Site icon PowerTV

ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ; ವರ್ಷಕ್ಕೆ 80-100 ಕ್ಷಿಪಣಿಗಳ ಉತ್ಪಾದನೆ

ಭಾರತದ DRDO ಮತ್ತು ರಷ್ಯಾದ NPO ಜಂಟಿಯಾಗಿ ನಿರ್ಮಿಸಿರುರ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ತಯಾರಿಕ ಘಟಕವನ್ನು ಉತ್ತರ ಪ್ರದೇಶದಲ್ಲಿ ತೆರಯಲಾಗುತ್ತಿದ್ದು. ಈ ಉತ್ಪಾದನ ಘಟಕವನ್ನು ಮೇ.11ರಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಉದ್ಘಾಟಿಸಲಿದ್ದಾರೆ.

ಭಾರತದ ಬತ್ತಳಿಕೆಯಲ್ಲಿರುವ ಕೆಲವು ಅತ್ಯಮೂಲ್ಯ ಶಸ್ತ್ರಗಳಲ್ಲಿ ಬ್ರಮೋಸ್​ ಕೂಡ ಒಂದಾಗಿದ್ದು. ಈ ಕ್ಷಿಪಣಿ ಉತ್ಪಾದಕ ಘಟಕ ಉತ್ತರಪ್ರದೇಶದಲ್ಲಿ ಸ್ಥಾಪನೆಯಾಗಿದೆ. ಮೇ 11 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು ಉದ್ಘಾಟಿಸಲಿದ್ದಾರೆ, ಈ ಉತ್ಪಾದನ ಘಟಕದಲ್ಲಿ ವಾರ್ಷಿಕವಾಗಿ 80 ರಿಂದ 100 ಕ್ಷಿಪಣಿಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.

ಇದನ್ನೂ ಓದಿ :ಗಡಿ ಕಾಯುವ ಯೋಧರಿಗೆ ಉಚಿತ ಟ್ಯಾಕ್ಸಿ ವ್ಯವಸ್ಥೆ; ಟ್ಯಾಕ್ಸಿ ಯೂನಿಯನ್​ ಘೋಷಣೆ

2018 ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿ ಈ ಉತ್ಪಾದನ ಘಟಕವನ್ನು ಸ್ಥಾಪನೆ ಮಾಡಿದ್ದು. 2021ರಲ್ಲಿ ಇದಕ್ಕೆ ಶಿಲನ್ಯಾಸ ನೆರವೇರಿಸಲಾಗಿತ್ತು. ಸುಮಾರು 300 ಕೋಟಿ ಮೌಲ್ಯದಲ್ಲಿ ಈ ಉತ್ಪಾದನ ಘಟಕ ನಿರ್ಮಿಸಲಾಗಿದೆ. ಈ ಯೋಜನೆಯ ಭಾಗವಾಗಿ ಉತ್ತರಪ್ರದೇಶ ಸರ್ಕಾರ ರಕ್ಷಣ ಕಾರಿಡಾರ್​ಗೆ ಸುಮಾರು 1,600 ಹೆಕ್ಟೇರ್ ಭೂಮಿಯನ್ನು ಹಂಚಿಕೆ ಮಾಡಲಾಗಿದ್ದು, ದೊಡ್ಡ ಕಂಪನಿಗಳು ಈಗಾಗಲೇ ಎಂಒಯುಗಳಿಗೆ ಸಹಿ ಹಾಕಿವೆ. ಅಷ್ಟೇ ಅಲ್ಲದೇ BHELನ ಒಂದು ಘಟಕವನ್ನ ಇಲ್ಲಿ ಸ್ಥಾಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಭಾರತದಿಂದ ತೀವ್ರ ಪ್ರತಿದಾಳಿ: ಮಾತುಕತೆಗೆ ಮುಂದಾದ ಪಾಕಿಸ್ತಾನ..!

ಬ್ರಹ್ಮೋಸ್ ಘಟಕಕ್ಕೆ ಸುಮಾರು 80 ಎಕರೆಗಳನ್ನು ಹಂಚಿಕೆ ಮಾಡಲಿದ್ದರೆ, ಲಕ್ನೋ ನೋಡ್‌ನಲ್ಲಿರುವ 12 ಕಂಪನಿಗಳಿಗೆ ಒಟ್ಟು 117 ಹೆಕ್ಟೇರ್ ಭೂಮಿಯನ್ನು ನೀಡಲಾಗಿದೆ, ಇದರಲ್ಲಿ ಏರೋಲಾಯ್ ಟೆಕ್ನಾಲಜೀಸ್ ಕೂಡ ಸೇರಿದೆ, ಅವರ ಉತ್ಪನ್ನಗಳನ್ನು ಚಂದ್ರಯಾನದಂತಹ ಬಾಹ್ಯಾಕಾಶ ಯಾತ್ರೆಗಳಲ್ಲಿ ಮತ್ತು ಯುದ್ಧ ವಿಮಾನಗಳಲ್ಲಿ ಬಳಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Exit mobile version