Site icon PowerTV

ಆಟವಾಡುವ ವಿಚಾರಕ್ಕೆ ಜಗಳ: ಸ್ನೇಹಿತನ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿದ 13 ವರ್ಷದ ಬಾಲಕ

ಹುಬ್ಬಳ್ಳಿ : 13 ವರ್ಷದ ಬಾಲಕನೋರ್ವ ತನ್ನ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು. ಕೊಲೆಯಾದ ಬಾಲಕನನ್ನು 15 ವರ್ಷದ ಚೇತನ್​ ಎಂದು ಗುರುತಿಸಿದ್ದು. ಕಮರಿಪೇಟೆ ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹುಬ್ಬಳ್ಳಿ ನಗರದಲ್ಲಿ ಇಂದು ನಡೆಯಬಾರದ ಘಟನೆಯೊಂದು ನಡೆದುಹೋಗಿದೆ.ನಿನ್ನೆ ಸಂಜೆ ನಡೆದ ಘಟನೆಯ ವಿಷಯ ತಿಳಿದು ಇಡೀ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ. ಹದಿಮೂರು ವರ್ಷದ ಅಪ್ರಾಪ್ತ ಬಾಲಕ, ತನ್ನ ಮನೆ ಮುಂದೆಯೇ ಇರೋ ತನ್ನ ಸ್ನೇಹಿತನಾಗಿದ್ದ ಹದಿನೈದು ವರ್ಷದ ಬಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇಂತಹದೊಂದು ಘಟನೆ ನಡೆದಿದ್ದು ಹುಬ್ಬಳ್ಳಿ ನಗರದ ಗುರುಸಿದ್ದೇಶ್ವರ ನಗರದಲ್ಲಿ.

ಇದನ್ನೂ ಓದಿ :ಮಿನಿ ಬಸ್ ಪಲ್ಟಿ: ಏಪೋರ್ಟ್​ ಸಿಬ್ಬಂದಿಗಳಿಗೆ ಗಂಭೀರ ಗಾಯ

ಗುರುಸಿದ್ದೇಶ್ವರ ನಗರದ ನಿವಾಸಿಯಾಗಿರೋ ಹದಿನೈದು ವರ್ಷದ ಚೇತನ್ ರಕ್ಕಸಗಿ ಕೊಲೆಯಾದ ಬಾಲಕನಾಗಿದ್ದಾನೆ. ನಿನ್ನೆ ಸಂಜೆ ಚೇತನ್​ ಮತ್ತು ಕೊಲೆ ಮಾಡಿದ ಆರೋಪಿ ಬಾಲಕ ಇಬ್ಬರು ಜಗಳ ಮಾಡಿಕೊಂಡಿದ್ದು. ಅಪ್ರಾಪ್ತ ಬಾಲಕ ಮನೆಯಿಂದ ಚಾಕು ತಂದು ಚೇತನ್​ ಹೊಟ್ಟೆಯ ಎಡಬಾಗಕ್ಕೆ ಇರಿದಿದ್ದಾನೆ. ಚಾರು ಇರಿತಕೊಳ್ಳಗಾದ ಚೇತನ್​ ಅಲ್ಲಿಯೇ ಕುಸಿದು ಬಿದ್ದಿದ್ದು. ಅಲ್ಲಿದ್ದ ಮಕ್ಕಳು ಕಿರುಚುವುದನ್ನು ಕಂಡ ಆರೋಪಿ ತಾಯಿ ಸ್ಥಳಕ್ಕೆ ಬಂದು ಚೇತನ್​ನನ್ನು ಕಿಮ್ಸ್​​ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಸೇರಿಸುವ ವೇಳೆಗೆ ಚೇತನ್​ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ :ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜರ ಭೇಟಿಯಾದ ವಿರಾಟ್​, ಅನುಷ್ಕಾ ದಂಪತಿ

ಇನ್ನು ಕೊಲೆಯಾದ ಚೇತನ್ ಈಗಷ್ಟೇ ಒಂಬತ್ತನೇ ತರಗತಿ ಪಾಸ್ ಆಗಿದ್ದನಂತೆ. ಕೊಲೆ ಮಾಡಿದ ಬಾಲಕ ಆರನೇ ತರಗತಿ ಪಾಸ್ ಆಗಿದ್ದನಂತೆ. ಎದುರು ಬದರು ಮನೆ ಇರೋದರಿಂದ, ಮತ್ತು ಸದ್ಯ ರಜೆ ಇದ್ದಿದ್ದರಿಂದ, ಎಲ್ಲಾ ಬಾಲಕರು ಪ್ರತಿ ದಿನ ಆಟ ಆಡ್ತಿದ್ದರಂತೆ. ನಿನ್ನೆ ಕೂಡಾ ಚೇತನ್ ಮತ್ತು ಕೊಲೆ ಮಾಡಿದ ಬಾಲಕ ಸೇರಿದಂತೆ ಐದಾರು ಸ್ನೇಹಿತರು ಸೇರಿಕೊಂಡು ಆಟವಾಡ್ತಿದ್ದರಂತೆ. ಆಟವಾಡುತ್ತಿದ್ದಾಗಲೇ ಚೇತನ್ ಮತ್ತು ಕೊಲೆ ಮಾಡಿರೋ ಬಾಲಕ ಆಟದ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರಂತೆ. ಅಷ್ಟಕ್ಕೆ ಬಾಲಕ ಮನೆಗೆ ಹೋಗಿ ಚಾಕುತಂದು ಕೊಲೆ ಮಾಡಿ ಬಿಟ್ಟಿದ್ದಾನೆ.

ಇದನ್ನೂ ಓದಿ :‘ನನ್ನ ಸೂಪರ್​ ಹೀರೋ ಕೊಹ್ಲಿ ಭಯ್ಯಾ’: ವಿರಾಟ್​ ನಿವೃತ್ತಿಗೆ ಭಾವುಕ ಪತ್ರ ಬರೆದ ಸಿರಾಜ್​

ಘಟನೆ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಇನ್ನು ಹುಬ್ಬಳ್ಳಿ ಪೊಲೀಸ್​ ಆಯುಕ್ತ ಎನ್​.ಶಶಿಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ನನ್ನ ಸರ್ವೀಸ್​​ನಲ್ಲೇ ಇಂತಹ ಘಟನೆಯನ್ನ ಮೊದಲ ಬಾರಿಗೆ ನೋಡುತ್ತಿದ್ದೇನೆ. ಪೋಷಕರು ಮಕ್ಕಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

Exit mobile version