ಜಮ್ಮು- ಕಾಶ್ಮೀರ(ಮೇ.11): ಕಳೆದ 24 ಗಂಟೆಗಳಲ್ಲಿ ಜಮ್ಮು ಪ್ರದೇಶದಾದ್ಯಂತ ಪಾಕಿಸ್ತಾನಿ ಪಡೆಗಳು ನಡೆಸಿದ ತೀವ್ರ ಶೆಲ್ ದಾಳಿ ಮತ್ತು ಡ್ರೋನ್ ದಾಳಿಯಲ್ಲಿ ಸೇನೆಯ ನಾಲ್ವರು ಸೈನಿಕರು ಹುತಾತ್ಮರಾಗಿದ್ದು. ದಾಳಿಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ.
ಜಮ್ಮು-ಕಾಶ್ಮೀರ್ ಪೂಂಚ್‌ನ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿರುವ ಪೋಸ್ಟ್ ಮೇಲೆ ಫಿರಂಗಿ ದಾಳಿ ನಡೆಸಲಾಗಿದ್ದು. ಈ ದಾಳಿಯಲ್ಲಿ ಹಿಮಾಚಲ್ ಪ್ರದೇಶದ ಸುಬೇದಾರ್ ಮೇಜರ್ ಪವನ್ಕುಮರ್ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಆರ್.ಎಸ್ ಪುರ ಪ್ರದೇಶದಲ್ಲಿ ನಡೆದ ಭಾರೀ ಶೆಲ್ ದಾಳಿಯಲ್ಲಿ ಗಾಯಗೊಂಡಿದ್ದ 25 ವರ್ಷದ ರೈಫಲ್‌ಮನ್ ಸುನಿಲ್ ಕುಮಾರ್ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ :ಪಾಕಿಸ್ತಾನಿಯರನ್ನ ಕೇಳಿದ್ರೆ ಬ್ರಹ್ಮೋಸ್ ಕ್ಷಿಪಣಿ ತಾಕತ್ತು ತಿಳಿಯುತ್ತದೆ: ಯೋಗಿ ಆದಿತ್ಯನಾಥ್
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಲ್ಲಿ ಮತ್ತೊಬ್ಬ ಏರ್ಪೋರ್ಸ್ ಅಧಿಕಾರಿ ಸಾವನ್ನಪ್ಪಿದ್ದು. ಇವರು ಸೇನೆಯಲ್ಲಿ ವೈದ್ಯಕೀಯ ಸಿಬ್ಬಂದಿಯಾಗಿ ಉದಮ್ಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು. ನಾಲ್ಕು ದಿನಗಳ ಹಿಂದೆ ಉದಮ್ಪುರಕ್ಕೆ ನಿಯೋಜನೆಗೊಂಡಿದ್ದರು.
ಆರ್.ಎಸ್ ಪುರ ಪ್ರದೇಶದ ಅಂತರರಾಷ್ಟ್ರೀಯ ಗಡಿಯಲ್ಲಿ ಬೀಡುಬಿಟ್ಟಿದ್ದ ಬಿಎಸ್ಎಫ್ ಸಿಬ್ಬಂದಿ ಮೇಲೆ ಪಾಕಿಗಳು ಗುಂಡಿನ ದಾಳಿ ನಡೆಸಿದ್ದು. ಈ ದಾಳಿಯಲ್ಲಿ ಬಿಎಸ್ಎಪ್ ಸಿಬ್ಬಂದಿ ಮೊಹಮ್ಮದ್ ಇಮ್ತಿಯಾಜ್ ಸಾವನ್ನಪ್ಪಿದ್ದರೆ, ಈ ಘಟಕದ 7 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :“ಆಪರೇಷನ್ ಸಿಂಧೂರ” ಕಾರ್ಯಚರಣೆ ಮುಗಿದಿಲ್ಲ: ಅಧಿಕೃತವಾಗಿ ಮಾಹಿತಿ ಹಂಚಿಕೊಂಡ ವಾಯುಪಡೆ
ಏಪ್ರಿಲ್ 22 ರಂದು ಕಾಶ್ಮೀರ ಕಣಿವೆಯಲ್ಲಿ 26 ಜನರ ಪ್ರವಾಸಿಗರನ್ನು ಹತ್ಯೆ ಮಾಡಿದ್ದ ಪ್ರತಿಕಾರವಾಗಿ ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ್ದು. ಇದಾದ ನಂತರ ಎಲ್ಒಸಿ ಮತ್ತು ಅಂತರ್ರಾಷ್ಟ್ರೀಯ ಗಡಿಯುದ್ದಕ್ಕೂ ಭಾರಿ ಶೆಲ್ಲಿಂಗ್ ಮತ್ತು ಗುಂಡಿನ ದಾಳಿ ನಡೆಸಲಾಗುತ್ತಿದೆ.
ಮೇ 10 ರ ಸಂಜೆ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದಕ್ಕೆ ಬಂದಿದ್ದು. –ಆದಾಗ್ಯೂ, ಎರಡೂ ದೇಶಗಳ ನಡುವಿನ ಕದನ ವಿರಾಮ ಒಪ್ಪಂದವನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ, ಪಾಕಿಸ್ತಾನ ಮತ್ತೆ ಅದನ್ನು ಉಲ್ಲಂಘಿಸಿದೆ. ಮೇ 10 ರ ರಾತ್ರಿ ಜಮ್ಮುವಿನ ಹಲವಾರು ಭಾಗಗಳಲ್ಲಿ ಡ್ರೋನ್ ಮೂಲಕ ದಾಳಿ ಮಾಡಲು ಪ್ರಯತ್ನಿಸಿವೆ.