Site icon PowerTV

ಮೋದಿ ಬದಲು ಟ್ರಂಪ್​ ವಿಶ್ವಗುರು ಆಗಿದ್ದಾರೆ, ಮೋದಿ ಸೈನಿಕರಿಗೆ ಅವಮಾನ ಮಾಡಿದ್ದಾರೆ: BK ಹರಿಪ್ರಸಾದ್​

ಬೆಂಗಳೂರು : ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವನ್ನ ಮೂರನೇ ದೇಶ ಘೋಷಿಸಿರುವ ಬಗ್ಗೆ ಕಾಂಗ್ರೆಸ್​ ಪರಿಷತ್​ ಸದಸ್ಯ ಬಿ.ಕೆ ಹರಿಪ್ರಸಾದ್​ ಕಿಡಿಕಾರಿದ್ದು. ಇನ್ನು ಮುಂದೆ ಮೋದಿ ಬದಲು ಟ್ರಂಪ್​ ವಿಶ್ವಗುರು ಹಾಗಿದ್ದಾರೆ, ಶಿಮ್ಲಾ ಒಪ್ಪಂದವನ್ನ ಉಲ್ಲಂಘಿಸಿ ಮೋದಿ ಸೈನಿಕರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್​ ವತಿಯಿಂದ ಕೆಪಿಸಿಸಿ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆದಿದ್ದು. ಈ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ  ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ “ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ವಿಚಾರವಾಗಿ ಸ್ಪಷ್ಟ ನಿಲುವನ್ನ ತೆಗೆದುಕೊಂಡಿತ್ತು. ಆದರೂ ಸಹ ಹತ್ತು ದಿನಗಳ ಕಾಲ ಕಾರ್ಯಚರಣೆ ಹೇಗೆ ಆಯ್ತು ಎಂಬುದು ಯಾರಿಗೂ ಗೊತ್ತಿಲ್ಲ. ಸರ್ವಪಕ್ಷ‌ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರಾಗಿದ್ದರು, ಗಂಭೀರ ವಿಚಾರವಾದರೂ ಗೈರಾಗಿದ್ದರು
ಈಗ ಕದನ ವಿರಾಮವನ್ನ ಘೋಷಣೆ ಮಾಡಿದ್ದಾರೆ. ಮೂರನೇ ರಾಷ್ಟ್ರದ ಪ್ರವೇಶಕ್ಕೆ ಅವಕಾಶ ಇಲ್ಲವೆಂದು ಶಿಮ್ಲಾ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೂ ಮೂರನೇ ದೇಶದ ಅಧ್ಯಕ್ಷ ಕದನ ವಿರಾಮದ ಬಗ್ಗೆ ಘೋಷಿಸಿದ್ದಾರೆ.

ಇದನ್ನೂ ಓದಿ :ಯುದ್ದದ ಕಾರ್ಮೋಡ; ಸಹೋದರನ ಅಂತ್ಯಕ್ರಿಯೆಗೆ ಬಂದಿದ್ದ ಯೋಧ ಯುದ್ದಭೂಮಿಗೆ ವಾಪಸ್​

ಪಹಲ್ಗಾಮ್​ಗೆ ಬಂದಂತಹ ಭಯೋತ್ಪಾದಕರು ಎಲ್ಲಿಗೆ ಹೋದ್ರು ಅಂತ ಇನ್ನು ಗೊತ್ತಾಗಿಲ್ಲ. ಈ ಬಗ್ಗೆ ಚರ್ಚೆ ಮಾಡಬೇಕು ಅಂತ ರಾಹುಲ್ ಗಾಂಧಿ ಸಂಸತ್ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದಾರೆ. 1972 ಇಂದಿರಾಗಾಂಧಿ ಶಿಮ್ಲಾ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಅನ್ವಯ ಪಾಕಿಸ್ಥಾನದ ಜೊತೆ ಯುದ್ದ ಮಾಡುವಾಗ ಯಾವ ರಾಷ್ಟ್ರಗಳು ತಲೆಹಾಕಬಾರದು. ಆದರೆ ಇವೆಲ್ಲವನ್ನ ಗಾಳಿಗೆ ತೂರಿ ಅಮೆರಿಕಾದ ಅಧ್ಯಕ್ಷ ಟ್ರಂಪ್ ಸೋಷಿಯಲ್ ಮೀಡಿಯಾ ಮೂಲಕ ಕದನ ವಿರಾಮ ಘೋಷಿಸುತ್ತಾರೆ. ಹೀಗಿರುವಾಗ ನಾಳೆಯಿಂದ ಮೋದಿಯನ್ನ ವಿಶ್ವಗುರು ಅಂತ ಕರೆಯೋಕೆ ಆಗಲ್ಲ, ಈಗ ಡೋನಾಲ್ಡ್​ ಟ್ರಂಪ್​ ವಿಶ್ವಗುರು ಹಾಗಿದ್ದಾರೆ.

