡಲು ಮಾತ್ರ ಸೀಮಿತಾ, ಮೋದಿ ವಿರುದ್ದ ಪ್ರಿಯಾಂಕ ಖರ್ಗೆ ವಾಗ್ದಾಳಿ

“ದೇಶದಲ್ಲಿ ಅಶಾಂತಿ ಉಂಟಾಗಿದೆ, ತಾತ್ಕಾಲಿಕವಾಗಿ ಯುದ್ದ ವಿರಾಮ ದೊರಕಿದೆ. ರಾತ್ರಿ-ಹಗಲು, ಮಳೆ-ಬಿಸಿಲು, ಎನ್ನದೇ, ಪ್ರಾಣವನ್ನು ಲೆಕ್ಕಿಸದೇ ದೇಶದ ರಕ್ಷಣೆಗಾಗಿ ನಮ್ಮೆಲ್ಲ ಯೋಧರು ಶ್ರಮಿಸುತ್ತಿದ್ದಾರೆ. ಜಾಗೃತರಾಗಿ, ವಿವೇಚನಾ ಪೂರ್ವಕವಾಗಿ ದೇಶದ ಸಮಗ್ರತೆಗೆ, ರಕ್ಷಣೆ , ಭದ್ರತೆಗೆ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ದೇಶದಲ್ಲಿ ಅಶಾಂತಿ ಪರಸ್ಥಿತಿ ಹಿನ್ನೆಲೆ ಸರಳವಾಗಿ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಈ ಕಾರ್ಯಕ್ರಮದ ವೇಳೆ ಮಾತನಾಡಿದರು.

Exit mobile version