Site icon PowerTV

ಭಾರತೀಯ ಸೇನಾ ಪಡೆಗಳ ಘರ್ಜನೆ ರಾವಲ್ಪಿಂಡಿಯವರೆಗೂ ತಲುಪಿದೆ; ರಾಜನಾಥ್​ ಸಿಂಗ್​

ದೆಹಲಿ : ಉತ್ತರಪ್ರದೇಶ ಲಖ್ನೋದಲ್ಲಿರುವ ಬ್ರಹ್ಮೋಸ್​ ಕ್ಷಿಪಣಿ ಉತ್ಪಾದನ ಘಟಕದ ಉದ್ಘಾಟನೆ ನಡೆಸಿದ ನಂತರ ಮಾತನಾಡಿದ ರಾಜನಾಥ್​ ಸಿಂಗ್​ ‘ಭಾರತೀಯ ಸೇನಾ ಪಡೆಗಳ ಘರ್ಜನೆ ರಾವಲ್ಪಿಂಡಿಯವರೆಗೂ ತಲುಪಿದೆ, ಭಾರತೀಯ ಸೇನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿ ಮೇಲೆ ಭಾರತ ಸಶಸ್ತ್ರ ಪಡೆಗಳು ದಾಳಿ ನಡೆಸಿದ್ದಾರೆ ಎಂದು ರಕ್ಷಣ ಸಚಿವ ರಾಜನಾಥ್​ ಸಿಂಗ್​ ತಿಳಿಸಿದರು.

ಉತ್ತರ ಪ್ರದೇಶದ ಲಕ್ನೋದಲ್ಲಿರುವ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಷನ್ ಮತ್ತು ಪರೀಕ್ಷಾ ಸೌಲಭ್ಯದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್  ‘‘ಜಗತ್ತಿನಲ್ಲಿ ಭಯಕ್ಕೆ ಸ್ಥಾನವಿಲ್ಲ, ಶಕ್ತಿ, ಶಕ್ತಿಯನ್ನು ಗೌರವಿಸುತ್ತೆ’’ ಎಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸಾಲುಗಳನ್ನು ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಮೆಲುಕುಹಾಕಿದ್ದಾರೆ.

ಇದನ್ನೂ ಓದಿ :ವಾರದ ಹಿಂದಷ್ಟೆ ಜನಿಸಿದ ಮಗು, ಬಾಣಂತಿ ಪತ್ನಿಯನ್ನ ಬಿಟ್ಟು ಯುದ್ದ ಭೂಮಿಗೆ ತೆರಳಿದ ಯೋಧ

ಲಕ್ನೋದಲ್ಲಿ ಸ್ಥಾಪನೆಯಾಗಿರುವ ಕ್ಷಿಪಣಿ ಉತ್ಪಾದನ ಘಟಕ ಉದ್ಘಾಟಿಸಿ ಮಾತನಾಡಿದ ರಾಜನಾಥ್​ ಸಿಂಗ್ ‘ಉದ್ಘಾಟನೆಯಾಗುತ್ತಿರುವುದು ಒಂದು ಕಾರ್ಖಾನೆಯಲ್ಲ, ಇದು ಸ್ವಾವಲಂಬನೆಯ ಒಂದು ಉತ್ತಮ ಉದಾಹರಣೆಯಾಗಿದೆ. ನಿರ್ಮಾಣವಾಗಿರುವ ರಕ್ಷಣಾ ಕಾರಿಡಾರ್​ಗೆ 4 ಸಾವಿರ ಕೋಟಿ ಹಣವನ್ನ ಹೂಡಿಕೆ ಮಾಡಲಾಗಿದೆ.

ಈ ಸಮಯದಲ್ಲಿ, ಪ್ರತಿದಿನ ಬರುವ ಹೊಸ ತಂತ್ರಜ್ಞಾನಗಳು ಜಗತ್ತಿನಲ್ಲಿ ಕ್ರಾಂತಿಯನ್ನು ತರುತ್ತಿವೆ. ಮುಂಬರುವ ದಿನಗಳಲ್ಲಿ ಲಕ್ನೋ ತಂತ್ರಜ್ಞಾನದ ಸಂಗಮ ಎಂದು ಕರೆಯಲ್ಪಡುತ್ತದೆ. ಇದು ನೇರವಾಗಿ ಅಥವಾ ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ದೇಶದ ಅಭಿವೃದ್ಧಿ ಕೆಲಸಗಳು ಎಂದಿಗೂ ನಿಲ್ಲುವುದಿಲ್ಲ, ಎಂಥಾ ಪರಿಸ್ಥಿತಿಯಲ್ಲೂ ಮುಂದುವರೆಯುತ್ತಲೇ ಇರುತ್ತದೆ. ನಾವು ಗುರಿಯನ್ನು ಸಾಧಿಸುತ್ತೇವೆ. ಬ್ರಹ್ಮೋಸ್ ವಿಶ್ವದ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳಲ್ಲಿ ಒಂದಾಗಿದೆ ಎಂದು ರಕ್ಷಣಾ ಸಚಿವರು ಹೇಳಿದರು.

ಪಾಕಿಸ್ತಾನದ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ..!

ಇದನ್ನೂ ಓದಿ :ಕಳೆದ 24 ಗಂಟೆಯಲ್ಲಿ ನಾಲ್ವರು ಯೋಧರು ಹುತಾತ್ಮ: 7 ಮಂದಿಗೆ ಗಾಯ

ಆಪರೇಷನ್​ ಸಿಂಧೂರ್​ ಹೆಸರಿನಲ್ಲಿ ಭಾರತ ಪಾಕಿಸ್ತಾನದ ಮೇಲೆ ನಡೆಸುತ್ತಿರುವ ದಾಳಿ ಕೇವಲ ಪಾಕಿಸ್ತಾನದ ಭಯೋತ್ಪಾದನ ಮೂಲಸೌಕರ್ಯವನ್ನು ನಾಶಗೊಳಿಸಲಿ ಮಾತ್ರ ಸೀಮಿತವಾಗಿದೆ. ನಾವು ಎಂದಿಗೂ ಅವರ ಅಮಾಯಕರನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ ಪಾಕಿಸ್ತಾನ ಭಾರತದ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು. ದೇವಾಲಯ, ಗುರುದ್ವಾರ ಮತ್ತು ಚರ್ಚಗಳ ಮೇಲೆ ದಾಳಿ ನಡೆಸಲು ಪ್ರಯತ್ನಿದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ರಾಜನಾತ್​ ಸಿಂಗ್​ “ಆಪರೇಷನ್​ ಸಿಂಧೂರ್​ ಎಂಬುದು ಭಾರತದ ರಾಜಕೀಯ, ಸಾಮಾಜಿಕ ಮತ್ತು ಮಿಲಿಟರಿ ಇಚ್ಚಾಶಕ್ತಿಯ ಸಂಕೇತವಾಗಿದೆ. ಈ ಕಾರ್ಯಚರಣೆಗ ಮೂಲಕ ಭಾರತ ವಿರೋಧಿ ಶಕ್ತಿಗಳಿಗೆ ಮತ್ತು ಅವರ ಬೆಂಬಲಿಗರಿಗೆ ಭಾರತ ಎಚ್ಚರಿಕೆ ನೀಡಿದೆ ಎಂದು ರಾಜನಾಥ್​ ಸಿಂಗ್​ ಹೇಳಿದರು.

Exit mobile version