ದೇಶದ ಜನರ ನಿರೀಕ್ಷೆಗೆ ಮೋದಿ ತಣ್ಣೀರು ಎರಚ್ಚಿದ್ದಾರೆ..!

ಮುಂದುವರಿದು ಮಾತನಾಡಿದ ಹರಿಪ್ರಸಾದ್​ “ಮೋದಿ ಬೆನ್ನಿಗೆ ಇಡೀ ದೇಶದ ಜನ ಸೈನಿಕರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಮೋದಿ ದೇಶದ ಜನರ ನಿರೀಕ್ಷೆಗೆ ತಣ್ಣೀರು ಎರಚಿದ್ದಾರೆ. ಶಿಮ್ಲಾ ಒಪ್ಪಂದದ ಪ್ರಕಾರ ಈ ವಿಷಯದಲ್ಲಿ ವಿಶ್ವಸಂಸ್ಥೆಯೂ ತಲೆ ಹಾಕುವಂತಿಲ್ಲ. ಆದರೆ ಮೋದಿ ವಿದೇಶಾಂಗ ನೀತಿಯನ್ನ ಉಲ್ಲಂಘನೆ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ಇದೊಂದು ಅವಕಾಶ ಸಿಕ್ಕಿತ್ತು.

ಇದನ್ನೂ ಓದಿ :ದೇಶದ ರಕ್ಷಣೆಗೆ ಇಸ್ರೋ ಸದಾ ಬದ್ದ; ನೆರೆಯವರ ಮೇಲೆ ಸದಾ ಕಣ್ಣಿಟ್ಟಿರುತ್ತೇವೆ ಎಂದ ಇಸ್ರೋ ಮುಖ್ಯಸ್ಥ

ಆದರೆ ಅದನ್ನು ಕಳೆದುಕೊಂಡಿದ್ದೇವೆ, ಮೂರನೇ ದೇಶ ನಮ್ಮ ವಿಷಯಕ್ಕೆ ತಲೆ ಹಾಕುವಷ್ಟು ನಾವು ದುರ್ಬಲರಾಗಿಲ್ಲ. ಪಾಕಿಸ್ತಾನದ ಡಿಜಿಎಂಓಗೆ ಟ್ರಂಪ್ ಹೇಳಿದ್ದಾರೆ, ಪಾಕ್ ಡಿಜಿಎಂಓ ಟ್ರಂಪ್ ಸಂದೇಶವನ್ನ ಭಾರತಕ್ಕೆ ತಿಳಿಸಿದ್ದಾರೆ, ಅಷ್ಟೇ ಅಲ್ಲ ಟ್ರಂಪ್ ಟ್ವಿಟ್ ಮಾಡಿ ನಾನು ಮಧ್ಯಸ್ಥಿಕೆ ವಹಿಸಿ ಶಾಂತಿ ನೆಲೆಸುವಂತೆ ಮಾಡಿದ್ದೇನೆ ಅಂತ ಹೇಳಿದ್ದಾರೆ. ಹೀಗಿದ್ದಾಗ ಮೂರನೇಯವರು ತಲೆ ಹಾಕಿದಂತಾಯ್ತಲ್ಲಾ ಎಂದು ಹೇಳಿದರು.

Exit mobile version