Site icon PowerTV

ಸ್ವಯಂ ಸೇವಕರಾಗಲು ಯುವಕರ ಉತ್ಸಾಹ: ಪ್ರಾಣವನ್ನೇ ನೀಡಲು ಸಿದ್ದವೆಂದ ಯುವಪಡೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಚಂಡೀಗಢ ಆಡಳಿತ ಮಂಡಳಿ 18 ವರ್ಷಕ್ಕಿಂತ ಮೇಲ್ಪಟ್ಟ ಯುವಕರನ್ನು ನಾಕರಿಕ ರಕ್ಷಣಾ ಸ್ವಯಂಸೇವಕರಾಗಿ ಸೇರಲು ಆಹ್ವಾನಿಸಿತ್ತು. ಈ ಆಹ್ವಾನದ ಪರಿಣಾಮ ನೂರಾರು ಯುವಕರು ಇಂದು ಚಂಡಿಗಡದ ಕಛೇರಿ ಮುಂದೆ ಹಾಜರಾಗಿದ್ದು. ಇದು ಈ ದೇಶದ ಯುವಕರ ಸೇವಾಗುಣವನ್ನು ತೋರಿಸುತ್ತದೆ ಎಂದು ANI ಸುದ್ದಿಸಂಸ್ಥೆ ವರದಿ ಮಾಡಿದೆ.

ಚಂಡೀಗಢದ ಸ್ಥಳೀಯ ಅಧಿಕಾರಿಗಳು ಯುವಕರನ್ನು ನಾಗರಿಕ ರಕ್ಷಣಾ ಸ್ವಯಂಸೇವಕರಾಗಲು ಆಹ್ವಾನಿಸಿತ್ತು. ಸ್ವಯಂ ಸೇವಕರಾಗಲು ಆಸಕ್ತಿ ಇರುವ ಯುವಕರು ಮೇ,10 ರ ಬೆಳಿಗ್ಗೆ 10 ಗಂಟೆಗೆ ರವೀಂದ್ರನಾಥ್​ ಟ್ಯಾಗೂರ್​ ಥೇಟರ್​ ಬಳಿ ಸೇರಲು ಆಹ್ವಾನಿಸಲಾಗಿತ್ತು. ಈ ಆಹ್ವಾನದ ಮೇರೆಗೆ ನೂರಾರು ಯುವಕರು ಬಂದಿದ್ದು. ದೇಶದಲ್ಲಿರುವ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಉತ್ಸಾಹ ತೋರಿಸಿದ್ದಾರೆ. ಈ ವೇಳೆ ಅಲ್ಲಿದ್ದ ಯುವಕರು ಪಾಕಿಸ್ತಾನದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ :ಯುದ್ಧದ ಮುನ್ಸೂಚನೆ: ರೈಲು, ಬಸ್​ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ರಾಜ್ಯ ಗುಪ್ತಚರ ಇಲಾಖೆ ಸೂಚನೆ

ಇನ್ನು ಅಲ್ಲಿ ಸೇರಿದ್ದ ಮುಸ್ಕಾನ್​ ಎಂಬ ಯುವತಿಯೊಬ್ಬಳು ಸುದ್ದಿಸಂಸ್ಥೆಗೆ ಹೇಳಿಕೆ ನೀಡಿದ್ದು “ನಾವು ಸೈನ್ಯವನ್ನು ಬೆಂಬಲಿಸಲು ಇಲ್ಲಿದ್ದೇವೆ. ಅವರು ನಮಗಾಗಿ ತುಂಬಾ ಮಾಡುತ್ತಿದ್ದಾರೆ, ಮತ್ತು ನಾವು ನಮ್ಮ ಸೈನ್ಯಕ್ಕಾಗಿ ಏನಾದರೂ ಮಾಡಲು ಬಯಸುತ್ತೇವೆ ಎಂದು ಹೇಳಿಕೆ ನೀಡಿದ್ದಾಳೆ. ಮತ್ತೊಬ್ಬ ಸ್ಥಳೀಯ ಯುವಕ ಕರಣ್ ಚೋಪ್ರಾ ಮಾತನಾಡಿದ್ದು, “ನಾನು ಭಾರತಕ್ಕಾಗಿ ನನ್ನ ಪ್ರಾಣವನ್ನೇ ನೀಡಲು ಸಿದ್ಧನಿದ್ದೇನೆ. ನಾವು ಫಾರ್ಮ್ ಸಲ್ಲಿಸಿದ್ದೇವೆ; ನಮ್ಮಿಂದ ಏನನ್ನು ನಿರೀಕ್ಷಿಸುತ್ತೇವೋ ಅದನ್ನು ಮಾಡಲು ನಾವು ಸಿದ್ಧರಿದ್ದೇವೆ’ ಎಂದು ಹೇಳುದ್ದಾರೆ.

Exit mobile version