Site icon PowerTV

ಪಾಕಿಸ್ತಾನಿಯರನ್ನ ಕೇಳಿದ್ರೆ ಬ್ರಹ್ಮೋಸ್​ ಕ್ಷಿಪಣಿ ತಾಕತ್ತು ತಿಳಿಯುತ್ತದೆ: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ : ಲಕ್ನೋದಲ್ಲಿರುವ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭದಲ್ಲ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಪರೇಷನ್​ ಸಿಂಧೂರ್​ನಲ್ಲಿ ಬ್ರಹ್ಮೋಸ್​ ಕ್ಷಿಪಣಿ ಬಳಕೆ ಬಗ್ಗೆ ಮಾತನಾಡಿದ್ದು. ಬ್ರಹ್ಮೋಸ್​ ಕ್ಷಿಪಣಿ ಶಕ್ತಿಯನ್ನ ನೋಡಿಲ್ಲದವರು ಪಾಕಿಸ್ತಾನವನ್ನ ಕೇಳಿ ನೋಡಿ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ :“ಆಪರೇಷನ್​ ಸಿಂಧೂರ” ಕಾರ್ಯಚರಣೆ ಮುಗಿದಿಲ್ಲ: ಅಧಿಕೃತವಾಗಿ ಮಾಹಿತಿ ಹಂಚಿಕೊಂಡ ವಾಯುಪಡೆ

ಬ್ರಹ್ಮೋಸ್​ ಕ್ಷಿಪಣಿ ಉತ್ಪಾದನ ಕೇಂದ್ರ ಲಖ್ನೋದಲ್ಲಿ ಸ್ಥಾಪಿಸಲಾಗಿದ್ದು. ಇದರ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್​ “ಆಪರೇಷನ್ ಸಿಂಧೂರ್ ಸಮಯದಲ್ಲಿ ನೀವು ಬ್ರಹ್ಮೋಸ್ ಕ್ಷಿಪಣಿಯ ಒಂದು ನೋಟವನ್ನು ನೋಡಿರಬೇಕು. ನೀವು ನೋಡಿಲ್ಲದಿದ್ದರೆ, ಬ್ರಹ್ಮೋಸ್ ಕ್ಷಿಪಣಿಯ ಶಕ್ತಿಯ ಬಗ್ಗೆ ಪಾಕಿಸ್ತಾನದ ಜನರನ್ನು ಕೇಳಿ” ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಯೋಗಿ ಆದಿತ್ಯನಾಥ್​ ‘”ಮುಂದೆ ನಡೆಯುವ ಯಾವುದೇ ಭಯೋತ್ಪಾದನಾ ಕೃತ್ಯವನ್ನು ಯುದ್ಧ ಕೃತ್ಯವೆಂದು ಪರಿಗಣಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಹತ್ತಿಕ್ಕುವವರೆಗೆ ಭಯೋತ್ಪಾದನೆಯ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ.

ಇದನ್ನೂ ಓದಿ:ಪುಲ್ವಾಮ ದಾಳಿಯನ್ನ ಒಪ್ಪಿಕೊಂಡ ಪಾಕ್​ ಸೇನೆ: ಯುದ್ದತಂತ್ರವೆಂದ ಪಾಕಿಗಳು

ಭಯೋತ್ಪಾದನೆಯನ್ನು ಹತ್ತಿಕ್ಕಲು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾವೆಲ್ಲರೂ ಒಂದೇ ಧ್ವನಿಯಲ್ಲಿ ಒಟ್ಟಾಗಿ ಹೋರಾಡಬೇಕು. ಭಯೋತ್ಪಾದನೆಯು ಎಂದಿಗೂ ಪ್ರೀತಿಯ ಭಾಷೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಅದಕ್ಕೆ ತನ್ನದೇ ಆದ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ. ಆಪರೇಷನ್ ಸಿಂಧೂರ್ ಮೂಲಕ ಭಾರತವು ಇಡೀ ಜಗತ್ತಿಗೆ ಸಂದೇಶವನ್ನು ನೀಡಿದೆ” ಎಂದು ಯೋಗಿ ಆದಿತ್ಯನಾಥ್​ ಹೇಳಿದರು.

Exit mobile version