Site icon PowerTV

ವಾರದ ಹಿಂದಷ್ಟೆ ಜನಿಸಿದ ಮಗು, ಬಾಣಂತಿ ಪತ್ನಿಯನ್ನ ಬಿಟ್ಟು ಯುದ್ದ ಭೂಮಿಗೆ ತೆರಳಿದ ಯೋಧ

ಕಲಬುರಗಿ : ವಾರದ ಹಿಂದಷ್ಟೇ ಜನಿಸಿದ ಮಗು, ಬಾಣಂತಿ ಪತ್ನಿಯನ್ನು ಬಿಟ್ಟು ಯೋಧರೊಬ್ಬರು ಯುದ್ದಭೂಮಿಗೆ ಕಡೆಗೆ ತೆರಳಿದ್ದು. ಧೀರ ಯೋಧನನ್ನು ಹಣಮಂತರಾಯ ಅವಸೆ ಎಂದು ಗುರುತಿಸಲಾಗಿದೆ.

ಕಲಬುರಗಿಯ ವೀರಯೋಧ ಹಣಮಂತರಾಯ ಅವಸೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದು. ಇವರು ಕಳೆದ  20 ವರ್ಷಗಳಿಂದ CRPF ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗರ್ಭಿಣಿ ಪತ್ನಿಯ ಡೆಲಿವರಿ ಹಿನ್ನಲೆ ಒಂದು ತಿಂಗಳ ರಜೆ ಪಡೆದು ಮನೆಗೆ ಬಂದಿದ್ದ ಯೋಧ ವಾರದ ಹಿಂದಷ್ಟೆ ಜನಸಿದ ಮಗು ಮತ್ತು ಬಾಣಂತಿ ಪತ್ನಿಯನ್ನು ಬಿಟ್ಟು ಗಡಿಗೆ ತೆರಳಿದ್ದಾರೆ.

ಇದನ್ನೂ ಓದಿ :ಕಳೆದ 24 ಗಂಟೆಯಲ್ಲಿ ನಾಲ್ವರು ಯೋಧರು ಹುತಾತ್ಮ: 7 ಮಂದಿಗೆ ಗಾಯ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಯೋಧ “ನನಗೆ ಮಗು, ಮನೆ, ಕುಟುಂಬಕ್ಕಿಂತ ದೇಶ ಮುಖ್ಯ. ನಾನು ಸೇವೆಗೆ ಸೇರುವ ಮುನ್ನ ನನಗೆ ಇದೇ ವಾಕ್ಯ ಕಲಿಸಿದ್ದಾರೆ. ಹಾಗಾಗಿ ದೇಶ ಸೇವೆಗಾಗಿ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಪತಿಯ ಬಗ್ಗೆ ಪತ್ನಿ ಸ್ನೇಹ ಮಾತನಾಡಿದ್ದು ‘ನನ್ನ ಗಂಡ ನಮನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗುತ್ತಿರುವ ಬಗ್ಗೆ ಬೇಜಾರಿಲ್ಲ, ನನಗೆ ನನ್ನ ಗಂಡನ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.

Exit mobile version