Site icon PowerTV

ಯುದ್ದದ ಕಾರ್ಮೋಡ; ಸಹೋದರನ ಅಂತ್ಯಕ್ರಿಯೆಗೆ ಬಂದಿದ್ದ ಯೋಧ ಯುದ್ದಭೂಮಿಗೆ ವಾಪಸ್​

ಯಾದಗಿರಿ : ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಹಿನ್ನೆಲೆ, ತುರ್ತು ರಜೆ ಮೇಲೆ ಊರಿಗೆ ಬಂದಿದ್ದ ಯೋಧರೊಬ್ಬರು ಸೇವೆಗೆ ಮರಳಿದ್ದಾರೆ.

ಮೂಲತಃ ಕಲಬುರಗಿ ಜಿಲ್ಲೆಯ ಅಲ್ಲೂರು ಗ್ರಾಮದ ಯೋಧ ಬಸವರಾಜ, ಕಳೆದ 23 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜಮ್ಮು-ಕಾಶ್ಮೀರದ ಉದಂಪುರ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ್​ ಸಹೋದರನ ಅಂತ್ಯಕ್ರಿಯೆಗೆ ಎಂದು ತುರ್ತು ರಜೆ ಪಡೆದು ಗ್ರಾಮಕ್ಕೆ ಆಗಮಿಸಿದ್ದರು. ಆದರೆ ಗಡಿಯಲ್ಲಿ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆ ಸೇನೆಯಿಂದ ಯೋಧನಿಗೆ ತುರ್ತು ಕರೆ ಬಂದಿದ್ದು. ಯೋದ ಸೇವೆಗೆ ಮರಳಿದ್ದಾರೆ.

ಇದನ್ನೂ ಓದಿ :ದೇಶದ ರಕ್ಷಣೆಗೆ ಇಸ್ರೋ ಸದಾ ಬದ್ದ; ನೆರೆಯವರ ಮೇಲೆ ಸದಾ ಕಣ್ಣಿಟ್ಟಿರುತ್ತೇವೆ ಎಂದ ಇಸ್ರೋ ಮುಖ್ಯಸ್ಥ

ಯುದ್ದ ಭೂಮಿಗೆ ಹೊರಟಿರುವ ಯೋಧನಿಗೆ ಪತ್ನಿ, ಮಗಳು ಆರತಿ ಬೆಳಗಿ, ಸಿಂದೂರವಿಟ್ಟು ಬೀಳ್ಕೊಟ್ಟಿದ್ದು. ಗ್ರಾಮಸ್ಥರು ಕೂಡ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸನ್ಮಾನ ಮಾಡಿ ಶುಭ ಕೋರಿ  ಕಳುಹಿಸಿ ಕೊಟ್ಟಿದ್ದಾರೆ. ಯೋಧ ಬಸವರಾಜ್ ಇಂದು ಯಾದಗಿರಿಯಿಂದ​ ರೈಲು ಮೂಲಕ ದೆಹಲಿಗೆ ಹೊರಡಲಿದ್ದು. ಅಲ್ಲಿಂದ ಕಾಶ್ಮೀರಕ್ಕೆ ತೆರಳಲಿದ್ದಾರೆ.

Exit mobile version