Site icon PowerTV

ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ, ಪಾಕಿಗಳ ಸುಳ್ಳಿಗೆ ಸ್ಪಷ್ಟನೆ ಕೊಟ್ಟ ವಿದೇಶಾಂಗ ಇಲಾಖೆ

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಉದ್ವಿಘ್ನತೆ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಶ್ರಿ, ಕರ್ನಲ್​ ಸೋಫಿಯಾ ಖುರೇಷಿ ಮತ್ತು ವಿಂಗ್​ ಕಮಾಂಡರ್​ ವ್ಯೋಮಿಕಾ ಸಿಂಗ್​ ಪತ್ರಿಕಾ ಗೋಷ್ಟಿಯಲ್ಲಿ ರಾಷ್ಟ್ರಕ್ಕೆ ಮಾಹಿತಿ ನೀಡಿದ್ದು. ಪಾಕಿಸ್ತಾನ ಹರಡುತ್ತಿರುವ ಸುಳ್ಳುಗಳಿಗೆ ಸ್ಪಷ್ಟನೆ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅಧಿಕಾರಿಗಳು ‘ ಪಾಕಿಸ್ತಾನ ಭಾರತದ ಪಶ್ಚಿಮ ಭಾಗಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ದಾಳಿಯು ಎರಡು ರಾಷ್ಟ್ರಗಳ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶವನ್ನು ಹೊಂದಿರುವಂತೆ ತೋರುತ್ತದೆ. ಭಾರತೀಯ ಸಶಸ್ತ್ರ ಪಡೆಗಳು ಹೆಚ್ಚಿನ ಕಾರ್ಯಾಚರಣೆಯ ಸನ್ನದ್ಧ ಸ್ಥಿತಿಯಲ್ಲಿವೆ ಮತ್ತು ಎಲ್ಲಾ ಪ್ರತಿಕೂಲ ಕ್ರಮಗಳನ್ನು ಪರಿಣಾಮಕಾರಿಯಾಗಿ ಎದುರಿಸಲಾಗಿದೆ ಮತ್ತು ಪ್ರಮಾಣಾನುಗುಣವಾಗಿ ಪ್ರತಿಕ್ರಿಯಿಸಲಾಗಿದೆ ಎಂದು ಹೇಳಿದರು. ಇದನ್ನು ಓದಿ:ಪಾಕಿಸ್ತಾನದ ಫತಾಹ್-II ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿದ ಭಾರತ

ಮುಂದುವರಿದು ಮಾತನಾಡಿದ ಅವರು ‘ಪಾಕಿಸ್ತಾನ ಶನಿವಾರ ಮೇ.10) ಮುಂಜಾನೆ ಹಲವಾರು ಪಂಜಾಬ್ ವಾಯುನೆಲೆಗಳ ಮೇಲೆ ಹೈಸ್ಪೀಡ್ ಕ್ಷಿಪಣಿಗಳ ಮೂಲಕ ದಾಳಿ ಮಾಡಿತು ಮತ್ತು ವೈದ್ಯಕೀಯ ಸೌಲಭ್ಯಗಳು ಮತ್ತು ಶಾಲೆಗಳನ್ನು ಸಹ ಗುರಿಯಾಗಿಸಿಕೊಂಡಿತು. ಪಾಕಿಸ್ತಾನವು ಪಶ್ಚಿಮ ಭಾಗದಲ್ಲಿ ನಿರಂತರ ದಾಳಿ ನಡೆಸುತ್ತಿದೆ. ಉಧಮ್‌ಪುರ, ಪಠಾಣ್‌ಕೋಟ್, ಭುಜ್ ಮತ್ತು ಬಟಿಂಡಾದಲ್ಲಿನ ವಾಯುನೆಲೆಗಳನ್ನೂ ಗುರಿಯಾಗಿಸಿಕೊಂಡಿದೆ.

ಭಾರತದ ವಾಯುನೆಲೆಗಳನ್ನು ಧ್ವಂಸ ಮಾಡಲಾಗಿದೆ ಎಂಬ ಪಾಕಿಸ್ತಾನದ ಸುದ್ದಿಗಳು ಸುಳ್ಳು ಎಂದ ಮಿಸ್ರಿ, ಭಾರತದ ಎಲ್ಲ ವಾಯುನೆಲೆಗಳು ಸುರಕ್ಷಿತವಾಗಿವೆ ಎಂದು ದೃಢಪಡಿಸಿದರು. ಆದರೆ, ಪಾಕಿಸ್ತಾನವು ನಾಗರಿಕರನ್ನು, ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ ಎಂಬುದನ್ನು ಒಪ್ಪಿಕೊಂಡ ಅವರು, ಪಾಕಿಸ್ತಾನದ ಎಲ್ಲ ದಾಳಿಗಳನ್ನು ತಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿಯಾಗಿ ಪಾಕಿಸ್ತಾನದ ಮುರಿದ್, ರಫೀಕಿ, ನೂರ್ ಖಾನ್ (ಚಕ್ಲಾಲಾ), ರಹಿಮ್ಯಾರ್, ಸುಕ್ಕೂರ್ (ಭೋಲಾರಿ) ಮತ್ತು ಚುನಿಯನ್ ಏರ್‌ಬೇಸ್‌ಗಳನ್ನು ಭಾರತೀಯ ವಾಯುಪಡೆ ಧ್ವಂಸ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ :ಪಾಕ್​ನಿಂದ ಶೆಲ್​ ದಾಳಿ: ಜಮ್ಮುವಿನ ಹಿರಿಯ ಅಧಿಕಾರಿ ಸೇರಿದಂತೆ, ಇಬ್ಬರು ನಾಗರಿಕರು ಸಾ*ವು

ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಭಾರತ ಪ್ರತಿಕ್ರಿಯಿಸಿದೆ: ವಿಕ್ರಮ್​ ಮಿಶ್ರಿ

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿಕ್ರಮ್​ ಮಿಶ್ರಿ ‘ ಪಾಕಿಸ್ತಾನದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ, ಭಾರತವು ಪ್ರಮಾಣಕ್ಕನುಗುಣವಾಗಿ ಪ್ರತಿಕ್ರಿಯಿಸಿದೆ. ಪಾಕಿಸ್ತಾನವು ಭಾರತದ ಗಡಿ ರಾಜ್ಯಗಳಲ್ಲಿ ಮಿಲಿಟರಿ ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಡ್ರೋನ್​ ದಾಳಿ ನಡೆಸಿದೆ. ಈ ಎಲ್ಲಾ ದಾಳಿಗಳನ್ನ ಭಾರತ ತಡೆದಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನ ಭಾರತದ ಸೇನಾ ನೆಲೆಗಳನ್ನು ನಾಶಪಡಿಸಿವೆ ಮತ್ತು ಭಾರತದ ಆನ್​ಲೈನ್​ ವ್ಯವಸ್ಥೆಗಳ ಮೇಲೆ ಸೈಬರ್​ ದಾಳಿ ನಡೆಸಿದೆ ಎಂದು ಪಾಕಿಗಳು ಸುಳ್ಳು ಹರಡುತ್ತಿದ್ದಾರೆ ಎಂದು ವಿಕ್ರಂ ಮಿಶ್ರಿ ಹೇಳಿದರು.

Exit mobile version