Site icon PowerTV

POK ಬಿಟ್ಟುಕೊಟ್ಟಾಗಿದೆ ಅದನ್ನ ಕೇಳೋದು ಸೂಕ್ತವಲ್ಲ, ಈಗ ಪಾಕ್​ಗೆ ಬುದ್ದಿ ಕಲಿಸಬೇಕು: ಆರ್​. ಅಶೋಕ್​

ಬೆಂಗಳೂರು : ಪಹಲ್ಗಾಮ್​ ದಾಳಿಗೆ ಪ್ರತಿಕಾರವಾಗಿ ಭಾರತ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್​. ಅಶೋಕ್​ ವಿಪಕ್ಷಗಳನ್ನ ತರಾಟೆಗೆ ತೆಗೆದುಕೊಂಡಿದ್ದು. ಒಗ್ಗಟ್ಟಿನಿಂದ ಇರುವ ಸಮಯದಲ್ಲಿ ಕಾಂಗ್ರೆಸಿಗರು ಒಡಕನ್ನು ಉಂಟು ಮಾಡಬಾರದು, ಪಿಒಕೆನ ಬಿಟ್ಟುಕೊಟ್ಟಾಗಿದೆ, ಆಗಿ ಹೋಗಿರೋದನ್ನ ಕೇಳೋದು ಸೂಕ್ತವಲ್ಲ. ಅದರ ಬದಲು ಪಾಕಿಸ್ತಾನಕ್ಕೆ ಪಾಠ ಕಲಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ಮಾಧ್ಯಮ ಸುದ್ದಿಗೋಷ್ಟಿ ನಡೆಸಿದ ವಿಪಕ್ಷ ನಾಯಕ ಆರ್. ಅಶೋಕ್​ “ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಅಮಾಯಕರನ್ನು ಧರ್ಮ ಕೇಳಿ ಕೊಂದಿದ್ದಾರೆ. ನಾವು ಆಪರೇಷನ್ ಸಿಂದೂರ್ ಮೂಲಕ ಅವರಿಗೆ ತಕ್ಕ ಉತ್ತರ ಕೊಟ್ಟಿದ್ದೇವೆ. ಭಾರತ ಎಂದಿಗೂ ಭಯೋತ್ಪಾದನೆಯನ್ನು ಸಹಿಸೋದಿಲ್ಲ. ನ್ಯೂಕ್ಲಿಯರ್ ಬಾಂಬ್​ಗೆ ಬಗ್ಗಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಈ ಒಗ್ಗಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಒಡಕಿನ ಮಾತಾಡಬಾರದು ಎಂದು ಹೇಳಿದರು.ಇದನ್ನೂ ಓದಿ :ಪಾಕ್ ಶೆಲ್​ ದಾಳಿಗೆ ಅವಳಿ ಮಕ್ಕಳ ಸಾ*ವು: ತಂದೆ-ತಾಯಿ ಆಸ್ಪತ್ರೆಗೆ ದಾಖಲು, ಕುಟುಂಬವೇ ಸರ್ವನಾಶ

ಭಾರತ ಮತ್ತು ಪಾಕ್​ ನಡುವೆ ಏರ್ಪಟ್ಟಿರುವ ಕದನ ವಿರಾಮದ ಬಗ್ಗೆ ಮಾತನಾಡಿದ ಆರ್​.ಅಶೋಕ್​ “ಯುದ್ದ ಆರಂಭಕ್ಕೂ ಮುನ್ನ ಕಾಂಗ್ರೆಸ್​ ಯುದ್ದ ಅವಶ್ಯಕತೆ ಇದೆಯಾ ಅನ್ನುತ್ತಿದ್ದರು. ಯುದ್ದ ಆರಂಭ ಆದಮೇಲೆ ಶಾಂತಿ ಎನ್ನುತ್ತಿದ್ದರು, ಆದರೆ ಈಗ ಯುದ್ದ ನಿಲ್ಲಿಸಿದಾಗ ಯುದ್ದ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ, ಯುದ್ದದ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ಇದ್ದು ಪಾಕಿಸ್ತಾನಕ್ಕೆ ಬುದ್ದಿ ಕಲಿಸಬೇಕು.
ನಮ್ಮ ಅಧಿಕಾರಿಗಳು ಸಾಕ್ಷಿ ಸಮೇತ ದಾಳಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.

ಆದರೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವರು ಇದನ್ನು ತಡೆದುಕೊಳ್ಳೋಕೆ ಆಗುತ್ತಿಲ್ಲ. ಪಿಒಕೆ ನಮ್ಮದು, ಆದರೆ ಕಾರಾಣಂತರದಿಂದ ಬಿಟ್ಟಿದ್ದೇವೆ. ಇವಾಗ ಪ್ರಧಾನಿಗಳು ಅದನ್ನು ವಶಕ್ಕೆ ಪಡೆಯೋದಾಗಿ ಹೇಳಿದ್ದಾರೆ. ಪಾಕಿಸ್ತಾನದ ಉಗ್ರ ನೆಲೆಗಳನ್ನು ನಮ್ಮ ಸೈನಿಕರು ಧ್ವಂಸ ಮಾಡಿದ್ದಾರೆ. ಪಾಕಿಸ್ತಾನ ಸೈನಿಕರೇ ನಮ್ಮ ಸೈನಿಕರಿಗೆ ಕರೆ ಮಾಡಿ ಕದನ ವಿರಾಮ ಕೇಳಿದ್ದಾರೆ. ಅಂದರೆ ಸೋಲು ಒಪ್ಪಿಕೊಂಡಂತೆ ಆಯ್ತಲ್ಲ.

ಇದನ್ನೂ ಓದಿ :‘ನಿನ್ನ ಜಾತಿಯವರು ದೇವಸ್ಥಾನಕ್ಕೆ ಬರಬಾರ್ದು ಎಂದು ಅವಮಾನ’: ಅಧಿಕಾರಿಗಳಿಂದ ಪರಿಹಾರ

ನಾವೆಲ್ಲಾ ಒಟ್ಟಾಗಿ ಸೈನಿಕರ ಜೊತೆ ನಿಲ್ಲಬೇಕು, ಪಿಒಕೆ ಬಿಟ್ಟುಕೊಟ್ಟಿದ್ದನ್ನು, ಸಿಂಧು ನದಿ ನೀರಿನ ಬಗ್ಗೆ ನಾವು ಪ್ರಶ್ನೆ ಮಾಡುತ್ತಿಲ್ಲ. ಆಗಿ ಹೋಗಿರುವುದನ್ನು ಕೇಳೋದು ಸೂಕ್ತವಲ್ಲ. ಆದರೆ ಮುಂದೆ ಆಗಬೇಕಿದ್ದನ್ನು ಯೋಚನೆ ಮಾಡಿ ಪಾಕಿಸ್ತಾನಕ್ಕೆ ಬುದ್ದಿ ಕಲಿಸಬೇಕು. ಇಂದಿರಾ ಗಾಂಧಿ ಬಗ್ಗೆ ಮಾತಾಡೋದು ಸರಿಯಲ್ಲ ಎಂದು ಆರ್​.ಅಶೊಕ್​ ಹೇಳಿದರು.

Exit mobile version