Saturday, August 23, 2025
Google search engine
HomeUncategorizedರಾಕೇಶ್​ನ ಅಗಲಿಕೆ ದೇವರ ಮೇಲಿದ್ದ ಸ್ವಲ್ಪ ನಂಬಿಕೆಯನ್ನು ಸಾಯುವಂತೆ ಮಾಡಿದೆ: ನಯನಾ

ರಾಕೇಶ್​ನ ಅಗಲಿಕೆ ದೇವರ ಮೇಲಿದ್ದ ಸ್ವಲ್ಪ ನಂಬಿಕೆಯನ್ನು ಸಾಯುವಂತೆ ಮಾಡಿದೆ: ನಯನಾ

ಉಡುಪಿ : ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್​ ರಾಕೇಶ್ ಪೂಜಾರಿ ಹೃದಯಾಘಾದಿಂದ ಇಹಲೋಕ ತ್ಯಜಿಸಿದ್ದು. ಉಡುಪಿಯ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತಿಮ ದರ್ಶನ ಪಡೆದು ಮಾತನಾಡಿದ ನಯನ ‘ರಾಕೇಶ್​ ಒಬ್ಬ ಅಜಾತ ಶತೃ, ಆತನ ಸಾವಿನಿಂದ ದೇವರ ಮೇಲಿದ್ದ ಸ್ವಲ್ಪ ನಂಬಿಕೆಯೂ ಹೊರಟು ಹೋಯಿತು ಎಂದು ಹೇಳಿದರು.

ತಂಗಿ ಮದುವೆಯನ್ನ ಗ್ರ್ಯಾಂಡ್​ ಆಗಿ ಮಾಡುವ ಕನಸು ಕಂಡಿದ್ದ ರಾಕೇಶ್..!

ರಾಕೇಶ್​ ಪೂಜಾರಿ ಬಗ್ಗೆ ಮಾತನಾಡಿದ ನಯನಾ “ಒಬ್ಬ ಒಳ್ಳೆ ಗೆಳೆಯನನ್ನು ನಾವು ಕಳೆದುಕೊಂಡಿದ್ದೇವೆ. ರಾಕೇಶ್ ಅಪ್ಪನ ಹಾಗೆ, ಆದರೆ ಅವನ ಮನಸ್ಸು ಮಗುವಿನ ಹಾಗೆ. ನಾವೆಲ್ಲ ನಟ ನಟಿಯರು ರಾಕೇಶ್ ಕುಟುಂಬದ ಜೊತೆ ಇದ್ದೇವೆ. ರಾಕೇಶ್ ಪೂಜಾರಿ ಒಬ್ಬ ಅಜಾತಶತ್ರು, ಆದರೆ ಆತನ ಸಾವಿನಿಂದ ದೇವರ ಮೇಲೆ ಇದ್ದ ಸ್ವಲ್ಪ ನಂಬಿಕೆ ಹೊರಟು ಹೋಯಿತು. ಇದನ್ನೂ ಓದಿ :ಪತ್ನಿ ಜೊತೆ ಅನೈತಿಕ ಸಂಬಂಧ: ಯುವಕನನ್ನು ಕೊಂದು ಕಾಲುವೆಗೆ ಎಸೆದ ಪತಿ

ರಾಕೇಶ್​ ಜೀವನದ ಒಂದೇ ಒಂದು ದೊಡ್ಡ ಆಸೆ ತಂಗಿಯ ಮದುವೆ ತುಂಬಾ ಗ್ರಾಂಡ್ ಆಗಿ ಆಗಬೇಕು ಎಂಬುದು. ನಾವೆಲ್ಲಾ ಕಲಾವಿದರು ಅವನ ಕುಟುಂಬದ ಜೊತೆ ನಿಂತಿದ್ದೇವೆ. ರಾಕೇಶ್​ ಹೆಸರು, ದುಡ್ಡು ಅಂತ ಸಾಯ್ಬೇಡಿ ಅಂತ ಯಾವಾಗಲು ಹೇಳುತ್ತಿದ್ದ. ಜೀವನದಲ್ಲಿ ಹೇಗಿದ್ದನೋ ಹಾಗೇ ಸ್ಟೇಜ್​ ಮೇಲೆ ಬರುತ್ತಿದ್ದ, ಅವನ ಜೊತೆ ಬಹಳ ದಿನ ಇರಲು ನಮಗೆ ಪುಣ್ಯವಿಲ್ಲ ಎಂದು ನಯನಾ ಹೇಳಿದರು. ಇದನ್ನೂ ಓದಿ :International Taekwon Competition : ಎರಡು ಚಿನ್ನ ಗೆದ್ದ ಕನ್ನಡಿಗ ‘ದಕ್ಷಿಣ್ ಸೂರ್ಯ’

ಕಾಮಿಡಿ ಕಿಲಾಡಿಗಳು ತಂಡದ ಸೂರಜ್ ಹೇಳಿಕೆ

ಕಾಮಿಡಿ ಕಿಲಾಡಿಗಳು ತಂಡದ ಸೂರಜ್ ರಾಕೇಶ್​ ಅಂತಿಮ ದರ್ಶನ ಪಡೆದು ಅವರೊಂದಿಗಿದ್ದ ಒಡನಾಟವನ್ನ ಹಂಚಿಕೊಂಡರು. ಈ ವೇಳೆ ಮಾತನಾಡಿದ ಅವರು “ಟಿವಿಗಳಲ್ಲಿ ಬರುವ ಮೊದಲಿನಿಂದಲೂ ನಮಗೆಲ್ಲರಿಗೂ ಸ್ನೇಹ ಇತ್ತು. ನಾವು ಒಟ್ಟಿಗೆ ಆಡಿಶನ್ ಗೆ ಹೋಗುತ್ತಿದ್ದೆವು, ಒಂದೇ ಕೋಣೆಯಲ್ಲಿ ಒಂದೇ ಬೆಡ್ ನಲ್ಲಿ ಮಲಗುತ್ತಿದ್ದೆವು, ಈ ರೀತಿ ನಮ್ಮನ್ನು ಬಿಟ್ಟು ಹೋಗುತ್ತಾನೆ ಎಂದುಕೊಂಡಿರಲಿಲ್ಲ, ನಿನ್ನೆ ರಾತ್ರಿ ಹತ್ತು ಮೂವತ್ತಕ್ಕೆ ಫೋನ್ ಮಾಡಿದ್ದ, 17 ನೇ ತಾರೀಕು ಒಂದು ಕಾರ್ಯಕ್ರಮ ಇದೆ ಬಾ ಎಂದು ಹೇಳಿದ್ದೆ
ಆದರೆ ಈಗ ರಾಕೇಶ್ ಹೋಗಿಬಿಟ್ಟಿದ್ದಾನೆ ಎಂದು ತಮ್ಮ ಗೆಳೆಯಲ ಅಗಲಿಕೆ ಬಗ್ಗೆ ಸೂರಜ್​ ಕಂಬನಿ ಮಿಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments